ಯೋಜನೆಗಳಿಗೆ ಸೀಮಿತವಾದ ಶಾಶ್ವತ ನೀರಾವರಿ

| Published : Mar 24 2025, 12:32 AM IST

ಸಾರಾಂಶ

ವಿಶ್ವ ಜಲ ದಿನಚರಣೆ ಪ್ರಯುಕ್ತ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಅವರು, ನೀರಿನ ಹೆಸರಿನಲ್ಲಿ ನೂರಾರು ಯೋಜನೆಗಳು ಜಾರಿಯಾಗಿವೆ. ಸಾವಿರಾರೂ ಕೋಟಿ ರೂ.ಗಳು ಖರ್ಚು ಆಗಿವೆ. ಆದರೂ, ಜನರ ದಾಹಾ ತೀರಿತಾ, ಸುರಕ್ಷಿತ ಕುಡಿಯುವ ನೀರು ಹರಿಯಿತಾ, ರೈತರಿಗೆ ನೀರಾವರಿ ಒದಗಿತಾ ಎಂಬುದು ಸರ್ಕಾರಗಳು ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯದ ಬಜೆಟ್ ಭಾಷಣದ ಜಲಸಂಪನ್ಮೂಲದ ಆಯವ್ಯಯದ ಆರಂಭದಲ್ಲಿ ಓದಿದ ಈ ವಾಕ್ಯವನ್ನು ವಿಶ್ವ ಜಲ ದಿನಾಚರಣೆಯಾದ ಇಂದು ನೆನೆಯಲೇಬೇಕು. ಮೇಲಿನ ವಾಕ್ಯವನ್ನು ಈಗ ಅವಲೋಕಿಸಿ ನೋಡಿದರೆ ತಗೋ ಕೋಟಿ ಕೋಟಿ ಹಣ ಬದಲಾಗಿ ಜನರಿಗೆ ಒಂದು ಗುಟುಕು ನೀರು ಕೊಡಿ ಎಂಬಂತೆ ಇತ್ತೀಚಿನ ಸರ್ಕಾರಗಳ ಧೋರಣೆ ಬದಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ತಿಳಿಸಿದರು.

ವಿಶ್ವ ಜಲ ದಿನಚರಣೆ ಪ್ರಯುಕ್ತ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಅವರು, ನೀರಿನ ಹೆಸರಿನಲ್ಲಿ ನೂರಾರು ಯೋಜನೆಗಳು ಜಾರಿಯಾಗಿವೆ. ಸಾವಿರಾರೂ ಕೋಟಿ ರೂ.ಗಳು ಖರ್ಚು ಆಗಿವೆ. ಆದರೂ, ಜನರ ದಾಹಾ ತೀರಿತಾ, ಸುರಕ್ಷಿತ ಕುಡಿಯುವ ನೀರು ಹರಿಯಿತಾ, ರೈತರಿಗೆ ನೀರಾವರಿ ಒದಗಿತಾ ಎಂಬುದು ಸರ್ಕಾರಗಳು ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಕುಡಿಯಲು ಶುದ್ಧ ನೀರಿಲ್ಲ

ರಾಜ್ಯದಲ್ಲಾಗುತ್ತಿರುವ ವಾರ್ಷಿಕ ಮಳೆಯಿಂದಲೇ ಸರಿ ಸುಮಾರು 3 ಸಾವಿರ ಟಿಎಂಸಿ ಗಿಂತಲೂ ಹೆಚ್ಚು ಜಲಸಂಪತ್ತು ಕೃಷ್ಣಾ ಕಾವೇರಿ ಸೇರಿದಂತೆ ಪಶ್ಚಿಮವಾಹಿನಿ ನದಿಗಳ ಮೂಲಕ ಸಮುದ್ರ ಸೇರುತ್ತಿದೆ, ಆದರೆ ಜನ ಜಾನುವಾರುಗಳಿಗೆ ಸುರಕ್ಷಿತವಾದ ಕುಡಿಯುವ ನೀರು ಮತ್ತು ರೈತರಿಗೆ ಶಾಶ್ವತವಾದ ನೀರಾವರಿ ಇಂದಿಗೂ ಮರೀಚಿಕೆಯಾಗಿದೆ ಎಂದಿದ್ದಾರೆ. ಎತ್ತಿನಹೊಳೆಯೆಂಬ ಅವೈಜ್ಞಾನಿಕ ಯೋಜನೆಯಿಂದ 65 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಹರಿಸುವ ಯೋಜನೆ ವಿಫಲವಾದ ನಂತರ, ಬೆಂಗಳೂರು ಮಹಾನಗರದ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ, ಬೃಹತ್ ಗಾತ್ರದ ಪೈಪ್‌ಗಳ ಮೂಲಕ ಅಕ್ಕಪಕ್ಕದ ಜಿಲ್ಲೆಗಳ ಕೆಲ ಆಯ್ದ ಕೆರೆಗಳಿಗೆ ತುಂಬಿಸುತ್ತಿರುವುದು ಕೇಂದ್ರ ಸರಕಾರವು ರೂಪಿಸಿರುವ 2013ರಲ್ಲಿ ಸಿಪಿಹೆಚ್ಇಇಓ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದಿದ್ದಾರೆ.

ಬೆಂಗಳೂರಿನ ಶುದ್ಧಿಕರಣ ಘಟಕಗಳನ್ನು ಮೂರನೇ ಹಂತಕ್ಕೆ ಉನ್ನತೀಕರಿಸಿ ವಿನೂತನ ಸಂಸ್ಕರಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೇ ಇದ್ದರೇ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆಯನ್ನು ತೆರೆಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕಾರ್ಯೋನ್ಮುಖವಾಗಬೇಕಿದೆ ಎಂದು ವಿವರಿಸಿದ್ದಾರೆ.