ಕುಡಿಯುವ ನೀರಿಗೆ ಜನರ ಪರದಾಟ

| Published : May 24 2024, 12:53 AM IST

ಸಾರಾಂಶ

ಕೊಡ ಹಿಡಿದು ನೀರಿಗಾಗಿ ಅಲೆಯುವುದು ಸರ್ವೆಸಾಮಾನ್ಯವಾಗಿದ್ದು ಪುರಸಭೆಯ ಕಾರ್ಯವೈಖರಿಗೆ ಜನಾಕ್ರೋಶ ವ್ಯಕ್ತವಾಗಿದೆ.

ಆನಂದ ಭಮ್ಮನ್ನವರ

ಕನ್ನಡಪ್ರಭ ವಾರ್ತೆ ಸಂಕೇಶ್ವರಪಟ್ಟಣದ ಪುರಸಭೆಯಲ್ಲಿ ಹದಗೆಟ್ಟ ಆಡಳಿತದ ಪರಿಣಾಮ ಪಟ್ಟಣದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿಗೆ ಪಟ್ಟಣದ ಜನರು ಪರದಾಡುವಂತಾಗಿದೆ.

ಪಟ್ಟಣದ ವಾರ್ಡ್ ನಂ.18 ರಲ್ಲಿನ ಅದರಲ್ಲೂ ಅನಂತ ವಿದ್ಯಾನಗರದಲ್ಲಿ ಪುರಸಭೆಯ ಸದಸ್ಯರ ಮನೆಯ ಅಕ್ಕ ಪಕ್ಕದಲ್ಲಿನ ನಿವಾಸಿಗಳಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದೇ ನೀರಿಗಾಗಿ ಕೊಡ ಹಿಡಿದು ನೀರಿಗಾಗಿ ಅಲೆಯುವಂತಾಗಿದೆ.

ಹಿಡಕಲ್ಲ ಜಲಾಶಯದಿಂದ ಸಂಕೇಶ್ವರಕ್ಕೆ ನೀರು ಸರಬರಾಜು ಆಗುತ್ತದೆ. ಆದರೆ, ಪಟ್ಟಣದಲ್ಲಿ ನೀರು ಸರಬರಾಜು ವ್ಯವಸ್ಥೆಗೆ ಗ್ರಹಣ ಹಿಡಿದಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸರಿಯಾಗಿ ಪಟ್ಟಣದ ಜನರಿಗೆ ನೀರು ಸರಬರಾಜು ಮಾಡದೆ ಇರುವುದು ಜನರು ನೀರಿಗಾಗಿ ಪರದಾಡುವಂತಾಗಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೆಗೆ ತದ್ವಿರುದ್ಧವೆಬಂತೆ ಸಂಕೇಶ್ವರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪುರಸಭೆ ಅಧಿಕಾರಿಗಳು ವಿಫಲವಾಗಿದ್ದಾರೆ.

ಬೇಸಿಗೆ ಕಾಲ ನೀರಿನ ಸಮಸ್ಯೆಯಾಗುತ್ತದೆ ಎಂದು ತಿಳಿದಿದ್ದರೂ ಈ ಬಗ್ಗೆ ಪುರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ನೀರಿನ ಸಮಸ್ಯೆ ಎದುರಾಗಿದ್ದು, ಪುರಸಭೆಯ ಕಾರ್ಯವೈಖರಿಯ ಬಗ್ಗೆ ಜನರು ಬೇಸರ ವ್ಯಕ್ತಪಡಿಸುತ್ತಿದಾರೆ.

----------

ಹಳ್ಳ ಹಿಡಿದ 24/7 ನೀರಿನ ವ್ಯವಸ್ಥೆ:

ಪಟ್ಟಣದಲ್ಲಿ 24/7 ನೀರಿನ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದ್ದು, ಪ್ರತಿ ತಿಂಗಳು ನೀರಿನ ಕರ ಪಾವತಿಸಬೇಕು. ಆದರೆ, ಸರಿಯಾಗಿ ನೀರು ಪೂರೈಕೆ ಮಾತ್ರ ಮಾಡುವುದಿಲ್ಲ ಎಂದು ಇಲ್ಲಿನ ಪುರಸಭೆ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಇಲ್ಲಿನ ಜನರು ಬೇಸರ ವ್ಯಕ್ತ ಪಡೆಸುತ್ತಿದ್ದಾರೆ.--------------

ನೀರು ಸರಬರಾಜು ಮಾಡುವ ಪುರಸಭೆಯ ಸಿಬ್ಬಂದಿಗೆ ಹೇಳುವರೂ ಕೇಳುವವರು ಯಾರು ಇಲ್ಲದಂತಾಗಿದೆ. ಹಲವು ಬಾರಿ ನೀರಿನ ಸಮಸ್ಯೆ ಬಗ್ಗೆ ಪ್ರಶ್ನಿಸಿದರೂ ಏನಾದರು ಸಬುಬೂ ಕೇಳಿ ಜಾರುತ್ತಾನೆ. ಅಧಿಕಾರಿಗಳು ಇವರ ಮೇಲೆ ಕ್ರಮಕೈಗೊಳ್ಳಬೇಕು.

- ವಿನೋದ ನಾಯಿಕ, ಪುರಸಭೆ ಸದಸ್ಯರು.