ನೆಡುತೋಪಿನ ಮರ ಕಡಿದ ಪ್ರಕರಣ: ಕ್ರಮಕ್ಕೆ ಸಿಎಫ್‌ ಹಿಂದೇಟು!

| Published : Mar 02 2024, 01:49 AM IST

ಸಾರಾಂಶ

ಗುಂಡ್ಲುಪೇಟೆ-ಕೇರಳ ರಸ್ತೆಯ ಲೇ ಔಟ್‌ ನ ಮುಂದಿನ ನೆಡುತೋಪಿನ ಮರ ಕಡಿದು ಮೂರು ತಿಂಗಳಾದರೂ ಗುಂಡ್ಲುಪೇಟೆ ಬಫರ್‌ ಜೋನ್‌ ನ ಅಧಿಕಾರಿಗಳು ಕೇಸು ದಾಖಲಿಸದ ಅಧಿಕಾರಿಗಳ ಮೇಲೇಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆ-ಕೇರಳ ರಸ್ತೆಯ ಲೇ ಔಟ್‌ ನ ಮುಂದಿನ ನೆಡುತೋಪಿನ ಮರ ಕಡಿದು ಮೂರು ತಿಂಗಳಾದರೂ ಗುಂಡ್ಲುಪೇಟೆ ಬಫರ್‌ ಜೋನ್‌ ನ ಅಧಿಕಾರಿಗಳು ಕೇಸು ದಾಖಲಿಸದ ಅಧಿಕಾರಿಗಳ ಮೇಲೇಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.ಗುಂಡ್ಲುಪೇಟೆ ಬಫರ್‌ ಜೋನ್‌ ವಲಯದ ತೆರಕಣಾಂಬಿ ಬಳಿ ಜಿಂಕೆ ಸತ್ತ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ, ಬೇಜವಬ್ದಾರಿ ತನಕದ ಮೇಲೆ ಡಿಆರ್‌ಎಫ್‌ಒ ರಾಮಲಿಂಗಪ್ಪ ಎಸ್‌ರನ್ನು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಫೆ.೧೫ ರಂದು ಅಮಾನತ್ತು ಪಡಿಸಿದ್ದಾರೆ.ಆದರೆ ಗುಂಡ್ಲುಪೇಟೆ-ಕೇರಳ ರಸ್ತೆಯ ಪಟ್ಟಣದ ಬಳಿಯ ಲೇ ಔಟ್‌ನ ಮುಂದಿನ ನೆಡತೋಪಿನ ೨೦ ಕ್ಕೂ ಹೆಚ್ಚು ಮರಗಳನ್ನು ಕಡಿದರೂ ಬಫರ್‌ ಜೋನ್‌ ವಲಯದ ಅಧಿಕಾರಿಗಳು ದೂರು ದಾಖಲಿಸಿಲ್ಲ. ದಂಡವನ್ನು ಕಟ್ಟಿಸಿಲ್ಲ ಇದು ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿ ತನವಲ್ಲವೇ ಅರಣ್ಯ ಸಂರಕ್ಷಣಾಧಿಕಾರಿಗಳೇ ಎಂದು ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಗ್ರಾಪಂ ಅಧ್ಯಕ್ಷ ಶಿವಪುರ ಮಹದೇವಪ್ಪ ಪ್ರಶ್ನಿಸಿದ್ದಾರೆ. ಕೂಡಲೇ ನೆಡುತೋಪಿನ ಮರ ಕಡಿದ ಲೇ ಔಟ್‌ ಮಾಲೀಕರ ಮೇಲೆ ಕೇಸು ದಾಖಲಿಸಬೇಕು ಅಲ್ಲದೆ ಮೂರು ತಿಂಗಳಿನಿಂದ ಕೇಸು ದಾಖಲಿಸದೆ ಕರ್ತವ್ಯ ಲೋಪ ಎಸಗಿದ ಆರ್‌ಎಫ್‌ಒ, ಎಸಿಎಫ್‌ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟಣದ ನಿವಾಸಿ ರಾಜು ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.ಸಿಎಫ್‌ ಶಾಮೀಲು?:ನೆಡುತೋಪಿನ ಮರ ಕಡಿದು ಮೂರು ತಿಂಗಳಾಗುತ್ತಿದ್ದರೂ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಕೇಸು ದಾಖಲಿಸದೆ ಇರಲು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಶಾಮೀಲಾಗಿರುವುದೇ ಕಾರಣ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂಡೀಪುರ ಅರಣ್ಯದಲ್ಲಿ ಜಿಂಕೆ ಸತ್ತ ಪ್ರಕರಣ ಹಾಗೂ ನೆಡುತೋಪಿನ ಮರ ಕಡಿದ ಪ್ರಕರಣದ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರವೇ ಮುಖಂಡ ರಾಜೇಶ್‌ ಆಗ್ರಹಿಸಿದ್ದಾರೆ.