ಕೃಷಿ ಕಚೇರಿ ಸ್ಥಳಾಂತರ ವಾಪಸ್ಸು ಪಡೆಯಲು ಆಗ್ರಹಿಸಿ ಮನವಿ

| Published : Sep 04 2024, 01:53 AM IST

ಸಾರಾಂಶ

ಲಿಂಗಸುಗೂರು ನಗರದಲ್ಲಿ ಶಾಸಕ ಮಾನಪ್ಪ ವಜ್ಜಲ್ ಮೂಲಕ ಕರವೇ ಮುಖಂಡರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿ ಕೃಷಿ ಉಪ ನಿರ್ದೇಶಕ ಕಚೇರಿ ಸ್ಥಳಾಂತರ ಕೈಬಿಡಲು ಆಗ್ರಹಿಸಿದರು.

ಲಿಂಗಸುಗೂರು: ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ಹಿಂಪಡೆಯಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ತಾಲೂಕ ಅಧ್ಯಕ್ಷ ಜಿಲಾನಿ ಪಾಶ ನೇತೃತ್ವದಲ್ಲಿ ಮಂಗಳವಾರ ಶಾಸಕ ಮಾನಪ್ಪ ವಜ್ಜಲ್ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು.

ಲಿಂಗಸುಗೂರು ನಗರ ಸ್ವಾತಂತ್ರ್ಯದ ಪೂರ್ವದಲ್ಲಿಯೇ ಜಿಲ್ಲಾ ಕೇಂದ್ರವಾಗಿತ್ತು, ಭೌಗೋಳಿಕ, ನೈಸರ್ಗಿಕವಾಗಿ ಅತ್ಯಂತ ಶ್ರೀಮಂತ ಪ್ರದೇಶವಾಗಿದೆ. ಅಲ್ಲದೇ ರಾಜ್ಯದ ಅನೇಕ ಜಿಲ್ಲೆ ತಾಲೂಕುಗಳ ಸಂಚಾರಕ್ಕೆ ನಿಕಟವಾಗಿದೆ. ಮೂಲಸೌರ್ಯಗಳ ಕೊರತೆ ಇಲ್ಲಿ ಕಾಡುವುದಿಲ್ಲ. ಇದನ್ನು ಮನಗಂಡು ಲಿಂಗಸುಗೂರು ನಗರದಲ್ಲಿ ಸಹಾಯಕ ಆಯುಕ್ತ ಕಚೇರಿ, ಡಿವೈಎಸ್ಪಿ ಕಚೇರಿ, ಕೃಷಿ ಉಪ ನಿರ್ದೇಶಕರ 02 ಕಚೇರಿ, ಕೆಪಿಟಿಸಿಎಲ್ ಸೇರಿದಂತೆ ಜಿಲ್ಲಾಮಟ್ಟದ ಅನೇಕ ಕಚೇರಿ ಸ್ಥಾಪನೆ ಮಾಡಲಾಗಿದೆ. ಕೃಷಿ ಇಲಾಖೆ ಮೇಲಾಧಿಕಾರಿಗಳ ಸುಳ್ಳು ಮಾಹಿತಿ ನೀಡಿದ್ದಾರೆ. ಇದು ಇಲ್ಲಿಯ ಜನರ ಭಾವನೆ ಘಾಷಿಗೊಳಿಸಿದೆ. ಅಧಿಕಾರಿಗಳ ವರದಿ ಖಂಡನೀಯವಾಗಿದೆ. ಸುಳ್ಳು ವರದಿ ಆಧರಿಸಿ ಸರ್ಕಾರ ಕೃಷಿ ಉಪ ನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರ ಮಾಡಲು ಆದೇಶ ಮಾಡಿದ್ದಾರೆ. ಕೂಡಲೇ ಆದೇಶ ವಾಪಸ್ಸು ಪಡೆದು ಲಿಂಗಸುಗೂರಿನಲ್ಲಿಯೇ ಕೃಷಿ ಉಪ ನಿರ್ದೇಶಕರ ಕಚೇರಿ ಮುಂದೆವರಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಕರವೇ ತಾಲೂಕ ತಾಲೂಕ ಅಧ್ಯಕ್ಷ ಜಿಲಾನಿ ಪಾಶ, ಅಜೀಜ್, ಹನುಮಂತ ನಾಯಕ ಸೇರಿದಂತೆ ಕರವೇ ಮುಖಂಡರು ಇದ್ದರು.