ವಿಕಲಚೇತನರು ಸಾಧನೆಗೆ ಮುಂದಾಗಬೇಕು

| Published : Dec 09 2024, 12:45 AM IST

ಸಾರಾಂಶ

ವಿಕಲಚೇತನರಿಗೆ ಅನುಕಂಪ ತೋರಬೇಡಿ, ಬದಲಿಗೆ ಅವರಿಗೆ ಅವಕಾಶ ನೀಡಬೇಕು. ಆಗ ಅವರು ತಮ್ಮ ಕೀಳರಿಮೆ ತೊರೆದು ಸಾಧನೆ ಮಾಡಲು ಸಾಧ್ಯ. ಇಂದು ದೇಶದಲ್ಲಿ ಅನೇಕ ವಿಕಲಚೇತನರು ಅನೇಕ ಸಾಧನೆ ಮಾಡಿದ್ದಾರೆ. ಸರ್ಕಾರ ನೀಡುವ ಸೌಲಭ್ಯ ಪಡೆದು ಇನ್ನಷ್ಟು ಸಾಧನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕಾನೂನು ಪ್ರಾಧಿಕಾರದಲ್ಲಿ ವಿಕಲಚೇತನರಿಗೆ ಹಲವು ಸೌಲಭ್ಯ ಕಲ್ಪಿಸಿದೆ. ಉಚಿತ ಕಾನೂನು ಸೇವೆ ತ್ವರಿತವಾಗಿ ಪ್ರಕರಣ ವಿಲೇವಾರಿ ಮಾಡಲಾಗುವುದು. ಇದರ ಉಪಯೋಗ ಪಡೆದು ಮುಖ್ಯವಾಹಿನಿ ಬನ್ನಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ. ಸಚಿನ್ ತಿಳಿಸಿದರು.ನಗರದ ಇಡಗೂರು ರಸ್ತೆ, ವೀರಂಡಹಳ್ಳಿಯಲ್ಲಿರುವ ಪ್ರಜ್ಞ ಟ್ರಸ್ಟ್, ಅರೋಣೋದಯ ವಿಶೇಷ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಕಾನೂನು ಸೇವಾ ವಕೀಲ ಸಂಘ ಅರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಯೋಜನೆ ಮಾಡಿದ್ದ ʻವಿಕಲಚೇತನರ ದಿನʼ ಮತ್ತು ʻವಿಶ್ವ ಏಡ್ಸ್ ದಿನʼ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಕಲಚೇತನರಿಗೆ ಅವಕಾಶ ಕಲ್ಪಿಸಿ

ವಿಕಲಚೇತನರಿಗೆ ಅನುಕಂಪ ತೋರಬೇಡಿ, ಬದಲಿಗೆ ಅವರಿಗೆ ಅವಕಾಶ ನೀಡಬೇಕು. ಆಗ ಅವರು ತಮ್ಮ ಕೀಳರಿಮೆ ತೊರೆದು ಸಾಧನೆ ಮಾಡಲು ಸಾಧ್ಯ. ಇಂದು ದೇಶದಲ್ಲಿ ಅನೇಕ ವಿಕಲಚೇತನರು ಅನೇಕ ಸಾಧನೆ ಮಾಡಿದ್ದಾರೆ. ಸರ್ಕಾರ ನೀಡುವ ಸೌಲಭ್ಯ ಪಡೆದು ಇನ್ನಷ್ಟು ಸಾಧನೆ ಮಾಡಬೇಕು ಎಂದರು.ಸಾರ್ವಜನಿಕ ಅಸ್ಪತ್ರೆಯ ವೈದ್ಯರಾದ ಹಾರೀಫ್ ಉಲ್ಲಾ ಮಾತನಾಡಿ, ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಏಡ್ಸ್ ಕೂಡ ಒಂದು. ಇದೊಂದು ರಕ್ತದಲ್ಲಿ ಹರಡುವ ಕಾಯಿಲೆಯಾಗಿದೆ. ಲೈಂಗಿಕ ಸಂಪರ್ಕ, ಒಬ್ಬರು ಬಳಸಿದ ಸೂಜಿ, ಕತ್ತರಿಯನ್ನು ಇನ್ನೊಬ್ಬರು ಬಳಸಿದಾಗ, ಸ್ತನ್ಯಪಾನದಿಂದ ಹೀಗೆ ಮುಂತಾದ ಕಾರಣಗಳಿಂದ ಏಡ್ಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಅರೋಣೋದಯ ಸಂಸ್ಥೆ ಕಾರ್ಯದರ್ಶಿ ನಾಗರಾಜ್, ವೈದ್ಯಾಧಿಕಾರಿ ಡಾ. ಚಂದ್ರಮೋಹನ್‌ ರೆಡ್ಡಿ, ವಕೀಲ ಸಂಘದ ಕಾರ್ಯದರ್ಶಿ ದಯಾನಂದ್ ಟಿ.ಕೆ., ವಿಜಯರಾಘವ, ಅಶೋಕ್ ವಿ. ಗೋಪಾಲ್, ಜಗದೀಶ್, ನಟರಾಜ್ ಹಾಜರಿದ್ದರು.