ರಾಜಾಜಿನಗರದಲ್ಲಿ ನಡೆದ ಒಂದೇ ಕುಟುಂಬದ ಏಳು ಮಂದಿ ನರಮೇಧ ಪ್ರಕರಣ ಸಂಬಂಧ ಆರೋಪಿ ಇಂದುಶೇಖರ್ನ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆತ ಇಂಗ್ಲಿಷ್, ಮಲಯಾಳಂ ಭಾಷೆಗಳ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಆತ ಪ್ರಭಾವಿತನಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಾಜಿನಗರದಲ್ಲಿ ನಡೆದ ಒಂದೇ ಕುಟುಂಬದ ಏಳು ಮಂದಿ ನರಮೇಧ ಪ್ರಕರಣ ಸಂಬಂಧ ಆರೋಪಿ ಇಂದುಶೇಖರ್ನ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆತ ಇಂಗ್ಲಿಷ್, ಮಲಯಾಳಂ ಭಾಷೆಗಳ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಆತ ಪ್ರಭಾವಿತನಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿಯು 7 ಮಂದಿಯನ್ನು ಯಾವ ರೀತಿ ಕೊಲೆ ಮಾಡಿ, ಶವಗಳನ್ನು ಹೇಗೆ ಸಾಗಿಸಿದೆ ಎಂಬ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಪತ್ನಿಯಿಂದ ಆಗುತ್ತಿದ್ದ ಕಿರುಕುಳ ಮತ್ತು ಆಕೆ ತನ್ನನ್ನು ತುಚ್ಛವಾಗಿ ನೋಡುತ್ತಿದ್ದುದು, ತವರು ಮನೆಯವರು ಆಕೆಗೆ ಬೆಂಬಲವಾಗಿ ನಿಂತಿದ್ದರಿಂದ ರೋಸಿಹೋಗಿ ಈ ಕೃತ್ಯ ಎಸಗಿದ್ದಾಗಿ ಇಂದು ಶೇಖರ್ ಹೇಳಿಕೊಂಡಿದ್ದಾನೆ. ಇಂಗ್ಲಿಷ್ ಮತ್ತು ಮಲಯಾಳಂ ಸಸ್ಪೆನ್ಸ್ ಮತ್ತು ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಪ್ರಭಾವಿತನಾಗಿದ್ದೆ. ಇಂಟರ್ನೆಟ್ ಜಾಲಾಡಿ ಕೊಲೆ ಹೇಗೆ ಮಾಡಬೇಕು? ಶವಗಳನ್ನು ಹೇಗೆ ಸಾಗಿಸಬೇಕು ಎಂಬ ಅಂಶಗಳನ್ನು ನೋಡಿ ತಿಳಿದುಕೊಂಡಿದ್ದೆ. ಅದರಂತೆಯೇ ಮೊದಲೇ ಪ್ಲಾನ್ ಮಾಡಿ ಕೃತ್ಯಕ್ಕೆ ಬೇಕಾದ ನಿದ್ರೆ ಮಾತ್ರೆ, ಹಗ್ಗ, ಚೀಲಗಳನ್ನು ತಂದಿಟ್ಟುಕೊಂಡಿದ್ದೆ. ಮೊದಲು ಪತ್ನಿಯನ್ನು ಕೊಲೆ ಮಾಡಿ, ಮಗಳ ಮೂಲಕ ಅವಳ ಅಜ್ಜಿ ಮತ್ತು ಸೋದರ ಮಾವಂದಿರು, ಅತ್ತೆಯಂದಿರುಗಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದೆ. ನಿದ್ರೆ ಮಾತ್ರೆ ಹಾಕಿದ ಊಟವನ್ನು ತಿಂದ ನಂತರ ಪ್ರಜ್ಞಾಹೀನರಾಗಿದ್ದಾಗ ಮನೆ ಹಾಲಿನಲ್ಲಿ ರುಬ್ಬುಕಲ್ಲಿನಿಂದ ಹೊಡೆದು ಕೊಲೆ ಮಾಡಿ ಶವಗಳನ್ನು ಬಾತ್ ರೂಂಗೆ ಎಳೆದೊಯ್ದು ಹಾಕುತ್ತಿದ್ದೆ, ಅಲ್ಲಿ ರಕ್ತ ಹರಿದು ಹೋದ ನಂತರ ಏಳು ಗೋಣಿಚೀಲಗಳಲ್ಲಿ ಒಂದು ಶವವನ್ನು ತುಂಬಿ ವಾಸನೆ ಬಾರದಂತೆ ರಾಸಾಯನಿಕ ವಸ್ತು ಸಿಂಪಡಿಸಿ ಕಾರಿನಲ್ಲಿ ಹಾಕಿಕೊಂಡು ಎಸೆದು ಬರುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.- ಬಾಕ್ಸ್-ಶವಕ್ಕೆ 10 ಲೇಯರ್ ಟೇಪ್ ಸುತ್ತಿದ್ದ!ವಿಚಾರಣೆ ವೇಳೆ ಆರೋಪಿಯ ಶವ ವಿಲೇವಾರಿ ಪ್ಲ್ಯಾನ್ ಕೇಳಿ ಸ್ವತಃ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಹತ್ಯೆ ಬಳಿಕ ಮೃತದೇಹಗಳನ್ನು ವಿಲೇವಾರಿ ಮಾಡಲು ಮಳಿಗೆಯಿಂದ 10-20 ಕೆ.ಜಿ. ಸಾಮರ್ಥ್ಯದ ಪ್ಲಾಸ್ಟಿಕ್ ಚೀಲಗಳನ್ನು ಆರೋಪಿ ಖರೀದಿಸಿ ತಂದಿದ್ದ. ಚೀಲದ ಕೆಳಭಾಗದಲ್ಲಿ ಹಳೇ ಬಟ್ಟೆಗಳನ್ನು ಹಾಕಿ ನಂತರ ಕೂರಿಸಿದ ರೀತಿಯಲ್ಲಿ ಮೃತದೇಹಕ್ಕೆ 10 ಲೇಯರ್ ಟೇಪ್ ಸುತ್ತಿ, ಚೀಲದಲ್ಲಿರಿಸಿ ಅದರ ಮೇಲೆ ಮತ್ತೆ ಬಟ್ಟೆ ತುಂಬುತ್ತಿದ್ದ. ತರುವಾಯ ಇಡೀ ಚೀಲಕ್ಕೆ ಮತ್ತೊಂದು ಚೀಲ ಹಾಕಿ ಕಟ್ಟುತ್ತಿದ್ದ. ಈ ಕೃತ್ಯಕ್ಕಾಗಿ ಆರೋಪಿ 30ಕ್ಕೂ ಹೆಚ್ಚು ಟೇಪ್ ಬಂಡಲ್ ಖರೀದಿಸಿದ್ದ. ಶವಗಳಿಂದ ದುರ್ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿದ್ದ. ನಂದಿಬೆಟ್ಟದ ತಪ್ಪಲಲ್ಲಿ ಪತ್ತೆಯಾದ ಬಾಲಕ ಪುನೀತ್ ಮೃತದೇಹಕ್ಕೂ ಇದೇ ರೀತಿ ಟೇಪ್ ಸುತ್ತಿದ್ದ. ಜತೆಗೆ ಕಾರಿನ ಮೇಲೆ ಪ್ರೆಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಾಕ್ಸ್ಮತ್ತೆರಡು ಮೃತ ದೇಹ ಪತ್ತೆ
ಇಂದುಶೇಖರ್ನಿಂದ ಕೊಲೆಗೀಡಾಗ 7 ಜನರ ಪೈಕಿ ಮತ್ತಿಬ್ಬರ ಮೃತದೇಹ ಭಾನುವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿ ಪತ್ತೆಯಾಗಿದೆ. ಆರೋಪಿ ಇಂದುಶೇಖರ್ ಬಾಮೈದ ಶಿವಕುಮಾರ್, ಪತ್ನಿ ದಿವ್ಯ ಅವರ ಮೃತದೇಹ ಪತ್ತೆಯಾಗಿದ್ದು, ಒಟ್ಟು ಐವರ ಮೃತದೇಹಗಳು ಸಿಕ್ಕಂತಾಗಿದೆ. ಇನ್ನುಳಿದ ಎರಡು ಮೃತದೇಹಗಳಿಗೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.