ಸಾರಾಂಶ
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.27 ರಿಂದ 29ರವರೆಗೆ 20 ವರ್ಷದ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಹೊನ್ನಾಳಿಯ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಬಾಲಕಿಯರ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು. ಬಾಲಕರ ತಂಡ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದೆ ಎಂದು ಪ್ರಾಂಶುಪಾಲ ಡಾ. ಪ್ರವೀಣ್ ದೊಡ್ಡಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.
- ಒಟ್ಟು ಬಾಲಕರ 24, ಬಾಲಕಿಯರ 16 ತಂಡಗಳು ಭಾಗಿ - - - ಹೊನ್ನಾಳಿ: ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.27 ರಿಂದ 29ರವರೆಗೆ 20 ವರ್ಷದ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಹೊನ್ನಾಳಿಯ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಬಾಲಕಿಯರ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು. ಬಾಲಕರ ತಂಡ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದೆ ಎಂದು ಪ್ರಾಂಶುಪಾಲ ಡಾ. ಪ್ರವೀಣ್ ದೊಡ್ಡಗೌಡ ಹೇಳಿದರು.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ 24 ಮತ್ತು ಬಾಲಕಿಯರ 16 ತಂಡಗಳು ಹ್ಯಾಂಡ್ ಬಾಲ್ ವಿಭಾಗದಲ್ಲಿ ಭಾಗವಹಿಸಿದ್ದವು. ಈ ಪೈಕಿ ಕಾಲೇಜಿನ ಬಾಲಕಿಯವರು ಪ್ರಥಮ ಹಾಗೂ ಬಾಲಕರು ದ್ವಿತೀಯ ಸ್ಥಾಪ ಪಡೆದು ಸಾಧನೆ ಮಾಡಿದ್ದಾರೆ ಎಂದರು.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆ ಸೋಮವಾರ ಕಾಲೇಜಿನ ಆವರಣದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಹಿರೇಕಲ್ಮಠದ ಪೀಠಾಧ್ಯಕ್ಷರೂ ಅಗಿರುವ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿಗಳನ್ನು ಹಸ್ತಾಂತರಿಸಿ ಶುಭಕೋರಿದರು.
ಕ್ರೀಡಾ ಪಟುಗಳಿಗೆ ತರಬೇತಿ ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಎಲ್. ನರಗಟ್ಟಿ, ಸಹಾಯಕ ಪ್ರಾಧ್ಯಾಪಕ ಕೆ.ನಾಗೇಶ್,ಡಾ.ಬಸವರಾಜ್, ಸಿದ್ದೇಶ್ ರೆಡ್ಡಿ, ಡಾ.ನವೀನ್ ಗಂಗಾಧರ ರೂಗಿ, ಡಾ. ಶರತ್, ಕುಮಾರ್ ನಾಯ್ಕ, ಅತಿಥಿ ಉಪನ್ಯಾಸಕರಾದ ಸೌಮ್ಯ, ಸಂಗೀತಾ ಬಿ.ಎನ್.ಸತೀಶ್ ಎ.ರೇಣುಕಾ, ಸಂಗೀತಾ ಬಂಗೇರಾ, ಹಾಗೂ ಕಚೇರಿ ಅಧೀಕ್ಷಕರಾದ ಲೋಕೇಶ್ ಹಾಗೂ ಕ್ರೀಡಾಪಟುಗಳು ಇದ್ದರು.- - - -30ಎಚ್.ಎಲ್.ಐ1: