ಸಾರಾಂಶ
ಬಡಿಗವಾಡ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆಯಡಿ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಘಟಪ್ರಭಾ
ಸಮೀಪದ ಬಡಿಗವಾಡ ಗ್ರಾಮದಲ್ಲಿ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ಸಾಮಾಜಿಕ ಅರಣ್ಯ ವಲಯ ಪ್ರಾದೇಶಿಕ ಅರಣ್ಯ ವಲಯ, ಶಿಕ್ಷಣ ಇಲಾಖೆ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಗೋಕಾಕ ಹಾಗೂ ತಾಪಂ ಗೋಕಾಕ ಇವರ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆಯಡಿ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ನಾಯಿಕ, ಉಪಾಧ್ಯಕ್ಷೆ ಶಿವಕ್ಕ ಪಿಡಾಯಿ, ಅಭಿವೃದ್ಧಿ ಅಧಿಕಾರಿಗಳಾದ ಉಮೇಶ ಮನಗೂಳಿ, ಸದಸ್ಯರಾದ ರಾಮಪ್ಪ ಪಿಡಾಯಿ, ಸಿದ್ದವ್ವ ನಾಯಿಕ, ವಾಣಿ ಮಲ್ಲಾಪೂರ, ಕಲ್ಲಪ್ಪ ನಾಯಿಕ, ಪುಂಡಲೀಕ ಕೊರವ್ವಗೋಳ, ಪುಂಡಲೀಕ ಬಾಲಯ್ಯಗೋಳ, ವಿಠ್ಠಲ ಪರೀಟ, ದರೆಪ್ಪ ಕರಗಾಂವಿ, ಪ್ರಕಾಶ ನಾಯಿಕ, ವಾಸು ಚೂನ್ನವರ, ಬಾಪು ಗದಾಡಿ, ಶಾಂತವ್ವ ರಡರಟ್ಟಿ, ಭೀಮವ್ವ ಕೋರವ್ವಗೋಳ, ಹಾಲವ್ವ ರಡರಟ್ಟಿ ಸೇರಿ ಸಿಬ್ಬಂದಿ ಗ್ರಾಮಸ್ಥರು ಇದ್ದರು.