ಪ್ರತಿ ಗ್ರಾಮದಲ್ಲೂ ಎಚ್ಐವಿ ಕುರಿತು ಜನರಿಗೆ ಅರಿವು: ಪರಶುರಾಮ ಶಿರೂರ್

| Published : Aug 15 2025, 01:00 AM IST

ಪ್ರತಿ ಗ್ರಾಮದಲ್ಲೂ ಎಚ್ಐವಿ ಕುರಿತು ಜನರಿಗೆ ಅರಿವು: ಪರಶುರಾಮ ಶಿರೂರ್
Share this Article
  • FB
  • TW
  • Linkdin
  • Email

ಸಾರಾಂಶ

People, village, awarem hiv, Parashuram Shiroor, ಜನರಿಗೆ ಅರಿವು,

ಕನ್ನಡಪ್ರಭ ವಾರ್ತೆ ಅರಕಲಗೂಡು

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಸನ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ, ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಮಲ್ಲಿಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಪರಶುರಾಮ ಶಿರೂರ್ ಮಾತನಾಡಿ, ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಸನದ ಅಡಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಹಾಸನ ಜಿಲ್ಲೆಯಲ್ಲಿ ನೂರು ಹೈ ರಿಸ್ಕ್ ಇರುವಂತಹ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮಗಳಲ್ಲಿ ವಲಸಿಗರು ಹಾಗೂ ಟ್ರಕ್ಕರ್ ಮತ್ತು ಡ್ರೈವರ್ ಮುಂತಾದ ರಿಸ್ಕ್ ವರ್ತನೆಯಲ್ಲಿರುವಂಥ ಜನರನ್ನು ಗುರುತಿಸಿ ಅವರಿಗೆ ಸೂಕ್ತ ಎಚ್ಐವಿ ತಪಾಸಣೆ ನಡೆಸಲಾಗುತ್ತಿದೆ. ಈ ಮೂಲಕ ಪ್ರತಿಯೊಂದು ಗ್ರಾಮದಲ್ಲೂ ತಪಾಸಣಾ ಶಿಬಿರ ನಡೆಸಿ ಎಚ್ಐವಿ ಕಾಯಿಲೆ ಹರಡುವ ವಿಧಾನ ಹಾಗೂ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಲಿಂಗ ಕಾಮ ಲೈಂಗಿಕ ಕ್ರಿಯೆ ಹೆಚ್ಚು ಕಂಡು ಬರುತ್ತಿರುವುದರಿಂದ ಅವಿವಾಹಿತ ಯುವಕರಲ್ಲಿ ಎಚ್ಐವಿ ಖಚಿತ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ನೋವಿನ ಸಂಗತಿ ಯಾಗಿದೆ. ರಾಜ್ಯದಲ್ಲಿ ಹಾಸನ ಜಿಲ್ಲೆ ಎಚ್ ಐ ವಿ ಸೊಂಕೀತರಲ್ಲಿ 13ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 12 ಸಾವಿರಕ್ಕಿಂತ ಹೆಚ್ಚು ಜನರು ಎಚ್ ಐ ವಿ ಸೋಂಕಿತರಿದ್ದು ತಾಲೂಕಿನಲ್ಲಿ 350ಕ್ಕೂ ಹೆಚ್ಚು ಜನರು ಸೋಂಕಿತರಿದ್ದಾರೆ. ಆದ್ದರಿಂದ ಎಚ್ಐವಿ, ಕ್ಷಯ ರೋಗ, ಸಿಪಿಲಿಸ್ ಹೆಪಟೈಟಿಸ್, ಡೆಂಘೀ ಕಾಯಿಲೆಯ ಕುರಿತು ಜನರಲ್ಲಿ ಜಾಗೃತಿ ಹಾಗೂ ತಪಾಸಣೆ ಕೈಗೊಳ್ಳುವುದು ಈ ಶಿಬಿರಗಳ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಏನಾದರೂ ಸಂಶಯಗಳಿದ್ದರೆ ಸರ್ಕಾರದ ಹೆಲ್ಪ್ ಲೈನ್ ಆಗಿರುವ 1097 ನಂಬರಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಎನ್ ಸಿಡಿ ವಿಭಾಗದ ಆಪ್ತ ಸಮಾಲೋಚಕ ಉಮೇಶ ಮಾತನಾಡಿ, ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದ ಒತ್ತಡ ಹಾಗೂ ಮಧುಮೇಹ ಕಾಯಿಲೆಗಳನ್ನು ಪತ್ತೆ ಮಾಡುವುದು. ಕಾಯಿಲೆ ಬಂದರೆ ಜೀವನ ಶೈಲಿಯನ್ನು ಮತ್ತು ಊಟದ ವಿಧಾನಗಳನ್ನು ಬದಲಾಯಿಕೊಳ್ಳಬೇಕು. ಕಾಯಿಲೆಯಿಂದಾಗುವ ದುಷ್ಪರಿಣಾಮ ಹಾಗೂ ಮುನ್ನೆಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಶಿಭಿರದಲ್ಲಿ ಸುಮಾರು 75ಕ್ಕೂ ಹೆಚ್ಚು ಜನರು ಭಾಗವಹಿಸಿ, ಮಧುಮೇಹ, ಅಧಿಕ ರಕ್ತದ ಒತ್ತಡ, ಎಚ್ಐವಿ ಹಾಗೂ ಕ್ಷಯ ರೋಗ ಪರೀಕ್ಷೆಯನ್ನು ಮಾಡಿಸಿಕೊಂಡರು.

ಮಲ್ಲಿಪಟ್ಟಣ ಪಿಡಿಒಗಳು ಹಾಗೂ ಸಿಬ್ಬಂದಿ ವರ್ಗದವರು ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞರಾದ ಗೌರಮ್ಮ, ಎನ್ ಸಿ ಡಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ. ಪ್ರೀತಮ್, ಆಪ್ತ ಸಮಾಲೋಚಕರಾದ ಉಮೇಶ್, ಶುಶ್ರೂಷಕರಾದ ಲಲಿತಾ, ಹಾಸನದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತಾಲೂಕು ಕ್ಷೇತ್ರಕಾರ್ಯಕರ್ತರಾದ ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು.