ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಜರುಗಿಸಿ ಸರ್ವಪಕ್ಷ ನಿರ್ಣಯಿಸಿ ಭೌತಿಕ ಪರಿಶೀಲನೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿರುವುದರಿಂದ ಕೇಂದ್ರ ಸರ್ಕಾರವು ಭೌತಿಕ ಪರಿಶೀಲನೆಗೆ ಅವಕಾಶ ಕೊಡಬೇಕು.
ಶಿರಸಿ: ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಇಲ್ಲಿಯವರೆಗೆ ಪ್ರಕಟಗೊಂಡ 7ನೇ ಅಧಿಸೂಚನೆಯವರೆಗೂ ವಿಸ್ತೃತ ವರದಿ ಮಂಡನೆ ಆಗಿಲ್ಲ. ಕಸ್ತೂರಿರಂಗನ್ ವರದಿಗೆ ಭೌತಿಕ ಪರಿಶೀಲನೆ ಮಾತ್ರ ಮಾನದಂಡ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ರಾಜ್ಯ ಸರ್ಕಾರವು ಕಸ್ತೂರಿರಂಗನ್ ವರದಿಗೆ ಭೌತಿಕ ಪರಿಶೀಲನೆ ಜರುಗಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಹಿನ್ನೆಲೆ ನಗರದ ಸಂಸದರ ಕಚೇರಿಯಲ್ಲಿ ಸೋಮವಾರ ಸಂವಾದ ನಡೆಸಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿದರು.ಈ ಹಿಂದೆ ಭೌತಿಕ ಸಮೀಕ್ಷೆಗೆ ಕೇಂದ್ರ ಸರ್ಕಾರವು ೨ ಬಾರಿ ಸುತ್ತೋಲೆ ರವಾನಿಸಿದಾಗಲೂ, ಕೇರಳಂ ಬಿಟ್ಟು ಕರ್ನಾಟಕ ಸಹಿತ ಸೇರಿ ೫ ರಾಜ್ಯಗಳು ಭೌತಿಕ ಸಮೀಕ್ಷೆ ಜರುಗಿಸಿಲ್ಲ. ಅಲ್ಲದೇ, 2015ರಲ್ಲಿ ಕೇಂದ್ರ ಸರ್ಕಾರದ ಉಸ್ತುವಾರಿ ಜರುಗಿದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ ಪ್ರತಿನಿಧಿ ಭೌತಿ ಪರಿಶೀಲನೆ ಪ್ರಗತಿಯಲ್ಲಿ ಇದೆ ಎಂದು ಪ್ರಸ್ತಾಪಿಸಿದಾಗಲೂ ರಾಜ್ಯದಿಂದ ಭೌತಿಕ ಸಮೀಕ್ಷೆ ಜರುಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಜರುಗಿಸಿ ಸರ್ವಪಕ್ಷ ನಿರ್ಣಯಿಸಿ ಭೌತಿಕ ಪರಿಶೀಲನೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿರುವುದರಿಂದ ಕೇಂದ್ರ ಸರ್ಕಾರವು ಭೌತಿಕ ಪರಿಶೀಲನೆಗೆ ಅವಕಾಶ ನೀಡಬೇಕೆಂದು ಸಂಸದರಿಗೆ ಮನವಿ ಸಲ್ಲಿಸಿದರು.
ಸಂವಾದದಲ್ಲಿ ಹಿರಿಯ ವಕೀಲರಾದ ಸದಾನಂದ ಭಟ್ ನೀಡಗೋಡ, ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ ಚಿಪಗಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ಜಿಲ್ಲಾ ಸಂಚಾಲಕರಾದ ಮಹಬಲೇಶ್ವರ ನಾಯ್ಕ ಬೇಡ್ಕಣಿ, ಇಬ್ರಾಹಿಂ ಗೌಡಳ್ಳಿ, ಮಹೇಶ ನಾಯ್ಕ ಕಾನಕ್ಕಿ, ರಾಜೇಶ್ ಮಿತ್ರ ನಾಯ್ಕ ತೆಂಗಿನಕೇರಿ,ಯಲ್ಲಾಪುರ ಅಧ್ಯಕ್ಷರಾದ ಭೀಮಸೀ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷರಾದ ಶಿವಾನಂದ ಜೋಗಿ, ನೆಹರು ನಾಯ್ಕ ಬಿಳೂರು ಇತರರು ಇದ್ದರು.