ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿಕ್ಷಣ ನಮ್ಮ ಅನ್ನಮಯ್ಯಕೋಶ, ಪ್ರಾಣಮಯಕೋಶ, ಮನೋಮಯಕೋಶ ಇವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಅದು ಉತ್ತಮ ದಾರಿಯಲ್ಲಿ ಬೆಳಗಿಸುತ್ತದೆ ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಬಿ.ಜಿ.ಎಸ್ ಆಡಿಟೋರಿಯಂನಲ್ಲಿ 2025-26 ನೇ ಸಾಲಿನ ಪ್ರಥಮ ವರ್ಷದ ಬಿಇ, ಎಂಬಿಎ ಮತ್ತು ಎಂ.ಟೆಕ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಳ್ಳೆಯ ನಡವಳಿಕೆ ಬೆಳೆಸಿಕೊಳ್ಳಿಡಾ.ಎ.ಪಿ.ಜೆ ಅಬ್ದುಲ್ ಕಲಾಂ ರವರು ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿಕೊಟ್ಟಾಗ ಅವರಿಗೆ ಆದಿಚುಂಚನಗಿರಿ ತಾವರೆ ಕೊಳದ ತಾವರೆ ಹೂವಿನ ಚಿತ್ರದೊಂದಿಗೆ ತಿರುವಳ್ಳುವರ್ ರವರ ಉಲ್ಲೇಖನೆಯನ್ನು ಬರೆಸಿದ್ದನ್ನು ನೆನೆಸಿಕೊಂಡರು. ಆ ಉಲ್ಲೇಖನೆಯಲ್ಲಿ ನೀರಿನ ಮಟ್ಟವನ್ನು ಆಧರಿಸಿ ನೀರಿನ ಮಟ್ಟ ಏರಿದಾಗ ತಾವರೆಯೂ ಕೂಡ ಎತ್ತರಕ್ಕೆ ಹೋಗುತ್ತದೆ. ಹಾಗೆಯೇ ಮನುಷ್ಯನ ಒಳ್ಳೆಯ ಭಾವನೆಯಿಂದ ಮನುಷ್ಯನ ವ್ಯಕ್ತಿತ್ವವು ಸಹ ಎತ್ತರಕ್ಕೆ ಹೋಗುತ್ತದೆ, ಆದ್ದರಿಂದ ತಾವುಗಳು ಒಳ್ಳೆಯ ನಡವಳಿಕೆಯಿಂದ ಎತ್ತರಕ್ಕೆ ಏರಬೇಕು ಎಂದರು.
ಶಿಕ್ಷರನ್ನು ಗೌರವಿಸಿ, ಪ್ರೀತಿಸಿಶಿಕ್ಷಕರ ಮೇಲಿನ ಗೌರವ ಮತ್ತು ಪ್ರೀತಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಪಿಟೀಲು ಚೌಡಯ್ಯ ಹಾಗೂ ಭೀಮಸೇನ್ ಜೋಷಿ ರವರು ಉನ್ನತ ಸ್ಥಿತಿಗೆ ತಲುಪಿದಾಗಲೂ ಕೂಡ ತಮ್ಮ ಶಿಕ್ಷಕರ ಮೇಲಿದ್ದ ಗೌರವವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳದೆ ಶಿಕ್ಷಕರನ್ನು ಕಲ್ಪವೃಕ್ಷದಂತೆ ಕಾಣಬೇಕು ಎಂದು ಹೇಳುತ್ತಿದ್ದರು ಎಂಬುದನ್ನು ಸ್ಮರಿಸಿದರು. ಕಾಲಿನ್ಸ್ ಏರೋಸ್ಪೇಸ್ ನ ಸೀನೀಯರ್ ಮ್ಯಾನೇಜರ್ ಗುರುರಾಜ್ ಎನ್. ನೇಕಾರ್ ಮಾತನಾಡಿ, ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೆ ನಿರಂತರವಾಗಿ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು. ನಿಮ್ಮ ಭವಿಷ್ಯಕ್ಕೆ ನೀವೇ ಕಾರಣ ಕರ್ತರು ಎಂದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ , ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ ಮತ್ತು ದೃಢ ಸಂಕಲ್ಪದಿಂದ ಓದಿದರೆ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ. ಕಾಲಕಾಲಕ್ಕೆ ತಮ್ಮ ಕೌಶಲ್ಯ ಅಭಿವೃದ್ದಿ ಮಾಡಿಕೊಳ್ಳಬೇಕು ನೀವು ಆರಿಸಿಕೊಂಡಿರುವುದರಲ್ಲಿ ಅತ್ಯುತ್ತಮವಾಗಿ ತೇರ್ಗಡೆಗೊಳ್ಳಿ ಎಂದು ಹೇಳಿದರು.ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ, ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಎನ್.ಸಿ.ಸಿ ಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಪ್ರಾಂಶುಪಾಲ ಡಾ.ಜಿ.ಟಿ ರಾಜು, ಡೀನ್ ಅಕಾಡೆಮಿಕ್ಸ್, ಮುಖ್ಯಸ್ಥ ಡಾ.ಮಂಜುನಾಥ್ ಕುಮಾರ್ ಬಿ.ಹೆಚ್, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಅಭಿಯಂತರ ನಟರಾಜ್, ಗೌರ್‍ನಿಂಗ್ ಕೌನ್ಸಿಲ್ ಮೆಂಬರ್ ಡಾ.ಕೆ.ಪಿ. ಶ್ರೀನಿವಾಸ್ ಮೂರ್ತಿ , ಎಸ್ ಜೆಸಿಐಟಿ ಆಡಳಿತಾಧಿಕಾರಿ ಜಿ.ಆರ್.ರಂಗಸ್ವಾಮಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))