ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಮಾನಸಿಕ ಆರೋಗ್ಯಕ್ಕೆ ಉತ್ತಮ ದೈಹಿಕ ಚಟುವಟಿಕೆ ಅಗತ್ಯ ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಕೆ.ಆರ್. ಪ್ರತಿಭಾ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ನಡೆದ 2024-25ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಪುರಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ಮತ್ತು ಆಯ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ನಿರಂತರ ಪರಿಶ್ರಮ ವಹಿಸಿ ಅಂತರಾಷ್ಟ್ರೀಯ ಮಟ್ಟದವರೆಗೂ ಉತ್ತಮ ಸಾಧನೆ ಮಾಡಲು ಅವಕಾಶ ಇರುತ್ತದೆ. ಅದೇ ರೀತಿ ಕುಸ್ತಿ ಪಂದ್ಯಾವಳಿಗೆ ಪ್ರತ್ಯೇಕ ಸ್ಥಾನ ಇದ್ದು, ಅದೇ ಕ್ಷೇತ್ರದಲ್ಲಿ ಮೀಸಲಿರುವ ಅನೇಕ ಹುದ್ದೆ ಹಾಗೂ ಸ್ಥಾನ ಅಂಕರಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ವ್ಯಾಸಂಗದ ಜತೆ ಪೂರಕವಾಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ. ವಿಶ್ವನಾಥ, ಭದ್ರಾವತಿ ಸರಕಾರಿ ಪ್ರಥಮ ಕಾಲೇಜಿನ ಡಾ. ಬಿ.ವಿ. ಅನಿಲ್‍ಕುಮಾರ್, ಶಿಕಾರಿಪುರ ಕಾಲೇಜಿನ ನಾರಾಯಣ, ಆಯನೂರು ಕಾಲೇಜಿನ ಡಾ. ರೋಹನ್ ಡಿಕಾಸ್ಟ, ರೇಂಜರ್ಸ್ ವಿಭಾಗ ಸಂಚಾಲಕರಾದ ಡಾ. ಸಂಗೀತಾ ಬಗಲಿ, ಡಾ. ಆಸ್ಮಾ ಮೇಲಿನಮನಿ, ಎನ್‍ಎಸ್‍ಎಸ್ ಕಾರ್ಯಕ್ರಮಾಕಾರಿ ಎಚ್. ರುದ್ರಮುನಿ, ಕುಸ್ತಿಪಟುಗಳು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಎನ್‍ಎಸ್‍ಎಸ್ ಘಟಕದ ಕಾರ್ಯಕ್ರಮಕಾರಿ ಡಾ. ಎಸ್. ರಾಜುನಾಯ್ಕ್ ಸ್ವಾಗತಿಸಿ, ರೋವರ್ಸ್ ಘಟಕದ ಸಂಚಾಲಕರಾದ ಎನ್. ಆರ್. ಶಂಕರ ವಂದಿಸಿದರು. ಐಕ್ಯುಎಸಿ ಸಂಚಾಲಕರಾದ ಡಾ.ಪಿ. ಭಾರತೀ ದೇವಿ ನಿರೂಪಿಸಿದರು.