ಕೇಂದ್ರ ಸರ್ಕಾರವನ್ನು ವಿಸರ್ಜನೆ ಮಾಡಿ ದೇಶಕ್ಕೆ ಮಾರಕವಾಗಿರುವ ಡಿಲಿಮಿಟೇಶನ್ ವಿಧೇಯಕವನ್ನು ಜನತೆಯ ಮುಂದಿಡಬೇಕು. ಇದೇ ವಿಚಾರವನ್ನು ಇಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕೇಂದ್ರ ಸರ್ಕಾರವನ್ನು ವಿಸರ್ಜನೆ ಮಾಡಿ ದೇಶಕ್ಕೆ ಮಾರಕವಾಗಿರುವ ಡಿಲಿಮಿಟೇಶನ್ ವಿಧೇಯಕವನ್ನು ಜನತೆಯ ಮುಂದಿಡಬೇಕು. ಇದೇ ವಿಚಾರವನ್ನು ಇಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ನೆಪದಲ್ಲಿ ಡಿಲಿಮಿಟೇಶನ್ ವಿಧೇಯಕದ ಮೂಲಕ ಈ ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ತೀರ್ಮಾನಿಸಿದೆ ಎಂದು ಗಂಭೀರ ಆರೋಪ ಮಾಡಿದರು.ಕ್ಷೇತ್ರ ವಿಂಗಡಣೆಯ ವಿಧೇಯಕವನ್ನು ಅಂಗೀಕರಿಸುವ ಸಲುವಾಗಿ ಕೇಂದ್ರ ಸರ್ಕಾರ ನ. 30ರಿಂದ 4 ದಿನಗಳ ಸಂಸತ್ತಿನ ತುರ್ತು ಅಧಿವೇಶನವನ್ನು ಕರೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಧೇಯಕಗಳು ಜನರ ಅಭಿಪ್ರಾಯದ ಮೇಲೆ ನಿರ್ಣಯವಾಗಬೇಕೇ ಹೊರತು ಜನರ ಮೇಲೆ ಹೇರಿಕೆ ಮಾಡಕೂಡದು. ಕೇಂದ್ರ ಸರ್ಕಾರವನ್ನು ವಿಸರ್ಜನೆ ಮಾಡಿ ದೇಶಕ್ಕೆ ಮಾರಕವಾಗಿರುವ ವಿಧೇಯಕವನ್ನು ಜನತೆಯ ಮುಂದಿಡಬೇಕು. ಇದೇ ವಿಚಾರವನ್ನು ಇಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ಸಿನ ವಿರೋದವಿಲ್ಲ. ಸಂಸತ್ತಿನಲ್ಲಿ ಮೊದಲು ಮಹಿಳಾ ಮೀಸಲಾತಿಯನ್ನು ಮಂಡಿಸಿದ್ದು ಕಾಂಗ್ರೆಸ್. ಆದರೆ ತುಳಿತಕ್ಕೊಳಗಾದವರು ಇದರಿಂದ ವಂಚಿತರಾಗುತ್ತಾರೆ ಎಂಬ ಕಾರಣಕ್ಕೆ ಸಂಸತ್ತಿನಲ್ಲಿ ಕೆಲವು ಪಕ್ಷಗಳಿಂದ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಇದಕ್ಕೆ ಸೋಲಾಗಿದೆ. ಹೀಗಾಗಿ ಮಹಿಳಾ ಮೀಸಲಾತಿಗೆ ನಮ್ಮ ವಿರೋದವಿಲ್ಲ. ಆದರೆ ಡಿಲಿಮಿಟೇಶನ್ ವಿಧೇಯಕವನ್ನು ವಿರೋದಿಸುತ್ತೇವೆ. ದೇಶದಲ್ಲಿ ಸಿದ್ದಾಂತಕ್ಕಾಗಿ ಹೋರಾಟ ಮಾಡುವವರ ಸಂಖ್ಯೆ ಕುಂಠಿತಗೊಳ್ಳುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.2011ರಿಂದ ದೇಶದಲ್ಲಿ ಜನಗಣತಿಯೂ ಆಗಿಲ್ಲ. ಹಣಕ್ಕಾಗಿ ಮಾರಿಕೊಳ್ಳುವವರ ಬೆಂಬಲದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೇ ವಿರುದ್ಧವಾಗಿರುವ ವಿಧೇಯಕ ಅಂಗೀಕಾರವಾಗುವ ಆತಂಕ ಇದೆ. ಎಷ್ಟು ಹಣ ಬೇಕಾದರೂ ಕೊಟ್ಟು ರಾಜಕೀಯ ಪಕ್ಷಗಳನ್ನೇ ಖರೀದಿಸುವ ಶಕ್ತಿ ಇರುವ ಬಿಜೆಪಿ ಈಗಾಗಲೇ ರಾಜಸ್ತಾನ ಗುಜರಾತಿನಲ್ಲಿ ಮಾಡಿ ತೋರಿಸಿದೆ. ಜಾತಿಗಣತಿ ಮಾಡುವ ಘೋಷಣೆಯನ್ನೂ ಮಾಡಿರುವ ಕೇಂದ್ರ ಸರ್ಕಾರ, ಆರ್ ಎಸ್ ಎಸ್ನ ಮೂಲ ಆಶಯದಂತೆ ಸಂವಿಧಾನವನ್ನೇ ಬದಲಾಯಿಸುವ ನಿರ್ಣಯಕ್ಕೆ ಬಂದಿದೆ ಎಂದು ದೂರಿದರು.
ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ಪಕ್ಷ ಗೆಲ್ಲುವ ಸ್ಥಾನಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರ ವಿಂಗಡಣೆ ಮಾಡಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಗಳೇ ವಜಾಗೊಳ್ಳುವ ಆತಂಕವಿದೆ. ಹಿಂದೂ ಸಂಘಟನೆಯ ಕಾಂಚನಗಂಗಾ ಮತ್ತು ಬಂಚ್ ಆಫ್ ಥಾಟ್ಸ್ನಲ್ಲಿ ಹೇಳಿರುವಂತೆ ಈ ಅವಧಿಯಲ್ಲೇ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಕೇಂದ್ರ ಸರ್ಕಾರ ಏನು ಬೇಕಾದರೂ ಮಾಡಲು ನಿಶ್ಚಯಿಸಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಪೂರ್ಣೇಶ್, ಶ್ರೇಯಸ್ ರಾವ್, ವಿಲಿಯಂ ಮಾರ್ಟಿಸ್ ಇದ್ದರು.