ಪರಿಶ್ರಮ ನೀಟ್ ಅಕಾಡೆಮಿಯ ಅದ್ವಿತೀಯ ಸಾಧನೆ

| Published : May 15 2024, 01:35 AM IST

ಸಾರಾಂಶ

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವೈದ್ಯರಾಗುವ ಕನಸನ್ನು ನನಸಾಗಿಸುವ ಸದುದ್ದೇಶದಿಂದೊಂದಿಗೆ ಊರುಗೋಲಾಗಿ ನಿಂತಿದೆ ಪರಿಶ್ರಮ ನೀಟ್ ಅಕಾಡೆಮಿ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವೈದ್ಯರಾಗುವ ಕನಸನ್ನು ನನಸಾಗಿಸುವ ಸದುದ್ದೇಶದಿಂದೊಂದಿಗೆ ಊರುಗೋಲಾಗಿ ನಿಂತಿದೆ ಪರಿಶ್ರಮ ನೀಟ್ ಅಕಾಡೆಮಿ.

ವಿದ್ಯಾರ್ಥಿಗಳಲ್ಲಿ ಜ್ಞಾನ, ಆತ್ಮವಿಶ್ವಾಸ ವೃದ್ಧಿಸಿ, ಉತ್ತಮ ವರ್ತನೆ ಕಲಿಸಿ, ತಾಳ್ಮೆ, ಸಂಘಟಿತ ಭಾವ, ಬದ್ಧತೆಯನ್ನು ರೂಢಿಸಿ, ಉತ್ತಮ ಪರಿಸರ ಹಾಗೂ ಶಿಸ್ತುಬದ್ಧವಾದ ಮನೆಯ ವಾತಾವರಣ ಸೃಷ್ಟಿಸುವ ಕಾರಣದಿಂದಾಗಿ ಪರಿಶ್ರಮ ಅಕಾಡೆಮಿ ಇಂದು ಇತರೆ ಸಂಸ್ಥೆಗಳಿಗಿಂತ ವಿಭಿನ್ನವಾಗಿದ್ದು, ರಾಜ್ಯಾದ್ಯಂತ ಮನೆಮಾತಾಗಿದೆ. ಪ್ರತಿ ಬಾರಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ೨೦೨೪ರ ನೀಟ್ ಪರೀಕ್ಷೆಯಲ್ಲೂ ಸಂಸ್ಥೆಯ ೧೬೦೦ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟ್‌ಗಳನ್ನು ಪಡೆಯುವ ವಿಶ್ವಾಸವಿದೆ. ೭೨೦ ಟಾಪ್ ಸ್ಕೋರ್ ಆಗುವ ನಿರೀಕ್ಷೆಯಿದ್ದು, ೨೦೦ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆಯಲಿದ್ದಾರೆ ಎಂದು ಪರಿಶ್ರಮ ಅಕಾಡೆಮಿಯ ಸಿಇಒ ಪ್ರೊ.ಹನುಮಂತ ರಾವ್ ತಿಳಿಸಿದರು.

ಪರಿಶ್ರಮ ಅಕಾಡೆಮಿ ಆಯ್ಕೆ ಯಾಕೆ?

ಪರಿಶ್ರಮ ಅಕಾಡೆಮಿ ವಿದ್ಯಾರ್ಥಿಗಳನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವುದಿಲ್ಲ, ಬದಲಿಗೆ ಅವರಲ್ಲಿ ಉತ್ತಮ ಸಂಸ್ಕಾರ, ವರ್ತನೆಯನ್ನು ಕಲಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಸೇರಿದಂತೆ ದೈನಂದಿನ ಚಟುವಟಿಕೆಯನ್ನೂ ಪರಿಶ್ರಮ ಅಪ್ಲಿಕೇಶನ್ ಮೂಲಕ ಪೋಷಕರು ತಿಳಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ನಿತ್ಯ ೧೪ ತಾಸುಗಳ ಶೈಕ್ಷಣಿಕ ವೇಳಾಪಟ್ಟಿ ಇರಲಿದೆ. ಅಂಚೆ ತರಬೇತಿ ವ್ಯವಸ್ಥೆಯೂ ಇದೆ. ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ವಿಷಯದ ಬಗ್ಗೆ ವಿಶ್ಲೇಷಣಾತ್ಮಕ ಜ್ಞಾನ, ದೈನಂದಿನ ಪರೀಕ್ಷೆಗಳು, ಸಾಪ್ತಾಹಿಕ ಸಂಚಿತ ಪರೀಕ್ಷೆಗಳು, ಅಧ್ಯಾಯವಾರು ಮತ್ತು ಮಾಡ್ಯೂಲ್‌ವಾರು ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸಿ, ಅವರಲ್ಲಿರುವ ಪರೀಕ್ಷೆಯ ಭಯವನ್ನು ದೂರಗೊಳಿಸಲಾಗುತ್ತದೆ. ಮನೆ ಊಟದಂತೆ ಅನುಭವ ನೀಡುವ ಊಟ ತಿಂಡಿ ವ್ಯವಸ್ಥೆ ಇರಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪರಿಶ್ರಮ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡುವವರು ಶಿಸ್ತುಬದ್ಧರಾಗಿರುತ್ತಾರೆ. ಯಾವುದೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಸ್ಯೆಗಳು ಎದುರಾದರೆ ಪರಿಹರಿಸಲು ಅಧ್ಯಾಪಕರು ಸಿದ್ಧರಿರುತ್ತಾರೆ. ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ತಂತ್ರಜ್ಞಾನ, ಪರಿಣತ ಅಧ್ಯಾಪಕರು ಸಂಸ್ಥೆಯ ಜೀವಾಳ ಎನ್ನುತ್ತಾರೆ ಹನುಮಂತರಾವ್.ಮೇ ೨೩ರಿಂದ ಪರಿಶ್ರಮಪಿಯು ಕಾಲೇಜು ಆರಂಭ:

ಸಾಮಾನ್ಯವಾಗಿ ಬಹುತೇಕ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯನ್ನು ಗಂಭೀರವಾಗಿ ಪರಿಗಣಿಸುವಷ್ಟು ಪ್ರಥಮ ಪಿಯುಸಿಯನ್ನು ಪರಿಗಣಿಸಿರುವುದಿಲ್ಲ. ಈ ಕಾರಣದಿಂದ ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ವಿಷಯವನ್ನು ಕಲಿತಿರುವುದಿಲ್ಲ. ಇದು ಅವರ ನೀಟ್ ಪರೀಕ್ಷೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಪರಿಶ್ರಮ ನೀಟ್ ಅಕಾಡೆಮಿಯು ಇದೇ ಮೇ ೨೩ ರಿಂದ ‘ಪರಿಶ್ರಮ ಪಿಯು ಕಾಲೇಜು’ ಪ್ರಾರಂಭಿಸುತ್ತಿದೆ. ಪಿಸಿಎಂಬಿ, ಪಿಸಿಎಂಸಿಎಸ್ ಮುಖ್ಯ ವಿಷಯ ಇರಲಿದೆ. ಕನ್ನಡ, ಇಂಗ್ಲಿಷ್ ಪ್ರಥಮ ಭಾಷೆ, ದ್ವಿತೀಯ ಭಾಷೆಯಾಗಿ ಕನ್ನಡ ಮತ್ತು ಸಂಸ್ಕೃತ ಭಾಷಾ ಆಯ್ಕೆಗಳು ಇರಲಿದೆ. ಈಗಾಗಲೇ ಸಂಸ್ಥೆಯಲ್ಲಿ ೪೫ ಪರಿಣತ ಅಧ್ಯಾಪಕರಿದ್ದಾರೆ. ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿದ್ದಾಗಲೇ ನೀಟ್/ಜೆಇಇ ಮೇನ್ಸ್, ಕೆಸಿಇಟಿ ಮುಂತಾದ ಸ್ಪಧ್ಯಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಇಂಟಿಗ್ರೇಟೆಡ್ ಪ್ರೋಗ್ರಾಮ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪರೀಕ್ಷೆಯ ಭಯ ತೊಲಗಿಸಿ ಸುಲಭವಾಗಿ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುತ್ತದೆ ಎಂದು ಹನುಮಂತರಾವ್ ಹೇಳಿದರು.ಪರಿಶ್ರಮ ಅಕಾಡೆಮಿಯ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಬೇಕು ಎಂಬುದೇ ನಮ್ಮ ಗುರಿ. ಅಲ್ಲದೇ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೇ ವೈದ್ಯರಾಗಿ ಸೇವೆ ಸಲ್ಲಿಸುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ದಾಪುಗಾಲು ಹಾಕಿದ್ದೇವೆ.

-ಪ್ರೊ.ಹನುಮಂತರಾವ್, ಸಿಇಒ, ಪರಿಶ್ರಮ ನೀಟ್ ಅಕಾಡೆಮಿ.