ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಧಾರವಾಡದ ಸಾಧನಕೇರಿ ಮತ್ತು ಹುಚ್ಚಾಸ್ಪತ್ರೆಯಿಂದ ಆರಂಭಗೊಂಡ ಬೇಂದ್ರೆ ಅವರ ಜೀವನ ಶೈಲಿ ನಿಜಕ್ಕೂ ಮಾದರಿ ಎಂಬುದನ್ನು ಅನಂತ ದೇಶಪಾಂಡೆ ಅವರ ಬೇಂದ್ರೆ ಮಾಸ್ತರ್ ಕಲೆ ಅನಾವರಣಗೊಳಿಸಿತು.ಹೌದು ಯಾರೂ ಅಂದುಕೊಂಡಿರಲಿಲ್ಲ. ಬೇಂದ್ರೆ ಅವರಂತೆಯೇ ಇರುವ ವ್ಯಕ್ತಿಯನ್ನು ನೋಡುವ ಅವಕಾಶ ಮಾಡಿಕೊಟ್ಟಿದ್ದು ಸ್ಥಳೀಯ ವಿಶ್ವಚೇತನ ಸಂಸ್ಥೆ ಮತ್ತು ಶಿವಯೋಗ ಮಂದಿರದ ಶಾಖಾ ಮಠ. ಅಭಿನಯದೊಂದಿಗೆ ಬೇಂದ್ರೆಯವರ ಕುರಿತು ಉಪನ್ಯಾಸ ನೀಡಿದ ಅವರು, ಕವಿ, ಸಾಹಿತಿ, ಮಾಸ್ತರ ದ.ರಾ.ಬೇಂದ್ರೆ ಅವರ ಕೊಡುಗೆ ಅಜರಾಮರ. ಅವರನ್ನು ಕಾಣದಿರುವ ಇಂದಿನ ಜನಾಂಗಕ್ಕೆ ಬೇಂದ್ರೆ ಅವರು ಹೇಗೆ ಇದ್ದರು, ಹೇಗೆ ಮಾತನಾಡುತ್ತಿದ್ದರು ಎಂಬುದನ್ನು ಗಮನಿಸಿದ ಪ್ರೇಕ್ಷಕರು ಬೆರಗಾದರು.
ಬಾರೋ... ಬಾರೋ... ಸಾಧನಕೇರಿಗೆ ಸಾಹಿತ್ಯದ ಮೆಲಕು ಮರಳಿ ನಿನ್ನೂರಿಗೆ ಎಂಬ ಗೀತೆಗೆ ಕಣ್ಣಂಚಲಿ ಅವರ ಆದರ್ಶಪ್ರಾಯದ ಬೇಂದ್ರೆ ಅವರ ಅಡ್ಡಹೆಸರಿನ ಬೆಂದವನಿಗೆ ಬೇಂದ್ರೆ ಎಂಬುದು ಬಂದಿದೆ. ಕೈ ಐದು ಬೆರಳಿನ ವಿಶ್ವಮಾತೆ, ಭಾರತ ಮಾತೆ, ಕರ್ನಾಟಕ ಮಾತೆ, ಧಾರವಾಡದ ತಾಯಿ ದುರ್ಗಾದೇವಿ, ನನ್ನ ಹಡೆದ ತಾಯಿ ಅಂಬಾಬಾಯಿ ಎಂಬ ವಿವರಣೆ ಅತ್ಯದ್ಭುತವಾಗಿತ್ತು.ಬೇಂದ್ರೆ ಅವರ ಅಂಕಿತನಾಮ ಅಂಬಾಬಾಯಿ ಮಗ ದತ್ತ ಎಂಬುದೆ ಅಂಬಿಕಾತನಯದತ್ತ. ಯಾರ ಮನಸ್ಸು ಭಂಗ ಆಗದಂತೆ ಹಾಡುವುದೇ ಅಭಂಗ. ಟೊಂಕದಮ್ಯಾಲೆ ಕೈಇಟ್ಟಾಣ... ಭಕ್ತಿ ಸುಂಕಾ ಬೇಡತಾನ,,, ಅಂಬಿಕಾತನಯನ್ನ ಕರದಾ...!! ಎಂಬ ಪಾಂಡುರಂಗ ವಿಠ್ಠಲನ ಹಾಡಿಗೆ ಪ್ರೇಕ್ಷಕರು ತಲೆದೂಗಿದರು.
ಬೇಂದ್ರೆ ಮಾಸ್ತರ್ ಕನ್ನಡ ಅಭಿಪ್ರಾಯ ಕೇಳಿದಾಗ ಕಣಕಣದೊಳಗೂ ಕನ್ನಡವಿದೆ. ಕೂದಲೂ, ಕಣ್ಣು, ಕಿವಿ, ಕಪಾಳ, ಕಂಠ, ಕುತಗಿ, ಕೈ ಕಟಿ, ಕಾಲು ಎಲ್ಲವೂ ಕನ್ನಡ. ಕನ್ನಡಕ, ಕೊಡಿ, ಕೋಲು, ಕುರ್ತಾ, ಕಚ್ಚಿಪಂಚೆ, ಕಾಲಮರಿಯೂ ಕನ್ನಡವಾಗಿವೆ. ವಿಶ್ವದೊಳಗೆ ಕನ್ನಡವಾಗಿದೆ. ಹಳೆಬೀಡು ಕೆತ್ತನೆ, ಗೋಳುಗುಮ್ಮಟ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಬಾದಾಮಿ ಗುಹೆಗಳು, ಪಟ್ಟದಕಲ್ಲಿನ ದೇವಾಲಯಗಳ, ಹಂಪಿಯೊಳಗಿನ ವಿಜಯ ವಿಠ್ಠಲನ ಗುಡಿಯೊಳಗೂ ಕನ್ನಡದ ಕಂಪು ಸಪ್ತಸೂರುಗಳ ಮೂಲಕ ಪಸರಿಸಿದೆ ಎಂದು ವಿವರಿಸಿದರು.ಗಾಯತ್ರಿ ಸ್ತೋತ್ರದಿಂದ ಉಪನ್ಯಾಸ ಆರಂಭಗೊಂಡು ಗಂಗಾವತನೆಂದು ಕೊನೆಗೊಂಡಿತು. ಒಂದು ಗಂಟೆಕಾಲ ಬೇಂದ್ರ ಅವರ ಜೀವನದ ಅನುಕರಣೆಯ ಕಲೆಗೆ ಸೇರಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಸಾಹಿತಿಗಳು, ಶಿಕ್ಷಕರು, ಸಾಹಿತ್ಯಾಸಕ್ತರು ಸೇರಿದಂತೆ ಇತರರು ಇದ್ದರು.