ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಇನ್ನು ಮುಂದೆ ತೈಲ ಬೆಲೆ ಸೂಚಿಸುವ ಫಲಕ ಇಂಗ್ಲಿಷ್ ಮತ್ತು ಹಿಂದಿ ಜತೆಗೆ ಕನ್ನಡ ಭಾಷೆಯಲ್ಲೂ ರಾರಾಜಿಸಲಿದೆ.ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಈ ವಿಷಯ ತಿಳಿಸಿದ್ದಾರೆ.
ಸಚಿವರು ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಾಮಾಜಿಕ ಜಾಲತಾಣದ ಇನ್‌ಫ್ಲ್ಯೂಯೆನ್ಸರ್‌ಗಳೊಂದಿಗೆ ಅವರು ಸಂವಾದ ನಡೆಸಿದರು. ಈ ವೇಳೆ ಬಂಕ್‌ಗಳಲ್ಲಿ ತೈಲ ಬೆಲೆ ಪಟ್ಟಿಯ ಫಲಕದಲ್ಲಿ ಸ್ಥಳೀಯ ಭಾಷೆಯಾದ ಕನ್ನಡ ಇಲ್ಲ.
ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಫಲಕ ಇರುತ್ತದೆ ಎಂಬುದನ್ನು ಸಂವಾದದಲ್ಲಿ ಪಾಲ್ಗೊಂಡವರ ಪೈಕಿ ಒಬ್ಬರು ಗಮನಕ್ಕೆ ತಂದರು.ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪುರಿ, ಬಂಕ್‌ಗಳಲ್ಲಿ ತೈಲ ಬೆಲೆಯ ಫಲಕದಲ್ಲಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ಫಲಕ ಇರಬೇಕು ಎಂಬ ಮನವಿ ಇತ್ತು.
ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತದೆ. ಕನ್ನಡದಲ್ಲೂ ಇರಬೇಕು ಎಂಬ ಮನವಿಗೆ ನಾನು ಸ್ಪಂದಿಸಿದ್ದೇನೆ. ನಾಳೆಯಿಂದಲೇ ಎಲ್ಲ ಬಂಕ್‌ಗಳಲ್ಲಿ ತೈಲ ದರದ ಫಲಕಗಳಲ್ಲಿ ಕನ್ನಡವೂ ಇರಬೇಕು ಎಂಬ ಸೂಚನೆಯನ್ನು ತೈಲ ಕಂಪನಿಗಳಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.