ಸಾರಾಂಶ
ದೇಶದಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ನಮಗೆ ಇತ್ತು. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು, ನಾವೆಲ್ಲರೂ ನಿರೀಕ್ಷಿಸಿದ ಮಟ್ಟಕ್ಕೆ ದೇಶದಲ್ಲಿ ಫಲಿತಾಂಶ ತಲುಪಿಲ್ಲ ನಿಜ, ಆದರೂ ನಿಶ್ಚಯವಾಗಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಕೋಟ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂಬ ಹಂಬಲದಿಂದ ಜನರು ನನಗೆ ಮತ ಹಾಕಿದ್ದಾರೆ. ನನ್ನ ಗೆಲುವಿಗೆ ಸಹಕರಿಸಿ ಮತದಾರರಿಗೆ, ಅಹರ್ನಿಶಿ ದುಡಿದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬಿಜೆಪಿಯಿಂದ ಗೆದ್ದು ಲೋಕಸಭೆ ಆಯ್ಕೆಗೊಂಡಿರುವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.ನಗರದ ಸಂತ ಸಿಸಿಲಿ ಶಾಲೆಯಲ್ಲಿ ನಡೆದ ಮತಎಣಿಕೆಯಲ್ಲಿ ಕೋಟ ಅವರು 1 ಲಕ್ಷಕ್ಕೂ ಅಧಿಕ ಮುನ್ನಡೆ ಸಾಧಿಸುತ್ತಿದ್ದಂತೆ ಮತಎಣಿಕಾ ಕೇಂದ್ರಕ್ಕೆ ಆಗಮಿಸಿದ ಅವರು, ಮಾಧ್ಯಮಗಳಿಗೆ ತಮ್ಮ ಪ್ರಥಮ ಪ್ರತಿಕ್ರಿಯೆಯನ್ನು ನೀಡಿದರು.
ದೇಶದಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ನಮಗೆ ಇತ್ತು. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು, ನಾವೆಲ್ಲರೂ ನಿರೀಕ್ಷಿಸಿದ ಮಟ್ಟಕ್ಕೆ ದೇಶದಲ್ಲಿ ಫಲಿತಾಂಶ ತಲುಪಿಲ್ಲ ನಿಜ, ಆದರೂ ನಿಶ್ಚಯವಾಗಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದರು.* ಇಂಡಿಯಾ ತಂತ್ರ ಕೆಲಸ ಮಾಡಿದೆ
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ನಾವು ಊಹೆ ಮಾಡಿದ ಪ್ರಮಾಣದಲ್ಲಿ ಗೆಲುವು ಪಡೆದಿಲ್ಲ. ರಾಜ್ಯದಲ್ಲಿಯೂ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಭರವಸೆ ಇತ್ತು. ಭಾರತಕ್ಕಾಗಿ ನರೇಂದ್ರ ಮೋದಿ ತುಂಬಾ ಕೆಲಸ ಮಾಡಿದ್ದು, ಬಡವರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಇತ್ಯಾದಿ ಎಲ್ಲ ಘಟನೆಗಳು ಕಣ್ಣ ಮುಂದೆ ಇದ್ದರೂ, ಜನರು ಕಾಂಗ್ರೆಸ್‌ನ ಒಂದು ಲಕ್ಷ ರು. ನೀಡುವ ಘೋಷಣೆಗೆ ಮತ ಹಾಕಿದ್ದಾರೆ. ಇಂಡಿಯಾ ಒಕ್ಕೂಟದ ಈ ತಂತ್ರ ಕೆಲಸ ಮಾಡಿದ್ದು ನಿಜ ಎಂದು ಒಪ್ಪಿಕೊಂಡರು.