ಜನರು ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಿ: ಹೊರ ಮಠದ ಚಂದ್ರಶೇಖರ ಶ್ರೀ

| Published : Oct 30 2024, 12:38 AM IST

ಜನರು ಆರೋಗ್ಯ ಶಿಬಿರ ಸದುಪಯೋಗಪಡಿಸಿಕೊಳ್ಳಿ: ಹೊರ ಮಠದ ಚಂದ್ರಶೇಖರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಪಾಲನೆಗಾಗಿ ಶಿಬಿರ ಹಮ್ಮಿಕೊಂಡಿದೆ. ಪ್ರತಿಯೊಬ್ಬರೂ ಸದುಪಯೋಗಪಡೆದುಕೊಳ್ಳಬೇಕು. ವೇದಿಕೆಯಿಂದ ಇಂಥ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತದೆ .

ಮಳವಳ್ಳಿ: ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ದೃಷ್ಟಿಯಿಂದ ಸಂಘ ಸಂಸ್ಥೆಗಳು ಆಯೋಜಿಸುವ ಆರೋಗ್ಯ ಶಿಬಿರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೊರ ಮಠದ ಚಂದ್ರಶೇಖರ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಬೋಪ್ಪೇಗೌಡನಪುರ (ಬಿ.ಜಿ.ಪುರ) ಗ್ರಾಮದ ಹೊರ ಮಠದ ಆವರಣದಲ್ಲಿ ಶರಣರ ಸಂಘಟನಾ ವೇದಿಕೆ, ನಗು ಫೌಂಡೇಷನ್, ಗ್ರಾಮ ಪಂಚಾಯ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಹಳ್ಳಿಗಾಡಿನ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ. ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನಿರ್ಲಕ್ಷ್ಯ ವಹಿಸುತ್ತಾರೆ. ಯಾವುದೇ ರೋಗವಾದರೂ ಸ್ಥಳೀಯವಾಗಿ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.

ಶರಣರ ಸಂಘಟನೆ ವೇದಿಕೆ ಜಿಲ್ಲಾ ಅಧ್ಯಕ್ಷ ನಂದೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಪಾಲನೆಗಾಗಿ ಶಿಬಿರ ಹಮ್ಮಿಕೊಂಡಿದೆ. ಪ್ರತಿಯೊಬ್ಬರೂ ಸದುಪಯೋಗಪಡೆದುಕೊಳ್ಳಬೇಕು. ವೇದಿಕೆಯಿಂದ ಇಂಥ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಮಠದ ಆವರಣದಲ್ಲಿ ಸಸಿ ನೆಡಲಾಯಿತು. ವೇದಿಕೆಯಲ್ಲಿ ಗ್ರಾಪಂ ಸಿದ್ದರಾಜು, ಸದಸ್ಯ ಮಹದೇವಪ್ಪ, ಶರಣರ ಸಂಘಟನಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯಸ್ವಾಮಿ, ಬಿ.ಜಿ.ಪುರ ಹೋಬಳಿ ಅಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ಮಹೇಶ್, ದಂತ ವೈದ್ಯ ಡಾ. ಅರುಣ್ ಕುಮಾರ್, ಡಾ. ಸಂಜನಾ, ಕೀಲು ಮತ್ತು ಮೂಳೆ ಡಾ. ಎಚ್. ಸುನಿಲ್, ಜನರಲ್ ಸರ್ಜನ್ ಡಾ. ಶಿವಕುಮಾರ್, ಡಾ.ಉಮೇಶ್ ಮಠಪತಿ, ಡಾ. ಕುಸುಮಾಶ್ರೀ ರೈ, ನೇತ್ರ ತಜ್ಞ ಡಾ. ಹರಿಪ್ರಸಾದ್, ಕಣ್ಣಿನ ತಪಾಸಣಾ ಅಧಿಕಾರಿ ನವ್ಯಾ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. 135 ಮಂದಿ ಶಿಬಿರದ ಪ್ರಯೋಜನ ಪಡೆದರು.

ಪಿಎಸ್ಐ ವಿ.ಸಿ.ಅಶೋಕ್, ಪಿಡಿಒ ಜಯಸ್ವಾಮಿ, ಮುಖಂಡರಾದ ಬಬ್ರುವಾಹನ, ವೀರಭದ್ರಸ್ವಾಮಿ ಭಾಗವಹಿಸಿದ್ದರು.