ಸಾರಾಂಶ
ಮಾನ್ವಿ: ತಾಲೂಕಿನಲ್ಲಿ ಸಂಭ್ರಮ ದಿಂದ ಮಕರ ಸಂಕ್ರಮಣ ಹಬ್ಬವನ್ನು ಆಚಾರಿಸಲಾಯಿತು. ವಿವಿಧ ಗ್ರಾಮಗಳ ಜನರು ತುಂಗಭದ್ರನದಿ ಹರಿಯುವ ಚೀಕಲಪರ್ವಿ, ಯಡಿವಾಳ, ಮದ್ಲಾಪುರ, ಕಾತರಕಿ ಗ್ರಾಮಗಳಲ್ಲಿ ಸಾವಿರಾರು ಜನರು ನದಿಯಲ್ಲಿ ಪುಣ್ಯಸ್ನಾನವನ್ನು ಮಾಡಿ ನದಿ ದಂಡೆಯಲ್ಲಿ ಪುಣ್ಯಸ್ನಾನವನ್ನು ಮಾಡಿ ನದಿ ದಂಡೆಯಲ್ಲಿಯೇ ತಾವು ತಂದ ಆಹಾರವನ್ನು ಸಾಮೂಹಿಕವಾಗಿ ಸವಿದರು. ಸಂಕ್ರಾಂತಿ ಹಬ್ಬಕ್ಕೆಂದೆ ಮಾಡಿದ ಶೇಂಗ ಹೊಳಿಗೆ, ಹುಗ್ಗಿ, ವಿವಿಧ ತರಕಾರಿಗಳಿಂದ ಮಾಡಿದ ಭರ್ತ ಹಾಗೂ ಜೋಳ, ಸಜ್ಜಿ ರೊಟ್ಟಿ, ಚಿತ್ರಾನ್ನ ಸೇರಿದಂತೆ ವಿಶೇಷವಾದ ಭೋಜನವೇ ಇತ್ತು. ಈ ಬಾರಿ ತುಂಗಭದ್ರ ನದಿಯಲ್ಲಿ ನೀರಿನ ಕೋರತೆಯಿದ್ದರು ಕೂಡ ಸೂರ್ಯನ್ನು ತನ್ನ ಪಥವನ್ನು ಬದಲಿಸುವ ಸಂಕ್ರಾಂತಿ ಅಂಗವಾಗಿ ನದಿಯ ನೀರಿನಿಂದ ಸೂರ್ಯನಿಗೆ ಅರ್ಗ್ಯವನ್ನು ಸಮರ್ಪಿಸಿದಲ್ಲಿ ವಿಶೇಷ ಪುಣ್ಯ ಫಲಗಳು ದೊರೆಯುತ್ತವೆ ಎನ್ನುವ ನಂಬಿಕೆಯಿಂದ ಸಾವಿರಾರು ಜನರು ಇಂದು ನದಿಯಲ್ಲಿ ಸ್ನಾನ ಮಾಡಿದರು.
ರುದ್ರಮುನಿ ಶಿವಯೋಗಿಗಳ ಮಠದಲ್ಲಿ ಸಂಕ್ರಾಂತಿ ಹಬ್ಬ, ದಾಸೋಹಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ರುದ್ರಮುನಿ ಶಿವಯೋಗಿಗಳ ಮಠದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ರುದ್ರಮುನಿ ಶಿವಯೋಗಿಗಳ ಕತೃ ಗದ್ದುಗೆಗೆ ಅಭಿಷೇಕ, ಮಹಾಮಂಗಳಾರತಿ, ವಿಶೆಷ ಅಲಂಕಾರ ಮಾಡಲಾಯಿತು. ಸಾವಿರಾರು ಭಕ್ತರು ಗದ್ದುಗೆ ದರ್ಶನ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಮಠದ ಸದಾಶಿವ ಸ್ವಾಮಿಗಳು ಆರ್ಶೀವಚನ ನೀಡಿ ಪವಿತ್ರವಾದ ತುಂಗಭದ್ರನದಿಯ ದಡದಲ್ಲಿ ರುದ್ರಮುನಿ ಶಿವಯೋಗಿಗಳ ಮಠದ ಹಿರಿಯ ಶ್ರೀಗಳಾದ ಲಿಂ.ವಿರೂಪಾಕ್ಷ ಮಹಾಸ್ವಾಮಿಗಳು ಶ್ರೀ ಮಠದ ಪರಂಪರೆಯಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ನದಿಯಲ್ಲಿ ಪುಣ್ಯ ಸ್ನಾನವನ್ನು ಮಾಡಿ ಗದ್ದುಗೆಯ ದರ್ಶನ ಪಡೆವ ಭಕ್ತರಿಗೆ ಶುಭಾರ್ಶೀವಾದವನ್ನು ನೀಡಿ ಹಾರೈಸಿ ಮಹಾ ಪ್ರಸಾದದ ದಾಸೋಹ ನೀಡುತ್ತ ಬಂದಿದ್ದಾರೆ ಅವರ ಮಾರ್ಗದರ್ಶನದಂತೆ ಭಕ್ತರಿಗೆ ಆನ್ನದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ ಸೂರ್ಯದೇವನ್ನು ಪ್ರತಿಯೋಬ್ಬರಿಗು ಉತ್ತಮವಾದ ಫಲಗಳನ್ನು ನೀಡಲಿ ಎಂದು ತಿಳಿಸಿದರು. ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಶ್ರೀಧರ ಸ್ವಾಮಿ ಪುರಸಭೆ ಸದಸ್ಯರಾದ ರೇವಣ ಸಿದ್ದಯ್ಯಸ್ವಾಮಿ, ಶಿವಶಂಕರಯ್ಯ ಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಶ್ರೀ ಮಠದಲ್ಲಿ ಪೂಜೆ ಸಲ್ಲಿಸಿದರು.ಸಿಂಧನೂರಿನಲ್ಲಿ ಮಕರ ಸಂಕ್ರಮ ಹಬ್ಬ ಭಕ್ತಿಯಿಂದ ಆಚರಣೆ
ಸಿಂಧನೂರು: ತಾಲೂಕಿನಾದ್ಯಂತ ಸುಗ್ಗಿ ಹಬ್ಬ ಮಕರ ಸಂಕ್ರಮಣ ಹಬ್ಬದ ನಿಮಿತ್ತ ಸೋಮವಾರ ತುಂಗಭದ್ರಾ ನದಿಗೆ ತೆರಳಿ ಸಾವಿರಾರು ಜನ ಪುಣ್ಯ ಸ್ನಾನ ಮಾಡಿ ಭಕ್ತಿಭಾವದಿಂದ ಹಬ್ಬ ಆಚರಿಸಿದರು.ತಾಲೂಕಿನ ಮುಕ್ಕುಂದಾ, ವಳಬಳ್ಳಾರಿ, ಸಿರುಗುಪ್ಪಾ ಹತ್ತಿರದ ಕೆಂಚನಗುಡ್ಡ, ದಢೆಸುಗೂರು ಗ್ರಾಮಗಳ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಎಣ್ಣೆ ಹಾಗೂ ಎಳ್ಳು ಹಚ್ಚಿಕೊಂಡು ಸ್ನಾನ ಮಾಡಿದರು.
ಉಪ್ಪಾರವಾಡಿ, ಬ್ರಾಹ್ಮಣರ ಓಣಿ, ಸುಕಾಲಪೇಟೆ, ಪ್ರಶಾಂತ ನಗರ, ಪಟೇಲವಾಡಿ, ನಟರಾಜ್ ಕಾಲೋನಿ, ಇಂದಿರಾನಗರ, ಕೋಟೆ, ಜನತಾ ಕಾಲೋನಿ, ಆದರ್ಶ ಕಾಲೋನಿ, ಅಂಬೇಡ್ಕರ್ ನಗರ ಮತ್ತಿತರ ಕಡೆಗಳಲ್ಲಿ ಪುಟಾಣಿ ಮಕ್ಕಳು ಸಂಜೆ ಮನೆ ಮನೆಗೆ ತೆರಳಿ ಎಳ್ಳು ಮತ್ತು ಸಕ್ಕರೆ ಮಿಶ್ರಣವಾಗಿರುವುದನ್ನು ಸಂಬಂಧಿಕರಿಗೆ, ಗೆಳೆತಿಯರಿಗೆ ಕೊಡುವ ಮೂಲಕ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳಿ ಎಳ್ಳು ಸಕ್ಕರೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು.ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ತಮ್ಮ ತಮ್ಮ ನಿವಾಸಗಳ ಮುಂದೆ ವೈವಿಧ್ಯಮಯ ರಂಗೋಲಿ ಚಿತ್ತಾರಗಳನ್ನು ಬಿಡಿಸಿ ಸಭ್ರಮಿಸಿದರು.