ಕನ್ನಡಪ್ರಭ ವಾರ್ತೆ, ತುಮಕೂರುವಿಕಲಚೇತರಿಗೆ, ಅಶಕ್ತರಿಗೆ, ವಯೋವೃದ್ದರಿಗೆ ಸಿಗುವ ಗೌರವಯುಕ್ತ ಬದುಕು, ಪ್ರಗತಿಪರ ಸಮಾಜದ ಪ್ರತಿಬಿಂಬವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ್ ಹವಳೆ ಅಭಿಪ್ರಾಯಪಟ್ಟಿದ್ದಾರೆ.ನಗರದ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮೊಬಿಲಿಟಿ ಇಂಡಿಯಾ ತುಮಕೂರು, ಅರೆಕಾಲಿಕ ಕಾನೂನು ಸ್ವಯಂಸೇವಕರು, ಮಹಿಳಾ ಮೇಲ್ವಿಚಾರಕರು, ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಅಂಗವಿಕಲರ ಅಧಿನಿಯಮ 2016 ಹಾಗೂ ಪುನಶ್ಚೇತನ ಸೇವೆಗಳು ಅಗತ್ಯ ಸಹಾಯಕ ಸಾಧನ ಅದರ ಸಲಕರಣೆಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಅಂಗವಿಕಲರು, ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿರುವ ಜನರಿಗೆ ಅವರಿಗೆ 2016 ರ ಹೊಸ ಕಾಯ್ದೆ ಅನ್ವಯ ದೊರೆಯಬಹುದಾದ ಸವಲತ್ತುಗಳು ಮತ್ತು ಸೇವೆಗಳ ಕುರಿತು ಸಮಗ್ರ ಮಾಹಿತಿಯ ಜೊತೆಗೆ, ಸಮುದಾಯದ ನಡುವೆ ಹೇಗೆ ಕೆಲಸ ಮಾಡಬೇಕು ಎಂಬುವ ಜ್ಞಾನವನ್ಬು ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮ ಎಂದರು.
ತುಮಕೂರು ವಿವಿ ಸಾತ್ನಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಜಿ.ಪರುಶುರಾಮ್ ಮಾತನಾಡಿ, ಇಂದಿನ ಈ ಕಾರ್ಯಕ್ರಮ ವಿಕಲಚೇತನರು, ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿರುವ ಜನರಿಗೆ ಕಾನೂನಿನ ಅರಿವಿನ ಜೊತೆಗೆ,ಸಮಾಜಸೇವೆಯ ಮಾರ್ಗೋಪಾಯಗಳು ಒಂದು ವೇದಿಕೆಯಲ್ಕಿ ದೊರೆಯುತ್ತಿರುವುದು ಸಂತೋಷದ ವಿಚಾರ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಮಣ್ಣ ಮಾತನಾಡಿ, ಈ ಸಮಾಜ ಎಂದು ಉದಯವಾಯಿತೋ ಅಂದಿನಿಂದ ವಿಕಲಚೇತನರ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದೇವೆ. ಯಾವುದು ಹೊಸದಲ್ಲ. ಇದು ವರವೂ ಅಲ್ಲ, ಶಾಪವೂ ಅಲ್ಲ, ವಾಸ್ತವ ಸ್ಥಿತಿ . 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 11,24,208 ಅಂಗವಿಕಲರು ಇದ್ದರೆ, ತುಮಕೂರಿನಲ್ಲಿ 46 ಸಾವಿರವಿದ್ದಾರೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಮೊಬಿಲಿಟಿ ಇಂಡಿಯಾಸ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಎಸ್.ಎನ್., ಅಂಗವಿಕಲರ ಘನತೆಯುಕ್ತ ಬದುಕನ್ನೇ ಪ್ರಧಾನವಾಗಿಟ್ಟುಕೊಂಡು ಜಾರಿಗೆ ಬಂದ 2016 ರ ಅಂಗವಿಕಲರ ಅಧಿ ನಿಯಮ, ಜನರಲ್ಲಿ ವಿವಿಧ ವಿಕಲಚೇತನರ ಬಗ್ಗೆ ಅರಿವೂ ಮೂಡಿಸುವುದರ ಜೊತೆಗೆ ಕೈಲಾದ ನೆರವೂ ನೀಡುವ ಪ್ರಕ್ರಿಯೆಯಾಗಿದೆ. ಸಮುದಾಯದ ಒಳಿತಾಗಿ ಕೆಲಸ ಮಾಡುತ್ತಿರುವ ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆವೆಂದರು.ವೇದಿಕೆಯಲ್ಲಿ ಸಿಡಿಪಿಒ ಅಂಬಿಕಾ ಕಲ್ಯಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ, ನಾಗರಾಜು. ಸಮಾ ರಾಜು, ಡಾ.ಸದಾಶಿವಯ್ಯ,ಮುತ್ತುರಾಜ್ , ಚಿತ್ತಯ್ಯ, ಧನಪಾಲ್ ಹವಲೆ ಇದ್ದರು.ವಿಕಲಚೇತನರಿಗೆ ಗೌರವಯುತ ಬದುಕು ಸಿಗಬೇಕು
ವಿಕಲಚೇತರಿಗೆ, ಅಶಕ್ತರಿಗೆ, ವಯೋವೃದ್ದರಿಗೆ ಸಿಗುವ ಗೌರವಯುಕ್ತ ಬದುಕು, ಪ್ರಗತಿಪರ ಸಮಾಜದ ಪ್ರತಿಬಿಂಬವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ್ ಹವಳೆ ಅಭಿಪ್ರಾಯಪಟ್ಟಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.