ಮದ್ದೂರಿಗೆ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಜೂರಿಗೆ ಮನವಿ

| Published : Oct 27 2024, 02:21 AM IST

ಮದ್ದೂರಿಗೆ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಜೂರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ವಕೀಲರ ನಿಯೋಗ ರೇಷ್ಮೆ ಇಲಾಖೆಗೆ ಸೇರಿದ ಜಮೀನಿನಲ್ಲಿ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಜಮೀನು ಮಂಜೂರು ಮಾಡಿದೆ. ಕಟ್ಟಡ ನಿರ್ಮಾಣಕ್ಕೆ 32 ಕೋಟಿ ರು. ಅನುದಾನದ ಅಗತ್ಯವಿದೆ. ಹೈಕೋರ್ಟ್‌ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸುವಂತೆ ಬೇಡಿಕೆ ಸಲ್ಲಿಸಿದರು.

ಮದ್ದೂರು: ಪಟ್ಟಣಕ್ಕೆ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಜೂರು ಮಾಡುವಂತೆ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಹಾಗೂ ಟಿ.ಜಿ. ಶಿವಶಂಕರೇಗೌಡ ಅವರನ್ನು ಮದ್ದೂರು ವಕೀಲರ ನಿಯೋಗ ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಮದ್ದೂರಿನ ಜೆಎಂಎಫ್‌ಸಿ ನ್ಯಾಯಾಲಯದ ಸಂಕೀರ್ಣದಲ್ಲಿ ಹೆಚ್ಚುವರಿ ಸತ್ರ ನ್ಯಾಯಾಲಯ ಸ್ಥಾಪನೆ ಮಾಡುವುದರಿಂದ ಪ್ರಕರಣದ ವಿಚಾರಣೆಗಾಗಿ ಮಳವಳ್ಳಿ ಮತ್ತು ಮದ್ದೂರು ವಕೀಲರು ಹಾಗೂ ಸಾರ್ವಜನಿಕರು ಮಂಡ್ಯ ನ್ಯಾಯಾಲಯಕ್ಕೆ ಹೋಗಲು ಅನಾನುಕೂಲವಾಗುತ್ತಿದೆ. ಹೀಗಾಗಿ ಮದ್ದೂರಿನಲ್ಲಿ ಸತ್ರ ನ್ಯಾಯಾಲಯ ತೆರೆಯುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಕೀಲರ ನಿಯೋಗ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನ್ಯಾಯಮೂರ್ತಿಗಳು ಮಳವಳ್ಳಿ ಮತ್ತು ಸಂಘದೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಇದೇ ವೇಳೆ ವಕೀಲರ ನಿಯೋಗ ರೇಷ್ಮೆ ಇಲಾಖೆಗೆ ಸೇರಿದ ಜಮೀನಿನಲ್ಲಿ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಜಮೀನು ಮಂಜೂರು ಮಾಡಿದೆ. ಕಟ್ಟಡ ನಿರ್ಮಾಣಕ್ಕೆ 32 ಕೋಟಿ ರು. ಅನುದಾನದ ಅಗತ್ಯವಿದೆ. ಹೈಕೋರ್ಟ್‌ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸುವಂತೆ ಬೇಡಿಕೆ ಸಲ್ಲಿಸಿದರು. ಎಂ.ಎನ್. ಶಿವಣ್ಣ, ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಸುಮಂತ್, ಹಿರಿಯ ವಕೀಲರಾದ ಎಚ್‌.ವಿ.ಬಾಲರಾಜು, ಬಿ.ಅಪ್ಪಾಜಿಗೌಡ, ಎ.ಶಿವಣ್ಣ, ಎಂ.ಎನ್.ಚಂದ್ರಶೇಖರ್, ಕೆ.ಶಿವಣ್ಣ, ವಿ.ಟಿ.ರವಿಕುಮಾರ್, ಎಂ.ಎಂ.ಪ್ರಶಾಂತ್, ವಿ.ಎಸ್.ನಾಗರಾಜು ಇತರರಿದ್ದರು.----

ಮದ್ದೂರು ಪಟ್ಟಣಕ್ಕೆ ಹೆಚ್ಚುವರಿ ಸತ್ರ ನ್ಯಾಯಾಲಯ ಮಂಜೂರು ಮಾಡುವಂತೆ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಹಾಗೂ ಟಿ.ಜಿ. ಶಿವಶಂಕರೇಗೌಡ ಅವರನ್ನು ಮದ್ದೂರು ವಕೀಲರ ನಿಯೋಗ ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.