ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ 2024 ರಲ್ಲಿ ಕ್ಷೇತ್ರದ ಶೇ. 50 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರುಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ 2,326 ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಮತದಾನ ನಡೆಸಲು ಕ್ಲಿಷ್ಟಕರವಾಗಿರುವ 382 ಸೇರಿದಂತೆ ಒಟ್ಟು ಮತಗಟ್ಟೆಗಳಲ್ಲಿನ ಶೇ.50 ಅಂದರೆ ಸುಮಾರು 1163 ಮತಗಟ್ಟೆಗಳಲ್ಲಿ ಆಯೋಗದ ನಿರ್ದೇಶನದಂತೆ ವೆಬ್ ಕ್ಯಾಸ್ಟಿಂಗ್‌ಗೆ ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು.
ಮತದಾನ ಪ್ರಕ್ರಿಯೆ ಪ್ರಸಾರ1163 ಮತಗಟ್ಟೆಗಳಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸಂಪೂರ್ಣ ನೇರ ಪ್ರಸಾರವಾಗಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ತಿಯೆ ಸಂಪೂರ್ಣ ವೆಬ್ ಕ್ಯಾಸ್ಟಿಂಗ್ ಆಗಲಿದೆಎಂದರು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸುವ ಮತದಾರರ ರಕ್ಷಣೆಗೆ ಸೂಕ್ತ ನೆರಳಿನ ವ್ಯವಸ್ಥೆ ಕಲ್ಪಿಸಲು ಮತ ಕೇಂದ್ರಗಳಲ್ಲಿ ಉಂಟಾಗುವ ಜನ ಜಂಗುಳಿಯ ಸರದಿಗೆ ಅನುಗುಣವಾಗಿ ನೆರಳು ಕಲ್ಪಿಸಲು ಶಾಮಿಯಾನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ವೃದ್ಧರಿಗೆ ಮನೆಯಲ್ಲೇ ವ್ಯವಸ್ಥೆಏ.13 ರಿಂದ 18 ರವರೆಗೆ ವಿಶೇಷಚೇತನರು 85 ವರ್ಷ ದಾಟಿದ ಹಿರಿಯರು ಮತ್ತು ಮತದಾನ ಕೇಂದ್ರಕ್ಕೆ ಸುಲಭವಾಗಿ ಆಗಮಿಸಿ ಮತದಾನ ಮಾಡಲು ಸಾಧ್ಯವಾಗದವರಿಗೆ ಚುನಾವಣಾ ಸಿಬ್ಬಂದಿ ಮನೆಗೆ ತೆರಳಿ ಅವರ ಮನೆಯಲ್ಲಿಯೇ ಮತದಾನ ಮಾಡಿಸಲು ವ್ಯೆವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಿಕೆಬಿ-2 ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ