ತರೀಕೆರೆಎಲ್ಲರನ್ನೂ ಪ್ರೀತಿಸಬೇಕು. ಎಲ್ಲರ ಮನೆ ಮಗನಾಗಿ ಸಮಾಜಮುಖಿ ಕೆಲಸ ಮಾಡಿದರೆ ಇಂದಲ್ಲ ನಾಳೆ ಜನರು ಗುರುತಿಸುತ್ತಾರೆ ಎಂದು ಯಗಟಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.

ತರೀಕೆರೆಯಲ್ಲಿ ಅಂಚೆ ವೆಂಕಟರಾಮಯ್ಯ,ಶ್ರೀಮತಿ ಸೀತಮ್ಮಇವರ ಜನ್ಮಶತಕದ ಸ್ಮರಣಾರ್ಥ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಎಲ್ಲರನ್ನೂ ಪ್ರೀತಿಸಬೇಕು. ಎಲ್ಲರ ಮನೆ ಮಗನಾಗಿ ಸಮಾಜಮುಖಿ ಕೆಲಸ ಮಾಡಿದರೆ ಇಂದಲ್ಲ ನಾಳೆ ಜನರು ಗುರುತಿಸುತ್ತಾರೆ ಎಂದು ಯಗಟಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.ಬುಧವಾರ ಅಂಚೆ ಪ್ರತಿಷ್ಠಾನದಿಂದ ಪ್ರತಿಷ್ಠಾನದಿಂದ ನಡೆದ ಖ್ಯಾತ ಹಾರ್ಮೋನಿಯಂ ಕಲಾವಿದ ಮತ್ತು ಶ್ರೀರಾಮ ಭಜನಾ ಆರಾದಕ 125ನೇ ಜನ್ಮಶತಕದ ಅಂಚೆ ವೆಂಕಟರಾಮಯ್ಯ ಮತ್ತು 107ನೇ ಜನ್ಮ ಶತಕದ ಸಹಧರ್ಮಿಣಿ ಶ್ರೀಮತ್ತಿ ಸೀತಮ್ಮ ಇವರ ಜನ್ಮಶತಕದ ಸ್ಮರಣಾರ್ಥ ನಡೆದ ಅಂಚೆ ಸಭಾಭವನದ ನಾಮಫಲಕ ಹಾಗೂ ಕೀರ್ತಿಶೇಷ ದಂಪತಿಗಳ ಭಾವಚಿತ್ರ ಅನಾವರಣ, ಶ್ರೀ ದತ್ತ ಜಯಂತಿ, ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅಂಚೆ ಪ್ರತಿಷ್ಠಾನ ಕಾರ್ಯಕ್ರಮ ಸಮಾಜಮುಖಿಯಾಗಿದೆ. ಪ್ರತಿಷ್ಠಾನದಿಂದ ಶ್ರೀ ದತ್ತ ಹೋಮ ಹವನ ಪೂಜೆ ನಡೆದಿದೆ. ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವಿಶೇಷತೆಯನ್ನು ಹೊಂದಿದೆ. ಸಮುದ್ರದ ತಳ ಶೋಧಿಸಿದರೆ ಮುತ್ತುರತ್ನಗಳೆ ದೊರೆಯುತ್ತವೆ. ಅಂಚೆ ಮನೆತನದ ಹಿರಿಯ ಚೇತನರ ಹೆಜ್ಜೆ ಗುರುತುಗಳು ಅನನ್ಯ. ಅಂಚೆ ಪ್ರತಿಷ್ಠಾನ ಸಮಾಜದ ಎ್ಲಲಾ ಸಮುದಾಯದವರ ಪ್ರೀತಿ ವಿಶ್ವಾಸ ಗಳಿಸಿದೆ. ಹೃದಯ ವೈಶಾಲ್ಯತೆ ಮೆರೆದಿದೆ. ಸಾತ್ವಿಕ ಸಂಸ್ಕಾರ ದಿಂದ ಬದುಕು ಕಟ್ಟಿಕೊಳ್ಳಬೇಕು., ವಿಶ್ವಾಸ ಮತ್ತು ದೈವಭಗಕ್ತಿಯಿಂದ ಬದುಕಬೇಕು ಎಂದು ಅವರು ಹೇಳಿದರು. ಗ್ರಂಥಗಳನ್ನು ಅಧ್ಯಯನ ಮಾಡಿದರೆ ಸಂಸ್ಕೃತಿ ಸಹೃದಯತೆ ಬರುತ್ತದೆ ವಿಶ್ವಾಸ ಮತ್ತು ದೈವಭಕ್ತಿಯಿಂದ ಬದುಕ ಬೇಕು. ಶಾರದ ವಿಲಾಸ ಕಾಲೇಜು ವಿಶ್ರಾಂತ ಉಪನ್ಯಾಸಕ ಎ.ವಿ.ಸೂರ್ಯನಾರಾಯಣ ಸ್ವಾಮಿ, ಪ್ರತಿಷ್ಠಾನದ ಕಾರ್ಯಾದ್ಯಕ್ಷ ಎ.ವಿ.ನಾಗಭೂಷಣ್ ,ಮಾಜಿ ಪುರಸಭಾಧ್ಯಕ್ಷ ಎನ್.ಮಂಜುನಾಥ್ ನನಗೆ ಹಿರಿಯ ಮಾರ್ಗದರ್ಶಕ ಮತ್ತು ಖ್ಯಾತ ಗಮಕ ಕಲಾದಿದೆ ಶಾರದ ಎನ್.ಮಂಜುನಾಥ್ ಅವರೊಡನೆ ಗಮಕ ವಾಚನ ವ್ಯಾಖ್ಯಾನ ನಡೆಸಿಕೊಟ್ಟಿದ್ದೇನೆ ಎಂದು ಹೇಳಿದರುಮೈಸೂರು ಶಾರದ ವಿಲಾಸ ಕಾಲೇಜು ವಿಶ್ರಾಂತ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಎ.ವಿ. ಸೂರ್ಯ ನಾರಾಯಣ ಸ್ವಾಮಿ ಮಾತನಾಡಿ ಸಮಾರಂಭ ತಮಗೆ ಹೆಚ್ಚು ಆನಂದ ತಂದುಕೊಟ್ಟಿದೆ, ಹೋಮ ಹವನ ನಡೆದಿದೆ, ವೇದ ವಾಕ್ಯಗಳನ್ನು ನಾವು ಅನುಸರಿಸಬೇಕು. ನಮ್ಮ ತಂದೆ ಅಂಚೆ ವೆಂಕಟರಾಮಯ್ಯ 1899ರಲ್ಲಿ ಬೆಂಗಳೂರಿನಲ್ಲಿ ಪ್ರೌಢಶಾಲೆ ವಿದ್ಯಾಭ್ಯಾಸ ಮಾಡಿದರು, ಅನೇಕ ವಿದ್ವಾಂಸರ ಹರಿಕಥಾ ಕಾರ್ಯಕ್ರಮಕ್ಕೆ ನಮ್ಮ ತಂದೆ ಹಾರ್ಮೋನಿಯಂ ನುಡಿಸಿದರು, ಅವರು ದೇವರ ಭಜನೆಗೆ ನುಡಿಸುತ್ತಿದ್ದ ತಾಳನಾದದಲ್ಲಿ ವಿಶೇಷತೆ ಇತ್ತು, ಅವರಲ್ಲಿ ದೇವರ ಧ್ಯಾನ ತನ್ಮಯತೆ ಇತ್ತು. ತಂದೆಯವರ ಆಶೀರ್ವಾದದ ಶ್ರೀರಕ್ಷೆ ನಮ್ಮನ್ನು ಕಾಪಾಡುತ್ತಿದೆ ಎಂದು ಹೇಳಿದರು.ಬೆಂಗಳೂರು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಪ್ರಾಧ್ಯಾಪಕ ಮತ್ತು ನಿರ್ದೇಶಕ ಟಿ.ಎನ್.ಪ್ರಭಾಕರ್ ಅಂಚೆ ಮನೆತನದ ಬಾಳಿ ಬದುಕಿದವರ ಹೆಜ್ಜೆಗುರುತುಗಳು ಬಿಡುಗಡೆ ಮಾಡಿ ಮಾತನಾಡಿ ಪಟ್ಟಣದಲ್ಲಿ ನಡೆಯುತ್ತಿದ್ದ ಗ್ರಾಮ ಸಂಕೀರ್ತನೆ, ಸಂಸ್ಕೃತ ಸುಭಾಷಿತಗಳ ಪಠಣ ಇವೆಲ್ಲವೂ ನನಗೆ ನೆನಪಾಗುತ್ತದೆ. ಮಹಾಭಾರತ ಮಹತ್ವದ್ದಾಗಿದೆ, ಸಂಸ್ಕೃತವನ್ನು ಪಾಶ್ಯಾತ್ಯರು ಬಂದು ಕಲಿಯುತ್ತಿದ್ದಾರೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಪರರ ಉಪಕಾರಕ್ಕಾಗಿ ಜೀವನ ನಡೆಸಬೇಕು. ಅತಿಥಿಗಳನ್ನು ದೇವರಂತೆ ಕಾಣಬೇಕು ಎಂದು ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ ವಿಶ್ರಾಂತ ಕನ್ನಡ ಉಪನ್ಯಾಸಕ ಎ.ವಿ. ಸೂರ್ಯ ನಾರಾಯಣಸ್ವಾಮಿ ಅವರು ಬೀರೂರು ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂಚೆ ನಾಗಭೂಷಣ್ ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಜನರ ಬೆಳವಣಿಗೆಗೆ ಸಹಕರಿಸಿದ್ದಾರೆ. ಅವರ ಈ ಪ್ರವೃತ್ತಿ ಹೆಚ್ಚಾಗಲಿ ಎಂದು ಹೇಳಿದರು.ಹಿರಿಯರಾದ ಡಿ.ಶಂಕರನಾರಾಯಣ ಮಾತನಾಡಿದರು. ವೇ.ಬ್ರ.ಶ್ರೀ.ಕೃಷ್ಣಭಟ್, ಹಿರಿಯರಾದ ಡಿ.ಶಂಕರನಾರಾಯಣ, ಮಾಜಿ ಪುರಸಭಾಧ್ಯಕ್ಷ ಎನ್.ಮಂಜುನಾಥ್, ಶಾರದ ಎನ್.ಮಂಜುನಾಥ್ ಅವರನ್ನು ಪ್ರತಿಷ್ಠಾನದಿಂದ ಸನ್ಮಾನಿಸ ಲಾಯಿತು. ಪ್ರತಿಭಾ ಪುರಸ್ಕಾರ ನಡೆಯಿತು.ಅಂಚೆ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ, ಖಚಾಂಚಿ ಎಚ್.ವಿ. ಸತ್ಯನಾರಾಯಣ್, ಶಾರದ ಎನ್.ಮಂಜುನಾಥ್, ಅಜ್ಜಂಪುರ ರೇವಣ್ಣ, ಕನ್ನಡಶ್ರೀ ಬಿ.ಎಸ್.ಭಗವಾನ್,ನವೀನ್ ಕುಮಾರ್, ರಾಘವೇಂದ್ರ,, ಅಂಚೆ ಮನೆತನದ ಸದಸ್ಯರು ಭಾಗವಹಿಸಿದ್ದರು.--3ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ಅಂಚೆ ಪ್ರತಿಷ್ಠಾನದಿಂದ ನಡೆದ ಕಾರ್ಯಕ್ರಮವನ್ನು ಮಾಜಿ ಶಾಸಕ, ವೈ.ಎಸ್.ವಿ.ದತ್ತ ಉದ್ಘಾಟಿಸಿದರು. ವಿಶ್ರಾಂತ ಕನ್ನಡ ಉಪನ್ಯಾಸಕ ಎ.ವಿ.ಸೂರ್ಯನಾರಾಯಣಸ್ವಾಮಿ, ಅಂಚೆ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎ.ವಿ. ನಾಗಭೂಷಣ್, ಪುರಸಭಾ ಮಾಜಿ ಅ ಧ್ಯಕ್ಷ ಎನ್.ಮಂಜುನಾಥ್, ಪ್ರಾಧ್ಯಾಪಕ ಟಿ.ಎನ್.ಪ್ರಭಾಕರ್ ಮತ್ತಿತರರು ಇದ್ದರು.