ಯೋಗದಿಂದ ದೈಹಿಕ, ಮಾನಸಿಕ ಸದೃಢವಾಗಲು ಸಾಧ್ಯ

| Published : Jun 30 2024, 12:50 AM IST

ಸಾರಾಂಶ

ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಸದೃಢವಾಗಬಹುದು ಎಂದು ಯೋಗ ಶಿಕ್ಷಕ ಎಸ್.ವಿ.ರವೀಂದ್ರನಾಥ ಠಾಗೂರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಸದೃಢವಾಗಬಹುದು ಎಂದು ಯೋಗ ಶಿಕ್ಷಕ ಎಸ್.ವಿ.ರವೀಂದ್ರನಾಥ ಠಾಗೂರ್‌ ಹೇಳಿದರು.

ನಗರದಲ್ಲಿ ಜಿಲ್ಲಾ, ತಾಲೂಕು ಶರಣ ಸಾಹಿತ್ಯ ಪರಿಷತ್‌, ಗ್ಲೋಬಲ್ ಪೀಸ್ ಹಾಗೂ ಪರಂಜ್ಯೋತಿ ಸಂಯೋಗ ಸೇವಾ ಮಂಟಪ ಸಂಯುಕ್ತವಾಗಿ ಭವಾನಮ್ಮ ಗುರುಮಲ್ಲಪ್ಪನವರ ಶ್ರೀ ಸದ್ಗುರು ವಂದನಾ ಗುರುಗಳ ಸಂಸ್ಮರಣಾ ದತ್ತಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಪ್ರಯುಕ್ತ ವಚನಗಳಲ್ಲಿ ಯೋಗ-ಶಿವಯೋಗ ಕುರಿತು ಉಪನ್ಯಾಸ ನೀಡಿದರು.

ಭಾರತೀಯ ಋಷಿಮುನಿಗಳ ಸಾವಿರಾರು ವರ್ಷಗಳ ತಪಸ್ಸಿನ ಫಲದಿಂದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ಯೋಗ ಶರೀರ ಮತ್ತು ಮನಸ್ಸನ್ನು ಒಂದುಗೂಡಿಸುತ್ತದೆ. ಹಾಗೆಯೇ ಶರಣರು ವಚನಗಳ ಮೂಲಕ ಮನುಷ್ಯನ ಅಂತರಂಗದಲ್ಲಿ ಶಿವನನ್ನು ನೆನೆಯುವುದೇ ಯೋಗವಾಗಿದೆ ಎಂದರು.

ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ, ಇಂದಿನ ಆಧುನಿಕ ಮಾನವನಿಗೆ ಕಾರ್ಯ ಒತ್ತಡಗಳಿಂದ ಖಿನ್ನತೆಗೆ ಒಳಗಾಗಿದ್ದಾನೆ. ಯುವ ಶಕ್ತಿಯಲ್ಲಿ ಉತ್ಸಾಹ ಕಾಣುತ್ತಿಲ್ಲ. ಇದಕ್ಕೆಲ್ಲಾ ಪರಿಹಾರ ವಚನಗಳ ಅಧ್ಯಯನ ಮಾಡುತ್ತಾ ಪ್ರತಿನಿತ್ಯ ಯೋಗಾಭ್ಯಾಸ ಮಾಡಲು ಕರೆ ಮಾಡಿದರು.ಶ್ರೀಗಳ ಸಂಸ್ಮರಣೆಯ 49ನೇ ಶರಣ ಚಿಂತನ ಕಾರ್ಯಕ್ರಮ ನಡೆಯಿತು. 83 ವರ್ಷದ ಮಾತೆ ಯೋಗಿನಿ ಜೆ.ಶಕುಂತಲಾದೇವಿ ಸೂರ್ಯ ನಮಸ್ಕಾರದ ಎಲ್ಲ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಹತ್ತಾರು ಆಸನ ಪ್ರದರ್ಶಿಸಿದರು. ಯೋಗ ಶಿಕ್ಷಕಿ, ಲಲಿತಾ, ದತ್ತಿದಾನಿಗಳಾದ ಭವಾನಮ್ಮ ಗುರುಮಲ್ಲಪ್ಪನವರು ಕುಟುಂಬದ ಸದಸ್ಯರ ಸಹಕಾರದಿಂದ ಶತಾಯುಷಿ ಲಿಂಗಮ್ಮ ಹಾಗೂ ಶಿಕ್ಷಣಭೀಷ್ಮ ಎ.ಶಿವಣ್ಣಣವರನ್ನು ಶರಣ ಗೌರವ ನೀಡಿ ಸನ್ಮಾನಿಸಿದರು. ಮಿಮಿಕ್ರಿ ಈಶ್ವರಯ್ಯ ನಿರೂಪಿಸಿದರು. ರಾಜಶೇಖರಯ್ಯ ಈಚನೂರು ಪ್ರಾಸ್ತಾವಿಕ ನುಡಿದರು. ಹಂ.ಸಿ.ಕುಮಾರಸ್ವಾಮಿ ಸ್ವಾಗತಿಸಿದರು. ಬಿ.ರಾಜಶೇಖರಯ್ಯ ವಂದಿಸಿದರು.