ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಜನರು ಆಶೀರ್ವಾದ ಇದೆ ಎಂಬುದು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅನೇಕ ಮಂದಿ ಇತರೇ ಪಕ್ಷಗಳಿಂದ ನಿರಂತರವಾಗಿ ಸೇರ್ಪಡೆಯಾಗುತ್ತಿರುವುದೇ ನಿದರ್ಶನ ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.ಅವರು ಟೇಕಲ್‌ನ ಕ್ಷೇತ್ರನಹಳ್ಳಿ ಗ್ರಾಮದಲ್ಲಿ ಇತರೇ ಪಕ್ಷಗಳಿಂದ ಬಂದಂತಹ ಮುಖಂಡರು, ಗ್ರಾ.ಪಂ.ಸದಸ್ಯ ಹಾಗೂ ಯುವಕರು, ಮಾಜಿ ಜಿ.ಪಂ.ಸದಸ್ಯೆ ಗೀತಮ್ಮವೆಂಕಟೇಶಗೌಡರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇಪ್ರಡೆಯಾದ 80 ಕ್ಕೂ ಹೆಚ್ಚು ಮಂದಿಗೆ ಕಾಂಗ್ರೆಸ್ ಭಾವುಟ ನೀಡಿ ಬರಮಾಡಿಕೊಂಡು ಮಾತನಾಡಿದರು. ಕ್ಷೇತ್ರದ ರಸ್ತೆಗಳ ಅಭಿವೃದ್ಧಿ
ಮಾಲೂರು ತಾಲ್ಲೂಕಿನಲ್ಲಿ ಮಾದರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೊಸೂರು ರಸ್ತೆ ಬಗ್ಗೆ ಕೆಲವರು ಮಾತನಾಡುತ್ತಾರೆ. ಆದರೆ ಅದು ನಾಲ್ಕು ಪಥದ ರಸ್ತೆಯಾಗುತ್ತಿದೆ. ನರಸಾಪುರ, ದೊಡ್ಡಶಿವಾರದಿಂದ ಹುಂಗೇನಹಳ್ಳಿ ಮಾಲೂರಿನಿಂದ ತಮಿಳುನಾಡಿನ ಗಡಿಯವರೆಗೆ ನಾಲ್ಕು ಪಥದ ರಸ್ತೆಯಾಗುತ್ತಿದೆ. ಮಾಲೂರಿನಿಂದ ಹೊಸಕೋಟೆ ಗಡಿಯವರೆಗೆ ವೈಟ್‌ಟಾಪಿಂಗ್ ಕಾಂಕ್ರೀಟ್ ರಸ್ತೆಯನ್ನು ಸುಮಾರು ೧೯ ಕಿ.ಮೀಟರ್ ರಸ್ತೆಯಾಗುತ್ತಿದೆ ಎಂದರು.ಮತ ಮರು ಎಣಿಕೆಯಲ್ಲೂ ಗೆಲ್ಲುವೆನ್ಯಾಯಾಲಯಕ್ಕೆ ಮರು ಎಣಿಕೆ ಬಗ್ಗೆ ಮಾಹಿತಿ ನೀಡಿದ್ದು ಎರಡು ಬಾರಿ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಈ ಎಣಿಕೆಯಲ್ಲಿ ಮೂರನೇ ಬಾರಿಯು ನಾನೇ ಗೆಲುವು ಸಾಧಿಸುತ್ತೇನೆ. ಪ್ರತಿ ಸ್ಪರ್ಧಿಗಳು ಮೂರನೇ ಬಾರಿ ಸೋಲು ಅನುಭವಿಸುತ್ತಾರೆ ಎಂದರು.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ನೀಡಿರುವ ಸಂವಿಧಾನದಡಿ ನಾವು ಸಾಗಬೇಕು ಆರ್‌ಎಸ್‌ಎಸ್, ಬಿಜೆಪಿ ಯವರು ಸ್ವಾತಂತ್ರ್ಯ ಬಂದಾಗ ಇದ್ದರಾ, ನಾನೂ ಹಿಂದೂ, ಆದರೆ ಹಿಂದೂ ವಿರೋಧಿಯಲ್ಲ, ಇತಿಹಾಸವನ್ನು ಮರೆಯಬಾರದು ಎಂದರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕೆ.ಎಸ್.ವೆಂಕಟೇಶಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಎಸ್.ಜಿ.ರಾಮಮೂರ್ತಿ, ಲಿಂಗಾಪುರ ಕೃಷ್ಣಪ್ಪ, ದರಕಾಸ್ತು ಸಮಿತಿಯ ಬಿ.ಜಿ.ಸತೀಶಬಾಬು, ಆನೇಪುರ ಹನುಮಂತಪ್ಪ, ವಿಜಯನರಸಿಂಹ, ತಾ.ಪಂ.ಸದಸ್ಯ ರಮೇಶ್‌ಗೌಡ, ಹೆಚ್.ವಿ.ವಿನೋದ್‌ಗೌಡ, ಎ.ಕೆ.ವೆಂಕಟೇಶ, ಗ್ರಾ.ಪಂ.ಅಧ್ಯಕ್ಷ ಎಂ.ಮುರುಗೇಶ, ಅಶ್ವಥರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಲಕ್ಷ್ಮೀನಾರಾಯಣ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))