ಯಮಕನಮರಡಿಯಿಂದ ಶ್ರೀಶೈಲಕ್ಕೆ ಭಕ್ತರ ಪಾದಯಾತ್ರೆ

| Published : Mar 27 2024, 01:00 AM IST

ಸಾರಾಂಶ

ಯಮಕನಮರಡಿ: ಶ್ರೀಶೈಲ ಶ್ರೀಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಸಂಪ್ರದಾಯದಂತೆ ಪಾದಯಾತ್ರೆಯ ಮೂಲಕ ಉಳ್ಳಾಗಡ್ಡಿ-ಖಾನಾಪೂರ, ಹೆಬ್ಬಾಳ, ಕುರಣಿವಾಡಿ, ಹಂಚಿನಾಳ ಗ್ರಾಮಗಳ ಭಕ್ತರು ತೆರಳಿದರು. ಸುಮಾರು 15 ದಿನಗಳವರೆಗೆ ಶ್ರೀಶೈಲದ ಶ್ರೀಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಶ್ರೀಶೈಲ ಶ್ರೀಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಸಂಪ್ರದಾಯದಂತೆ ಪಾದಯಾತ್ರೆಯ ಮೂಲಕ ಉಳ್ಳಾಗಡ್ಡಿ-ಖಾನಾಪೂರ, ಹೆಬ್ಬಾಳ, ಕುರಣಿವಾಡಿ, ಹಂಚಿನಾಳಅ ಗ್ರಾಮಗಳ ಭಕ್ತರು ತೆರಳಿದರು. ಸುಮಾರು 15 ದಿನಗಳವರೆಗೆ ಶ್ರೀಶೈಲದ ಶ್ರೀಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ. ಈ ವೇಳೆ ತಮಗೆ ಅಗತ್ಯವಿರುವ ಬಳಕೆಯ ವಸ್ತುಗಳನ್ನು ತೆಗೆದುಕೊಂಡು ಕಂಬಿ ಮಲ್ಲಯ್ಯಾ ದೇವರನ್ನು ಹೊತ್ತು ಗ್ರಾಮದಿಂದ ಸಕಲ ವಾಧ್ಯ ಮೇಳಗಳೊಂದಿಗೆ ತೆರಳುವ ಭಕ್ತರಿಗೆ ಗ್ರಾಮದಿಂದ ಬಿಳ್ಕೊಡಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಈಗಲೂ ಹಂಚಿನಾಳ ಗ್ರಾಮದಲ್ಲಿ ಹಾಗೂ ಹೆಬ್ಬಾಳ ಹಾಗೂ ಇನ್ನುಳಿದ ಗ್ರಾಮಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಗಳನ್ನು ಕಟ್ಟಿ ಈ ದೇವಸ್ಥಾನಗಳಿಗೆ ಪ್ರಥಮವಾಗಿ ಭೇಟಿ ನೀಡಿ ಪ್ರಯಾಣ ಬೆಳೆಸುವ ವಾಡಿಕೆ ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಉಳ್ಳಾಗಡ್ಡಿ-ಖಾನಾಪೂರ, ಹೆಬ್ಬಾಳ, ಕುರಣಿವಾಡಿ, ಹಂಚಿನಾಳದ ಭಕ್ತರು ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳಿದರು.

ವಿಶೇಷ ಪೂಜೆ: ಕುರಣಿವಾಡಿ ಗ್ರಾಮದಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರು ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಶಿವಲಿಂಗಯ್ಯ ಹಿರೇಮಠ, ಶೇಖರ ಖೋತ, ನಾಗರಾಜ ಅಮ್ಮಣಗಿ, ಶಿವಾನಂದ ಶೇಗುಣಸಿ, ಈರಣ್ಣ ಖೋತ, ಚಂದ್ರಪ್ಪ ಕೊಟಬಾಗಿ, ಆರತಿ ಹಿರೇಮಠ, ಶ್ರೀನಾಥ ನಿರ್ವಾಣಿ ಮುಂತಾದವರು ಇದ್ದರು.