ಸಾರಾಂಶ
ಬಾದಾಮಿ: ಹಂಪಿಯ ಶ್ರೀ ಗಾಯತ್ರೀ ಪೀಠ ಮಹಾಸಂಸ್ಥಾನ, ಹೇಮಕೂಟ-ಹಂಪೆ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಬಾದಾಮಿ-ಬನಶಂಕರಿ ದೇವಸ್ಥಾನಕ್ಕೆ ಬಾಗಿನ ಮತ್ತು ದೇವಿಗೆ ಪಿತಾಂಬರ ಸೀರೆ ಅರ್ಪಣೆ ಪ್ರಯುಕ್ತ ಪಾದಯಾತ್ರೆ ಜ.18ರಂದು ಆರಂಭವಾಗಲಿದೆ ಎಂದು ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ತಿಳಿಸಿದ್ದಾರೆ. ಪಾದಯಾತ್ರೆಯು ನೂತನ ಪಲ್ಲಕ್ಕಿಯೊಂದಿಗೆ ಶ್ರೀ ಗಾಯತ್ರೀ ಪೀಠ ಹಂಪಿಯಿಂದ ಜ.18ರಂದು ಬೆಳಗ್ಗೆ 6 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಲಿದೆ.
ಬಾದಾಮಿ: ಹಂಪಿಯ ಶ್ರೀ ಗಾಯತ್ರೀ ಪೀಠ ಮಹಾಸಂಸ್ಥಾನ, ಹೇಮಕೂಟ-ಹಂಪೆ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಬಾದಾಮಿ-ಬನಶಂಕರಿ ದೇವಸ್ಥಾನಕ್ಕೆ ಬಾಗಿನ ಮತ್ತು ದೇವಿಗೆ ಪಿತಾಂಬರ ಸೀರೆ ಅರ್ಪಣೆ ಪ್ರಯುಕ್ತ ಪಾದಯಾತ್ರೆ ಜ.18ರಂದು ಆರಂಭವಾಗಲಿದೆ ಎಂದು ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ತಿಳಿಸಿದ್ದಾರೆ.
ಪಾದಯಾತ್ರೆಯು ನೂತನ ಪಲ್ಲಕ್ಕಿಯೊಂದಿಗೆ ಶ್ರೀ ಗಾಯತ್ರೀ ಪೀಠ ಹಂಪಿಯಿಂದ ಜ.18ರಂದು ಬೆಳಗ್ಗೆ 6 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಲಿದ್ದು, ಬುಕ್ಕಸಾಗರ, ಕಡೆಬಾಗಿಲು, ಗಂಗಾವತಿ ಕನಕಗಿರಿಗೆ ವಾಸ್ತವ್ಯ ಮಾಡಲಿದೆ. ಜ.19ರಂದು ಕನಕಗಿರಿಯಿಂದ ತಾವರಗೇರಾದಲ್ಲಿ ವಾಸ್ತವ್ಯ ಮಾಡಲಿದೆ. ಜ.20ರಂದು ಮುದೇನೂರ, ದೋಟಿಹಾಳ ಮತ್ತು ಜ.21ರಂದು ಇಳಕಲ್ಲ ನಲ್ಲಿ ವಾಸ್ತವ್ಯ ಮಾಡಲಿದೆ. ಜ.22ರಂದು ಹೂಲಗೇರಿ ಮತ್ತು ಗುಡೂರು ಜ.23ರಂದು ಕಾಟಾಪೂರ ಸಾಯಿಬಾಬಾ ಮಂದಿರದಲ್ಲಿ ವಾಸ್ತವ್ಯ ಮಾಡಲಿದೆ. ಜ.24ರಂದು ಸಂಜೆ 6 ಗಂಟೆಗೆ ಬಾದಾಮಿ-ಬನಶಂಕರಿ ತಲುಪಲಿದೆ. ಬನಶಂಕರಿ ಗಾಯತ್ರಿ ಪೀಠದ ಶಾಖಾ ಮಠದಿಂದ ಶ್ರೀ ಬನಶಂಕರಿದೇವಿ ದೇವಸ್ಥಾನಕ್ಕೆ ತೆರಳಿ ಬಾಗಿನ ಮತ್ತು ಪಿತಾಂಬರ ಸೀರೆ ಅರ್ಪಿಸಲಾಗುವುದು. ಭಕ್ತಾಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ:9448138476, 8142828284 ಸಂಪರ್ಕಿಸಬೇಕು ಪಾದಯಾತ್ರೆ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ತಿಳಿಸಿದ್ದಾರೆ.