‘ಪಿಲಿ ಪಂಜ’ ಸಿನಿಮಾದ ಟೀಸರ್ ಬಿಡುಗಡೆ, ನವಂಬರ್ 7 ರಂದು ಸಿನಿಮಾ ತೆರೆಗೆ

| Published : Jun 02 2025, 12:04 AM IST

‘ಪಿಲಿ ಪಂಜ’ ಸಿನಿಮಾದ ಟೀಸರ್ ಬಿಡುಗಡೆ, ನವಂಬರ್ 7 ರಂದು ಸಿನಿಮಾ ತೆರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಎಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಡಿ ತಯಾರಾದ ಬಹು ನಿರೀಕ್ಷಿತ ‘ಪಿಲಿಪಂಜ’ ತುಳು ಸಿನಿಮಾದ ಟೀಸರ್‌ನ್ನು ನಿರ್ದೇಶಕ ದೇವದಾಸ ಕಾಪಿಕಾಡ್ ಮಂಗಳೂರಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಟೀಸರ್‌ನ್ನು ವೀಕ್ಷಿಸಿದ ದೇವದಾಸ್ ಕಾಪಿಕಾಡ್ ಅವರು ತುಳುವಿನಲ್ಲಿ ಮತ್ತೊಂದು ಸದಭಿರುಚಿಯ ಸಿನಿಮಾವನ್ನು ಪಿಲಿಪಂಜದ ಮೂಲಕ ನೋಡಲು ಸಾಧ್ಯವಿದೆ ಎಂದು ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಎಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಡಿ ತಯಾರಾದ ಬಹು ನಿರೀಕ್ಷಿತ ‘ಪಿಲಿಪಂಜ’ ತುಳು ಸಿನಿಮಾದ ಟೀಸರ್‌ನ್ನು ನಿರ್ದೇಶಕ ದೇವದಾಸ ಕಾಪಿಕಾಡ್ ಮಂಗಳೂರಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಟೀಸರ್‌ನ್ನು ವೀಕ್ಷಿಸಿದ ದೇವದಾಸ್ ಕಾಪಿಕಾಡ್ ಅವರು ತುಳುವಿನಲ್ಲಿ ಮತ್ತೊಂದು ಸದಭಿರುಚಿಯ ಸಿನಿಮಾವನ್ನು ಪಿಲಿಪಂಜದ ಮೂಲಕ ನೋಡಲು ಸಾಧ್ಯವಿದೆ ಎಂದು ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ತುಳು ಸಿನಿಮಾರಂಗದಲ್ಲಿ ವಿಭಿನ್ನ ತಂತ್ರಜ್ಞಾನದಿಂದ ತಯಾರಾದ ‘ಪಿಲಿಪಂಜ’ಸಿನಿಮಾ ನವೆಂಬರ್ 7ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದೆ. ಟೀಸರ್ ನಮ್ಮನ್ನು ಇನ್ನಷ್ಟು ಕುತೂಹಲ ಮೂಡಿಸವಂತೆ ಮಾಡಿದೆ. ಸಿನಿಮಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ತುಳು ಕಲಾಭಿಮಾನಿಗಳು ಈ ಸಿನಿಮಾವನ್ನು ನೋಡಿ ಚಿತ್ರತಂಡವನ್ನು ಬೆಂಬಲಿಸಬೇಕು ಎಂದು ಚಿತ್ರತಂಡ ವಿನಂತಿಸಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ಪ್ರತೀಕ್ ಯು. ಪೂಜಾರಿ ಕಾವೂರು, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಹಾಗೂ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಇದ್ದರು.