ಕನ್ನಡಪ್ರಭ ವಾರ್ತೆ ವಿಜಯಪುರ: ಈಗಾಗಲೇ 524 ಮೀಟರ್‌ಗೆ ಏರಿಕೆಗೆ ಅನುಮತಿ ಸಿಕ್ಕಿದೆ. ಮಹಾರಾಷ್ಟ್ರದ ಪ್ರಕಾರ ಕೆಲ ಗ್ರಾಮಗಳಲ್ಲಿ ನೀರು ನಿಲ್ಲಲಿದೆ. ಅದನ್ನ ಬಿಟ್ರೆ ಸಾಂಗ್ಲಿ, ಕೊಲ್ಹಾಪುರಕ್ಕೆ ಯಾವುದೇ ತೊಂದರೆ ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದವರು ಉದ್ದೇಶಪೂರಕವಾಗಿ ಪ್ರಚೋದನೆ ಮಾಡಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾರಣ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಎರಡು ರಾಜ್ಯದ ಸಿಎಂಗಳ ಸಭೆ ಕರೆಯಬೇಕು. ನೀರಾವರಿ ತಜ್ಞರನ್ನು ಕರೆದು ಮಹಾ ಸಿಎಂಗೆ ಎಷ್ಟು ಮುಳುಗಡೆ ಆಗುತ್ತೆ ಅಂತಾ ತಿಳಿ ಹೇಳಬೇಕು. ನಮ್ಮ ರಾಜ್ಯಕ್ಕೆ ಯಾವುದೇ ತೊಂದರೆ ಆಗಬಾರದು. ಯಾವುದೇ ಸರ್ಕಾರ ಇದ್ರೂ ನಾವು ಹೋರಾಟ ಮಾಡಬೇಕು. ಮಹಾರಾಷ್ಟ್ರದಲ್ಲಿ ಅದೇ ಉದ್ಯೋಗ ಆಗಿ ಬಿಟ್ಟಿದೆ. ಕೇವಲ ಕನ್ನಡ, ಮರಾಠಿ ಅಂತಾ ಜಗಳ ಹಚ್ಚೊದೇ ಅವರ ಕೆಲಸ ಆಗಿದೆ. ಭಾಷಾ ಜಗಳ ಹಚ್ಚೋದು, ನೀರಿನ ಜಗಳ ಹಚ್ಚೋದು ಶಾಶ್ವತ ಅಲ್ಲ. ಹಿನ್ನೀರು ನಿಲ್ಲೋದ್ರಿಂದ ಅವರಿಗೂ ನೀರಾವರಿಗೆ ಅನುಕೂಲ ಆಗುತ್ತೆ. ಸುಮ್ಮನೆ ಏನಾದ್ರೂ ಮಾಡಿ ಆಲಮಟ್ಟಿ ಎತ್ತರಕ್ಕೆ ಅಡ್ಡಿ ಮಾಡಬೇಕು ಎಂದು ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸಾಲ ಮಾಡಿಯಾದರೂ ಎತ್ತರ ಮಾಡಬೇಕು. ಗ್ಯಾರಂಟಿಗಳನ್ನು ಕೊಡುವ ಬದಲು ನೀರಿನ ಉಪಯೋಗ ಮಾಡಿದ್ರೆ ಸಾಕು. ಇವರ ಗ್ಯಾರಂಟಿಗಳು ಯಾರಿಗೂ ಬೇಕಿಲ್ಲ. ರಾಜ್ಯದ ಎಲ್ಲ ಸಂಸದರು ಧ್ವನಿ ಎತ್ತಬೇಕು ಎಂದು ಯತ್ನಾಳ ಆಗ್ರಹಿಸಿದರು.ಆಲಮಟ್ಟಿ ಡ್ಯಾಂ ಎತ್ತರಿಸಲು ಅನುಮತಿ ಸಿಕ್ಕಿದೆ: ಯತ್ನಾಳ
ಕನ್ನಡಪ್ರಭ ವಾರ್ತೆ ವಿಜಯಪುರ: ಈಗಾಗಲೇ 524 ಮೀಟರ್‌ಗೆ ಏರಿಕೆಗೆ ಅನುಮತಿ ಸಿಕ್ಕಿದೆ. ಮಹಾರಾಷ್ಟ್ರದ ಪ್ರಕಾರ ಕೆಲ ಗ್ರಾಮಗಳಲ್ಲಿ ನೀರು ನಿಲ್ಲಲಿದೆ. ಅದನ್ನ ಬಿಟ್ರೆ ಸಾಂಗ್ಲಿ, ಕೊಲ್ಹಾಪುರಕ್ಕೆ ಯಾವುದೇ ತೊಂದರೆ ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.