ಜಂತುಹುಳು ರಕ್ತಹೀನತೆಗೆ ಕಾರಣ : ಡಾ. ಮಲ್ಲಪ್ಪ

| Published : May 14 2024, 01:02 AM IST

ಸಾರಾಂಶ

ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಶ್ರೀವಿದ್ಯಾರಣ್ಯ ಅಂತರಾಷ್ಟ್ರೀಯ ಶಾಲೆ 2024ರ ಮೇ 13 ರಿಂದ 27ರ ವರೆಗೆ ಜಿಲ್ಲೆಯಾದ್ಯಂತ ನಡೆಯುವ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ

ಯಾದಗಿರಿ: ಜಂತುಹುಳು ರಕ್ತಹೀನತೆಗೆ ಕಾರಣವಾಗುತ್ತದೆ. ಜೊತೆಗೆ ಅಪೌಷ್ಟಿಕತೆ ಹಾಗೂ ವ್ಯಕ್ತಿಯ ಭೌತಿಕ ದೇಹದ ಬೆಳವಣೆಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಈ ಸಮಸ್ಯೆಯಿಂದ ಮಕ್ಕಳು ಆಗಾಗ್ಗೆ ಕಾಯಿಲೆ ಬೀಳುವ ಹಾಗೂ ಶಾಲೆಯಲ್ಲಿ ಪಠ್ಯದ ಮೇಲೆ ಗಮನಹರಿಸಲು ಅಸಮರ್ಥರಾಗಿರುತ್ತಾರೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಮಲ್ಲಪ್ಪ ಹೇಳಿದರು.

ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಶ್ರೀವಿದ್ಯಾರಣ್ಯ ಅಂತರಾಷ್ಟ್ರೀಯ ಶಾಲೆ 2024ರ ಮೇ13 ರಿಂದ 27ರ ವರೆಗೆ ಜಿಲ್ಲಾದ್ಯಂತ ನಡೆಯುವ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಮಕ್ಕಳಿಗೆ ‘ಅಲ್ಬೆಂಡಜೋಲ್’ ಮಾತ್ರೆಗಳ ಕುರಿತು ನೀಡಿ, ಅರಿವು ಮೂಡಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಕಾಲೇಜ್‌ ಇಲ್ಲಿವರೆಗೂ ತೆರೆಯದೇ ಇರುವದರಿಂದ 1 ರಿಂದ 2 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು 2 ರಿಂದ 19 ವರ್ಷದವರೆಗಿನ ಮಕ್ಕಳಿಗೆ ‘ಅಲ್ಬೆಂಡಜೋಲ್’ (ಕ್ರಮವಾಗಿ 200 ಮತ್ತು 400 ಎಂಜಿ) ಮಾತ್ರೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಮನೆ-ಮನೆಗೆ ಭೇಟಿ ಕೊಟ್ಟು ಎಲ್ಲಾ ಮಕ್ಕಳನ್ನು ಪತ್ತೆ ಹಚ್ಚಿ ಮಾತ್ರೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ಪ್ರಾಂಶುಪಾಲರಾದ ರಜನಿರಾವ್, ಡಾ.ವಿನುತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ, ಶಾಂತಿಲಾಲ್ ಹೆಚ್.ಎಸ್, ರಾಣೋಜಿ ಅಬ್ದುಲ್ ಅಜೀಜ್ ಮುಂತಾದವರು ಉಪಸ್ಥಿತರಿದ್ದರು.