ಪ್ರತಿಯೊಂದು ಮಸೀದಿ, ಮಠ ಮಂದಿರಗಳು, ಹಬ್ಬ, ಹರಿದಿನಗಳು, ಸಹ ತನ್ನದೇ ಆದ ಪರಂಪರೆ, ವೈಶಿಷ್ಟ್ಯತೆ ಹಾಗೂ ಮಹತ್ವವನ್ನು ಹೊಂದಿವೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಪ್ರತಿಯೊಂದು ಧರ್ಮದವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬ, ಹರಿದಿನಗಳನ್ನು ಆಚರಿಸಬೇಕೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಪ್ರತಿಯೊಂದು ಮಸೀದಿ, ಮಠ ಮಂದಿರಗಳು, ಹಬ್ಬ, ಹರಿದಿನಗಳು, ಸಹ ತನ್ನದೇ ಆದ ಪರಂಪರೆ, ವೈಶಿಷ್ಟ್ಯತೆ ಹಾಗೂ ಮಹತ್ವವನ್ನು ಹೊಂದಿವೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಪ್ರತಿಯೊಂದು ಧರ್ಮದವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬ, ಹರಿದಿನಗಳನ್ನು ಆಚರಿಸಬೇಕೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಹೇಳಿದರು.ತಾಲೂಕಿನ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಉಪವಿಭಾಗದಿಂದ ಅಯೋಜಿಸಲಾಗಿದ್ದ ಶಾಂತಿ ಸಭೆಯ ನೇತೃತ್ವವಹಿಸಿ ಮಾತನಾಡಿದರು. ಪೊಲೀಸ್ ಉಪವಿಭಾಗದ ವ್ಯಾಪ್ತಿಯಲ್ಲಿ ಸುಮಾರು ೬೫ ಮಸೀದಿಗಳು, ೫ ದರ್ಗಾಗಳಿದ್ದು, ಹಬ್ಬ, ಹರಿದಿನಗಳನ್ನು ಸಂತೋಷ, ಸಂಭ್ರಮದಿಂದ ಆಚರಿಸುವ ವಾತಾವರಣ ರೂಪಿಸಿಕೊಳ್ಳಬೇಕು. ವಿನಾಕಾರಣ ಸಂಘರ್ಷಗಳಿಗೆ ಎಡೆಮಾಡಿ ಕೊಡಬಾರದು. ಒಂದೇ ವೇಳೆ ಗೊಂದಲಗಳು ಉಂಟಾದ್ದಲ್ಲಿ ಸಮುದಾಯದ ಹಿರಿಯರು ಒಗ್ಗೂಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಸಂಘರ್ಷಗಳು ಮಿತಿಮೀರಿ ಹೋದಲ್ಲಿ ಇಲಾಖೆ ಮಧ್ಯ ಪ್ರವೇಶಿಸಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಫೆ.೪ರಿಂದ ಮುಸ್ಲಿಂ ಸಮುದಾಯದವರ ಹಬ್ಬವಿದೆ. ಆದರೆ ಇಲ್ಲಿ ಮುಸ್ಲಿಂ ಸಮುದಾಯದವರು ಫೆ.೩ರಿಂದ ಹಬ್ಬ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರಾದ ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಮುಖಂಡರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಅಧ್ಯಕ್ಷರಾದ ಬಾಬಾಜಾನ್, ಮುರ್ತುಜಾ ಖಾನ್ ಸೇರಿದಂತೆ ಇನ್ನಿತರರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಪೊಲೀಸ್ ನಗರ ವೃತ್ತ ನಿರೀಕ್ಷಕಿ ನಾಗಮ್ಮ, ವಿವಿಧ ಠಾಣೆಗಳ ಠಾಣಾಧಿಕಾರಿಗಳಾದ ಕವಿತಾ, ಕೃಷ್ಣಕುಮಾರ್ ಮಾನೆ, ಶಿಲ್ಪನಾಯನೇಗಲಿ, ಸುನೀಲ್ ಕುಮಾರ್ ತೇಲಿ, ಎಂ.ಪಿ ಸಿದ್ದಪ್ಪ ಇತರರು ಹಾಜರಿದ್ದರು.