ನಾಡಿಗೆ ಶ್ರಮಿಸಿ ದಾರ್ಶನಿಕರೇ ಪ್ರೇರಣೆ

| Published : Nov 02 2025, 04:15 AM IST

ನಾಡಿಗೆ ಶ್ರಮಿಸಿ ದಾರ್ಶನಿಕರೇ ಪ್ರೇರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನಮ್ಮ ನಾಡು, ಸಂಸ್ಕೃತಿ ಗೌರವದ ಸಂಕೇತ. ಕನ್ನಡ ನಾಡು ಕಾವ್ಯದ ತಾಯಿ ನಾಡು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭುಗಳ ವಚನಗಳು ಮಾನವೀಯತೆಯ ಪಾಠ ಕಲಿಸುತ್ತವೆ. ಕನ್ನಡಕಾವ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಸಾಹಿತಿ, ಕವಿ ಪುಂಗವರನ್ನು ಸ್ಮರಿಸಬೇಕು. ಕನ್ನಡ ನಾಡಿಗಾಗಿ ಹೋರಾಡಿದ ಮಹಾನ್ ದಾರ್ಶನಕರು ನಮಗೆ ಪ್ರೇರಣೆ ಎಂಧು ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಮ್ಮ ನಾಡು, ಸಂಸ್ಕೃತಿ ಗೌರವದ ಸಂಕೇತ. ಕನ್ನಡ ನಾಡು ಕಾವ್ಯದ ತಾಯಿ ನಾಡು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭುಗಳ ವಚನಗಳು ಮಾನವೀಯತೆಯ ಪಾಠ ಕಲಿಸುತ್ತವೆ. ಕನ್ನಡಕಾವ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಸಾಹಿತಿ, ಕವಿ ಪುಂಗವರನ್ನು ಸ್ಮರಿಸಬೇಕು. ಕನ್ನಡ ನಾಡಿಗಾಗಿ ಹೋರಾಡಿದ ಮಹಾನ್ ದಾರ್ಶನಕರು ನಮಗೆ ಪ್ರೇರಣೆ ಎಂಧು ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ನಾಡಿನ ಜನಪದ ಸಾಹಿತ್ಯಕ್ಕೆ ಹಲಸಂಗಿ ಗೆಳೆಯರ ಕೊಡುಗೆ ಅಪಾರವಾಗಿದೆ. ಗಡಿಭಾಗದಲ್ಲಿ ಗಟ್ಟಿಯಾಗಿ ಕನ್ನಡ ಕಟ್ಟಿದ ನಿಂಬೆ ನಾಡಿನ ಹಲಸಂಗಿ ಮಧುರಚೆನ್ನರ ಜನಪದ ಸಾಹಿತ್ಯ ಮೇರು ಶಿಖರವನ್ನೇರಿದೆ ಎಂದರು.

ಆಲೂಕು ವೆಂಕಟರಾಯರಂತಹ ನಾಡು ನುಡಿಯ ಸೇವಕರ ಪರಿಶ್ರಮದ ಫಲವಾಗಿ ಕರ್ನಾಟಕ ಏಕೀಕರಣಗೊಂಡಿದೆ. ಮೈಸೂರು ರಾಜ್ಯವಾಗಿ ಉದಯವಾದ ಈ ಕರುನಾಡು ಬಳಿಕ ಕರ್ನಾಟಕವೆಂದು ನಾಮಕರಣಗೊಂಡಿತು. ಕನ್ನಡ ಭಾಷೆ ಉಳಿಸಲು ಕನ್ನಡಪರ ಸಂಘಟನೆಗಳು ನಿರಂತರ ಕೆಲಸ ಮಾಡುತ್ತಿವೆ. ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸಲು, ಸಾಹಿತಿಗಳು, ಹೋರಾಟಗಾರರು ಅಪಾರವಾಗಿ ಶ್ರಮಿಸಿದ್ದಾರೆ. ನಾಡು, ನುಡಿಗಾಗಿ ದುಡಿದ ಸಾಧಕರನ್ನು ಸ್ಮರಿಸಿಕೊಳ್ಳಬೇಕು. ಕನ್ನಡ ನೆಲ, ಜಲ, ಭಾಷೆ ಉಳಿವಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರುತಹಸೀಲ್ದಾರ್‌ ಬಿ.ಎಸ್.ಕಡಕಭಾವಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ ಬೊರಾಮಣಿ, ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಾಪಂ ಇಒ ಡಾ.ಕನ್ನೂರ,ಬಿಇಒ ಸಯಿದಾ ಮುಜಾವರ,

ತಾಲೂಕ ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಕೃಷಿ ಎಡಿ ಮಹಾದೇವಪ್ಪ ಏವೂರ, ತೋಟಗಾರಿಕೆ ಎಡಿ ಎಚ್.ಎಸ್.ಪಾಟೀಲ, ಕರವೇ ಅಧ್ಯಕ್ಷ ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಭಾಗೇಶ ಮಲಘಾಣ, ನಾಗೇಂದ್ರ ಮೇತ್ರಿ, ಯಲ್ಲಪ್ಪ ಬಂಡೆನವರ, ಸದಾನಂದ ಈರನಕೇರಿ, ನಿಜಣ್ಣ ಕಾಳೆ, ಬಸವರಾಜ ರಾವೂರ, ಸಂತೋಷ ಹೊಟಗಾರ ಇತರರು ಇದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಹಸೀಲ್ದಾರ್‌ ಬಿ.ಎಸ್.ಕಡಕಭಾವಿ ಸ್ವಾಗತಿಸಿದರು. ಎ.ಒ.ಹೂಗಾರ ನಿರೂಪಿಸಿ, ವಂದಿಸಿದರು.