21ರಿಂದ ಮಕ್ಕಳಿಗೆ ಪೋಟೋಗ್ರಫಿಕ್‌ ಮೆಮೋರಿ ತರಬೇತಿ

| Published : Oct 19 2024, 12:27 AM IST

ಸಾರಾಂಶ

ಸೂಪರ್ ಬ್ರೈನ್‌ನಿಂದ ಅ.21ರಿಂದ 30ರವರೆಗೆ ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದ ಎಂಎಸ್ಎಸ್‌ ತರಬೇತಿ ಕೇಂದ್ರದಲ್ಲಿ ಪೋಟೋಗ್ರಫಿಕ್ ಮೆಮೋರಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಧೆ ಆಡಳಿತ ಮಂಡಳಿಯ ಡಾ. ಡಿ.ಎಸ್. ಜಯಂತ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಅ.30ರವರೆಗೆ ಕೊಂಡಜ್ಜಿ ಎಂಎಸ್ಎಸ್‌ನಲ್ಲಿ ಆಯೋಜನೆ :ಡಾ.ಜಯಂತ್‌ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸೂಪರ್ ಬ್ರೈನ್‌ನಿಂದ ಅ.21ರಿಂದ 30ರವರೆಗೆ ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದ ಎಂಎಸ್ಎಸ್‌ ತರಬೇತಿ ಕೇಂದ್ರದಲ್ಲಿ ಪೋಟೋಗ್ರಫಿಕ್ ಮೆಮೋರಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಧೆ ಆಡಳಿತ ಮಂಡಳಿಯ ಡಾ. ಡಿ.ಎಸ್.ಜಯಂತ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.21ರಿಂದ ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 8 ಗಂಟೆವರೆಗೆ ಪೋಟೋಗ್ರಫಿಕ್ ಮೆಮೋರಿ ತರಬೇತಿ ನಡೆಯಲಿದೆ. ನಿತ್ಯವೂ ದಾವಣಗೆರೆ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಿಂದ ಹೋಗಿ, ಬರಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೊಂಡಜ್ಜಿಯ ಎಂಎಸ್ಎಸ್ ತರಬೇತಿ ಕೇಂದ್ರದಲ್ಲಿ ಮಕ್ಕಳಿಗೆ ಉತ್ತಮವಾದ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆ ಮಾತ್ರವಲ್ಲದೇ, ಮೈಸೂರು, ಕೋಲಾರ, ಕೊಟ್ಟೂರು, ಬೆಳಗಾವಿ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ವಿವಿಧೆಡೆಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಬೇತಿಗಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

6ರಿಂದ 10ನೇ ತರಗತಿಯ ಸ್ಟೇಟ್‌, ಸಿಬಿಎಸ್ಇ, ಐಸಿಎಸ್‌ಇ ವಿದ್ಯಾರ್ಥಿಗಳಾಗಿದ್ದರೂ 10 ದಿನಗಳಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಓದಿ, ಅರ್ಥೈಸಿಕೊಂಡು, ಯಾವುದೇ ಪ್ರಶ್ನೆ ಕೇಳಿದರೂ ನಿಖರವಾಗಿ ಪುಟ ಸಂಖ್ಯೆ ಸಮೇತ ಉತ್ತರಿಸುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಲು ಪೋಟೋಗ್ರಫಿಕ್ ಮೆಮೋರಿ ತರಬೇತಿ ಅತ್ಯಂತ ಪರಿಣಾಮಕಾರಿ ಆಗಲಿದೆ ಎಂದು ತಿಳಿಸಿದರು.

ಸೂಪರ್‌ ಬ್ರೈನ್ ಸಂಸ್ಥಾಪಕ ಡಾ. ಡಿ.ಎಸ್. ಜಯಂತ್‌ ತರಬೇತಿ ನೀಡುವರು. ಪ್ರಶಾಂತವಾದ 13 ಎಕರೆ ಪ್ರದೇಶದಲ್ಲಿ ಕೊಂಡಜ್ಜಿಯಲ್ಲಿ ಸ್ಥಾಪಿಸಿರುವ ಎಂಎಸ್ಎಸ್ ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದೆ. ಅತ್ಯಾಧುನಿಕ ಮನೋ ವೈಜ್ಞಾನಿಕ ವಿಧಾನ ಅಳವಡಿಸಿ, ಎನ್ಎಲ್‌ಪಿ ವಿಧಾನ, ಅಲ್ಟ್ರಾ ಕಾನ್ಸಟ್ರೇಷನ್‌, ಪೋಟೋಗ್ರಫಿಕ್‌ ಮೆಮೋರಿ ಇತರೆ ಹತ್ತು ವಿವಿಧ ವಿಧಾನಗಳಿಂದ ಮಕ್ಕಳಲ್ಲಿ ಅಸಾಧಾರಣ ನೆನಪಿನ ಶಕ್ತಿ ಹಾಗೂ ಮಿಂಚಿನ ಓದಿನ ಸಾಮರ್ಥ್ಯ ಬೆಳೆಸುವಲ್ಲಿ ತರಬೇತಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸೂಪರ್ ಬ್ರೈನ್‌ನ ಕಾರ್ಯದರ್ಶಿ, ಸಿದ್ಧಗಂಗಾ ಸಂಸ್ಥೆ ಆಡಳಿತ ಮಂಡಳಿಯ ಗಾಯತ್ರಿ ಚಿಮ್ಮಡ್ ಇದ್ದರು.

- - -

ಕೋಟ್‌ ಎನ್ಎಲ್‌ಪಿ ತಂತ್ರಗಳ ಮೂಲಕ ಮಕ್ಕಳಲ್ಲಿ ಯಾವುದೇ ವಿಷಯದ ಬಗ್ಗೆ ಇರುವ ಅನಗತ್ಯ ಭಯ ತೆಗೆದು ಹಾಕಿ, ಆತ್ಮವಿಶ್ವಾಸ ಹೆಚ್ಚಿಸಲಾಗುವುದು. ಈಚೆಗೆ ಬೆಂಗಳೂರಿನಲ್ಲಿ ನಡೆದ ಸೂಪರ್ ಬ್ರೈನ್‌ ತರಬೇತಿಗೆ ಎಲ್ಲ ಪಾಲಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಮಕ್ಕಳಲ್ಲಿ ಅದ್ಭುತ ಬೆಳವಣಿಗೆ ಮತ್ತು ಆತ್ಮವಿಶ್ವಾಸ ಮೂಡಿಸುವಲ್ಲೂ ತರಬೇತಿ ಸಹಕಾರಿಯಾಗಿದೆ. ತರಬೇತಿಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮೊ-80730-54295ಗೆ ವಾಟ್ಸಪ್‌ ಮೂಲಕ ನೋಂದಾಯಿಸಬೇಕು- ಡಾ. ಡಿ.ಎಸ್. ಜಯಂತ್‌, ಸಂಸ್ಥಾಪಕ

- - - -18ಕೆಡಿವಿಜಿ3:

ದಾವಣಗೆರೆಯಲ್ಲಿ ಶುಕ್ರವಾರ ಸೂಪರ್ ಬ್ರೈನ್ ಸಂಸ್ಥಾಪಕ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಡಾ. ಡಿ.ಎಸ್. ಜಯಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.