ಸಾರಾಂಶ
ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಟಿಜಿಟಲ್ ಸ್ಟಾರ್ಟರ್ ರಿಪೇರಿಯಾದ ಬಳಿಕ ಗುಂಡ್ಲುಪೇಟೆಗೆ ಕಬಿನಿ ನೀರು ಬಂದಿಲ್ಲ. ಕಬಿನಿ ನೀರಿಲ್ಲದೆ ಪಟ್ಟಣದ ನಾಗರೀಕರು ಪರದಾಡುತ್ತಿದ್ದಾರೆ. ಪುರಸಭೆ ನಿರ್ಲಕ್ಷ್ಯದ ಫಲವಾಗಿ ಜನ ಕಬಿನಿ ನೀರಿಲ್ಲದೆ ಇದ್ರೂ ಜಿಲ್ಲಾಡಳಿತ ಪುರಸಭೆ ನಿರ್ಲಕ್ಷ್ಯದ ಬಗ್ಗೆ ಮೃದು ದೋರಣೆ ತೋರಿದೆ ಎಂದು ನಾಗರೀಕರು ಆರೋಪಿಸಿದ್ದಾರೆ. ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿ ಬರೋಬ್ಬರಿ ಒಂದು ತಿಂಗಳಾಗುತ್ತಿದೆ. ಡಿಜಿಟಲ್ ಸ್ಟಾರ್ಟರ್ ಕೆಟ್ಟ ಬಳಿಕ ಸ್ಟಾರ್ಟರ್ ರಿಪೇರಿ ಆಗುವ ಹೆಚ್ಚುವರಿ ಸ್ಟಾರ್ಟರ್ ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದರೆ ಪಟ್ಟಣದ ಜನತೆಗೆ ನೀರಿನ ಹಾಹಾಕಾರ ಇರುತ್ತಿರಲಿಲ್ಲ!ಸಿಂಧುವಳ್ಳಿ, ದೇಬೂರು ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿತ್ತು. 25 ದಿನಗಳಾದರೂ ರಿಪೇರಿ ಆಗಲಿಲ್ಲ. ಸ್ಟಾರ್ಟರ್ ರಿಪೇರಿ ಮಾಡುತ್ತಿದ್ದ ಗುತ್ತಿಗೆದಾರನಿಗೆ ಪುರಸಭೆ ಹಣ ನೀಡದ ಕಾರಣ ಆಕ್ರೋಶಗೊಂಡ ಗುತ್ತಿಗೆದಾರ ಕೂಡ ಮೊದಲು ರಿಪೇರಿ ಮಾಡಲಿಲ್ಲ. ನಂತರ 25 ದಿನಗಳ ನಂತರ ಗುತ್ತಿಗೆದಾರನ ಮನವೊಲಿಸಿ ಹಳೆಯ ಬಾಕಿ ಹಣ ನೀಡುತ್ತೇವೆ ಎಂದು ಭರವಸೆ ನೀಡಿದ ಬಳಿಕ 2 ಡಿಜಿಟಲ್ ಸ್ಟಾರ್ಟರ್ ರಿಪೇರಿ ಆಗಿವೆ. ರಿಪೇರಿ ಆದ ಬಳಿಕ ನೀರು ಕೂಡ ತಗ್ಗಲೂರು ಪಂಪ್ ಹೌಸ್ ಗೆ ಬಂದಿತು. ತಗ್ಗಲೂರಿನ ಡಿಜಿಟಲ್ ಸ್ಟಾರ್ಟರ್ ರಿಪೇರಿಗೊಂಡಿತು. ರಿಪೇರಿ ಆದರೂ ಮತ್ತೆ ಕೆಟ್ಟು ನಿಂತಿತು. ಈಗ ಹೊಸ ಸ್ಟಾರ್ಟರ್ ಖರೀದಿಗೆ ಟೆಂಡರ್ ಕರೆದ ಬಳಿಕ ಮಾ.15 ರಂದು ಟೆಂಡರ್ ಕೂಡ ಓಪನ್ ಆಗಿದೆ. ಹೊಸ ಸ್ಟಾರ್ಟರ್ ಖರೀದಿಸಿ ತರುವ ತನಕ ಗುಂಡ್ಲುಪೇಟೆಗೆ ಕಬಿನಿ ನೀರು ಕನಸಿನ ಮಾತೇ ಸರಿ.
ಇನ್ನೂ ವರ್ಕ್ ಆರ್ಡರ್ ಕೊಟ್ಟಿಲ್ಲ!ಗುಂಡ್ಲುಪೇಟೆ: ಪುರಸಭೆ ಡಿಜಿಟಲ್ ಸ್ಟಾರ್ಟರ್ ಖರೀದಿಗೆ ಟೆಂಡರ್ ಕರೆದಿತ್ತು. ಮಾ.15 ರಂದು ಟೆಂಡರ್ ಕೂಡ ಓಪನ್ ಆಗಿದೆ. ಟೆಂಡರ್ ಓಪನ್ ಆದ ಬಳಿಕ ಟೆಂಡರ್ ದಾರನಿಗೆ ವರ್ಕ್ ಆರ್ಡರ್ ಕೊಟ್ಟಿದ್ದರೆ ಹೊಸ ಸ್ಟಾರ್ಟರ್ ಖರೀದಿಸಿ ತಂದು ತಗ್ಗಲೂರು ಪಂಪ್ ಹೌಸ್‌ನಲ್ಲಿ ಅಳವಡಿಸಿದ್ದರೆ ಗುಂಡ್ಲುಪೇಟೆಗೆ ನೀರು ಬರುತ್ತಿತ್ತು. ಗುಂಡ್ಲುಪೇಟೆಗೆ ಕಬಿನಿ ನೀರು ಇತಿಹಾಸದಲ್ಲಿ ಎಂದೂ ತಿಂಗಳು ಗಟ್ಟಲೇ ನೀರು ನಿಂತಿರಲಿಲ್ಲ. ಈಗಿನ ಪುರಸಭೆ ಆಡಳಿತಾವಧಿಯಲ್ಲಿ ಒಂದು ತಿಂಗಳಾದ್ರು ಕಬಿನಿ ನೀರು ಬಂದಿಲ್ಲ. ಪುರಸಭೆ ಗುರುವಾರ ಸಂಜೆ ತನಕ ಡಿಜಿಟಲ್ ಸ್ಟಾರ್ಟರ್ ಟೆಂಡರ್ ದಾರನಿಗೆ ಪುರಸಭೆ ವರ್ಕ್ ಆರ್ಡರ್ ಕೊಟ್ಟಿರಲಿಲ್ಲ. ಶುಕ್ರವಾರ ಕೊಟ್ಟರೆ ಗುತ್ತಿಗೆದಾರ ಸ್ಟಾರ್ಟರ್ ಖರೀದಿಸಿ ತಂದು ಅಳವಡಿಸಿ ಸ್ಟಾರ್ಟರ್ ಸ್ಟಾಟ್ ಆಗುವ ತನಕ ಕಬಿನಿ ನೀರು ಬರಲ್ಲ, ಬರುವುದು ಕನಿಷ್ಟ ವಾರವಾದರೂ ಆಗಬಹುದು?2 ಸ್ಟಾರ್ಟರ್ ಹೊಸದಾಗಿ ತಂದು ಹಾಕಬೇಕಿದೆ. ವರ್ಕ್ಸ್ ಆರ್ಡರ್ ಕೊಡಬೇಕು. ಬೇರೆ ದಾರಿ ಇಲ್ಲ, ಹೊಸದಾಗಿಯೇ ಹಾಕಬೇಕು. ಪದೇ ಪದೇ ಇದೇ ಸಮಸ್ಯೆಯಾಗಿದೆ. ಕಬಿನಿ ನೀರು ಬರಲು ವಾರಕಾಲ ಕಾಯಬೇಕು.ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ