ಸಾರಾಂಶ
ಬಾಗಲಕೋಟೆ: ವಿದ್ಯಾ ಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನೋತ್ಸವ ಹಾಗೂ ವಾರ್ಷಿಕ ಕ್ರೀಡಾಕೂಟ ನಡೆಯಿತು. ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸೂರಕರ ಕಾರ್ಯಕ್ರಮ ಉದ್ಘಾಟಿಸಿದರು.ಭೀಮಸೇನ ಸೇಡಂಕರ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದ ಸಾಧಕರನ್ನು ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕ್ರೀಡೆಯು ದೈಹಿಕ, ಮಾನಸಿಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ವಿದ್ಯಾ ಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸೂರಕರ ಹೇಳಿದರು. ವಿದ್ಯಾ ಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನೋತ್ಸವ ಹಾಗೂ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.ಶಂಕ್ರಪ್ಪ ಸಕ್ರಿ ಪ್ರೌಢ ಶಾಲೆಯ ಉಪಸಮಿತಿ ಅಧ್ಯಕ್ಷ ಭೀಮಸೇನ ಸೇಡಂಕರ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದ ಸಾಧಕರನ್ನು ಸ್ಮರಿಸಿದರು. ಉಪ ಪ್ರಾಚಾರ್ಯರಾದ ಬಿ.ಎಚ್.ಲಮಾಣಿ ಪರಿಚಯಿಸಿ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ. ವಿ.ಎಸ್.ದೇಸಾಯಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಕ್ಷತಾ ಮಠಪತಿ ನಿರೂಪಿಸಿದರು, ಜಿ.ಜಿ. ಕುಲಕರ್ಣಿ ವಂದಿಸಿದರು.