ಕನ್ನಡಪ್ರಭ ವಾರ್ತೆ ಪಾಂಡವಪುರ

ಡಾ.ಕೆ.ವೈ.ಶ್ರೀನಿವಾಸ್ ಸ್ಮರಣಾರ್ಥ ಕುವೆಂಪು ಕಲಾಸಂಘದ ಸಹಯೋಗದಲ್ಲಿ ಆಗಸ್ಟ್ 8 ಮತ್ತು 9 ರಂದು ತಾಲೂಕಿನ ಕುಂತಿಬೆಟ್ಟದ ಬೆಟ್ಟದ ಮೇಲೆ ‘ಬಕ’ ನಾಟಕ ಪ್ರದರ್ಶನ ನಡೆಯಲಿದೆ.

ಇದೇ ಮೊದಲ ಬಾರಿಗೆ ಯಾವುದೇ ವೇದಿಕೆ, ಸೆಟ್ ನಿರ್ಮಾಣ ಮಾಡದೆಯೇ ವಿಭಿನ್ನವಾಗಿ ಪ್ರಕೃತಿಯ ಮಡಿಲಿನ ಬೆಟ್ಟ-ಗುಡ್ಡಗಳ ಮೇಲೆಯೇ ಬಕಾಸುರನ ವದೆ ಮಾಡುವ ‘ಬಕ’ ಎಂಬ ನಾಟಕ ಪ್ರದರ್ಶನ ಮಾಡಲಾಗುತ್ತಿದೆ.

ಪುರಾಣಗಳ ಪ್ರಕಾರ ಕುಂತಿಬೆಟ್ಟದಲ್ಲಿ ವಾಸವಿದ್ದ ‘ಬಕ’ ಎಂಬ ಬಕಾಸುರ ರಾಕ್ಷಸನಿಗೆ ನಿತ್ಯ ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿನಿತ್ಯ ಒಬ್ಬೊಬ್ಬರು ಬೋಜನ ತೆಗೆದುಕೊಂಡು ಹೋಗಬೇಕಿತ್ತು. ಭೋಜನದ ಜತೆಗೆ ಅದನ್ನು ತೆಗೆದುಕೊಂಡು ಹೋಗುತ್ತಿದ್ದ ಮನುಷ್ಯನನ್ನು ಸಹ ಬಕಾಸುರ ಎಂಬ ರಾಕ್ಷಸನ ತಿಂದು ತೇಗುತ್ತಿದ್ದನ್ನು.

ಈ ವೇಳೆ ಕುಂತಿಪುತ್ರ ಭೀಮ ಒಮ್ಮೆ ಊಟ ತೆಗೆದುಕೊಂಡು ಹೋಗಿ ಅಲ್ಲಿ ವಾಸವಿದ್ದ ಬಕಾಸುರ ಎಂಬ ರಾಕ್ಷಸನನ್ನು ಕೊಂದನು’ ಎಂಬ ಕತೆಯ ಆಧಾರದ ಮೇಲೆ ಪ್ರಸ್ತುತ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ, ಅಧಿಕಾರ ದುರುಪಯೋಗ, ಭಯದ ವಾತಾವರಣಗಳ ವಿರುದ್ಧ ಹೋರಾಟ, ಸತ್ಯ, ಧರ್ಮ, ನ್ಯಾಯದ ಪ್ರತಿದಾನೆಯ ಕುರಿತು ‘ಬಕ’ ಎಂಬ ನಾಟಕ ಮಾಡಲಾಗುತ್ತಿದೆ.


ಈ ನಾಟಕದಲ್ಲಿ ಸ್ಥಳೀಯ 32 ಮಂದಿ ರಂಗಕರ್ಮಿಗಳು, ಸಾಹಿತಿಗಳು, ಶಿಕ್ಷಕರು, ವಿವಿಧ ಕ್ಷೇತ್ರ ಕಲಾವಿಧರು ಭಾಗವಹಿಸುತ್ತಿದ್ದು, ಈ ನಾಟಕವನ್ನು ಚ.ನಾರಾಯಣಸ್ವಾಮಿ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ.

ಆಗಸ್ಟ್ 8 ಮತ್ತು 9ರಂದು ಎರಡು ದಿನಗಳ ಕಾಲ ಕುಂತಿಬೆಟ್ಟದ ಬೆಟ್ಟಗುಡ್ಡಗಳ ಮೇಲೆ ರಾತ್ರಿ 7 ಗಂಟೆಗೆ ನಾಟಕ ಆರಂಭವಾಗಲಿದೆ. ನಾಟಕಕ್ಕೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಲಿದ್ದು, ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ತಿಳಿಸಿದ್ದಾರೆ.

ಇಂದು ಪೂರ್ವಭಾವಿ ಸಭೆಮಂಡ್ಯ: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ ಮಾಡುವ ಸಂಬಂಧ ಆ.20 ರಂದು ಆ.6 ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೀಸಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ. ಸಭೆಗೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಸಮುದಾಯದ ಅಧ್ಯಕ್ಷರು ಹಾಗೂ ಮುಖಂಡರು ಭಾಗವಹಿಸುವಂತೆ ಮಂಡ್ಯ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದರು.

ಇಂದು ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-06 ಹೊಸಹಲ್ಲಿ ನಗರ ಫೀಡರ್ ಮಾರ್ಗದಲ್ಲಿ ತುರ್ತು ಕಾಮಾಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 6 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. 66/11 ಕೆ.ವಿ.ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ಎಫ್-06 ಹೊಸಹಲ್ಲಿ ನಗರ ಫೀಡರ್‌ನ ಪ್ರದೇಶಗಳಾದ ಹೊಸಹಳ್ಳಿ, ಹಾಲಹಳ್ಳಿ, ಹಾಲಹಳ್ಳಿ ಸ್ಲಂ ಬೋರ್ಡ್, ಹನಿಯಂಬಾಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಚಾವಿಸನಿನಿ ಕೊತ್ತತ್ತಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಆರ್.ಟಿ.ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಡ್ಯ ವ್ಯಾಪ್ತಿಯಲ್ಲಿಂದು ವಿದ್ಯುತ್ ವ್ಯತ್ಯಯಮಂಡ್ಯ: 66/11 ಕೆ.ವಿ ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರ ಮತ್ತು ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಆಗಸ್ಟ್ 6 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ.

ತಾಲೂಕಿನ ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರಗಳಾದ ಜಿ.ಮಲ್ಲಿಗೆರೆ, ಹೊನ್ನೆಮಡು, ಹುನಗನಹಳ್ಳಿ, ನಂಜೇನಹಳ್ಳಿ, ಮುತ್ತೆಗೆರೆ, ತಿಪ್ಪಾಪುರ, ಬುಂಡಾರೆಕೊಪ್ಪಲು, ಎಂ.ಹಟ್ನ, ಸಂಗಾಪುರ ಜವನಹಳ್ಳಿ, ಮಲ್ಲೇನಹಳ್ಳಿ, ಛತ್ರನಹಳ್ಳಿ, ಬಿಲ್ಲೇನಹಳ್ಳಿ, ಬಂಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರಗಳಾದ ಕೆರಗೋಡು, ದೊಡ್ಡಗರುಡನಹಳ್ಳಿ, ಬಿಳಿದೇಗಲು, ಮುದಗಂದೂರು, ಮಾರಗೌಡನಹಳ್ಳಿ, ಬಿ.ಹೊಸೂರು, ಹಂಪಾಪುರ, ಕಲ್ಮಂಟಿದೊಡ್ಡಿ, ಸೌದೇನಹಳ್ಳಿ, ಬೆಟ್ಟಹಳ್ಳಿ, ಬೀಚನಹಳ್ಳಿ, ಪುರದಕೊಪ್ಪಲು, ಎಂ.ಹೊನ್ನೇನಹಳ್ಳಿ, ಮನುಗನಹಳ್ಳಿ, ಉಪ್ಪಾರಕನಹಳ್ಳಿ, ಹನಗನಹಳ್ಳಿ, ಗುಡಿಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಚಾವಿಸನಿನಿ, ಕಾ ಮತ್ತು ಪಾ ಮಂಡ್ಯ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರಾದ ಎಸ್.ಅನಿತಾಬಾಯಿ ತಿಳಿಸಿದ್ದಾರೆ.