ಬಿ.ಎಸ್.ಯಡಿಯೂರಪ್ಪ ಆರಂಭಿಸಿದ ಯೋಜನೆಗಳ ಜನ ಮರೆತಿಲ್ಲ: ರವೀಂದ್ರ ಶೆಟ್ಟಿ

| Published : Mar 02 2025, 01:17 AM IST

ಬಿ.ಎಸ್.ಯಡಿಯೂರಪ್ಪ ಆರಂಭಿಸಿದ ಯೋಜನೆಗಳ ಜನ ಮರೆತಿಲ್ಲ: ರವೀಂದ್ರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ರವೀಂದ್ರ ಶೆಟ್ಟಿ ಉಳಿದೊಟ್ಟು ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇರಳಕಟ್ಟೆಯ ಬೆಳ್ಮ ಸೇವಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು, ವಸ್ತ್ರ ವಿತರಣೆ ಮತ್ತಿತರ ಸೇವಾ ಕಾರ್ಯಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನ್ನ ಅಧಿಕಾರವಧಿಯಲ್ಲಿ ನೀಡಿದ್ದ ಭಾಗ್ಯಲಕ್ಷ್ಮಿ, ಬೈಸಿಕಲ್ ಮೊದಲಾದ ಜನಪರ ಯೋಜನೆಗಳನ್ನ‌ ಜನರು ಇಂದಿಗೂ ಮರೆತಿಲ್ಲ. ಬಿಎಸ್ ವೈ ಮಾರ್ಗದರ್ಶನದಲ್ಲೇ ಅವರ ಸುಪುತ್ರ ಬಿ.ವೈ.ವಿಜಯೇಂದ್ರರ ನಾಯಕತ್ವದಲ್ಲಿ ಮುಂದಿನ‌ ದಿವಸಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ರವೀಂದ್ರ ಶೆಟ್ಟಿ ಉಳಿದೊಟ್ಟು ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇರಳಕಟ್ಟೆಯ ಬೆಳ್ಮ ಸೇವಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು, ವಸ್ತ್ರ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅಭಿನಂದನೆ, 82 ವಿವಿಧ ತಳಿಯ ಸಸಿ ನೆಡುವ ಕಾರ್ಯಕ್ರಮ ಗುರುವಾರ ನಡೆಯಿತು.ರೈತ ನಾಯಕ, ಹುಟ್ಟು ಹೋರಾಟಗಾರರಾದ ಯಡಿಯೂರಪ್ಪ ಬಹಳಷ್ಟು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರತಿ ವರ್ಷ ಅವರ ಹೆಸರಲ್ಲಿ ಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಸಮಾಜಮುಖಿ ಕಾರ್ಯಗಳನ್ನ ನಡೆಸುತ್ತಾ ಬಂದಿದ್ದೇವೆಂದು ರವೀಂದ್ರ ಶೆಟ್ಟಿ ಹೇಳಿದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿದರು.

ಭಾಗ್ಯಲಕ್ಷ್ಮಿ ಯೋಜನೆಯ 10 ಫಲಾನುಭವಿ ಹೆಣ್ಮಕ್ಕಳನ್ನು ಅಭಿನಂದಿಸಲಾಯಿತು.

ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರ್, ಮಂಡಲ ಯುವಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಸೌಮ್ಯ ಆರ್.ಶೆಟ್ಟಿ, ಪ್ರಮುಖರಾದ ರಾಮಚಂದ್ರ, ಕೃಷ್ಣಪ್ಪ, ರೂಪ, ಅನಂತ ಕೃಷ್ಣ ಯಾದವ, ಸತೀಶ್ ದೀಪಮ್ ಮೊದಲಾದವರು ಉಪಸ್ಥಿತರಿದ್ದರು.

.................

ನಾನು ರಾಜಕೀಯದಲ್ಲಿ ಈ ಹಂತಕ್ಕೆ ಬರಲು ಬಿ.ಎಸ್.ಯಡಿಯೂರಪ್ಪ ಕಾರಣರಾಗಿದ್ದು,ಅವರನ್ನ ಪ್ರತೀ ದಿನವೂ ಸ್ಮರಿಸುತ್ತಿದ್ದೇನೆ. ಅವರ ಹುಟ್ಟು ಹಬ್ಬದ ಪ್ರಯುಕ್ತ 82 ವಿವಿಧ ಜಾತಿಯ ಸಸಿಗಳನ್ನ ನೆಟ್ಟು, ಆಶ್ರಮವಾಸಿಗಳಿಗೆ ವಸ್ತ್ರಗಳನ್ನೂ ವಿತರಿಸಿದ್ದೇವೆ.

-ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ.