ಗಿಡ, ಪ್ರಾಣಿ, ಪಕ್ಷಿ ಪರಿಸರ ಸಮತೋಲನಕ್ಕೆ ಸಹಕಾರಿ: ಸುನೀಲ ಬಾಗೇವಾಡಿ

| Published : Nov 17 2025, 01:15 AM IST

ಗಿಡ, ಪ್ರಾಣಿ, ಪಕ್ಷಿ ಪರಿಸರ ಸಮತೋಲನಕ್ಕೆ ಸಹಕಾರಿ: ಸುನೀಲ ಬಾಗೇವಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗಿಡ , ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗ. ಇವು ಪರಿಸರ ಸಮತೋಲನಕ್ಕೆ ಸಹಕಾರಿ ಎಂದು ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು.

ಧಾರವಾಡ: ಗಿಡ , ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗ. ಇವು ಪರಿಸರ ಸಮತೋಲನಕ್ಕೆ ಸಹಕಾರಿ ಎಂದು ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು.

ಧಾರವಾಡದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕಲಾಸ್ಪಂದನ ಸಂಸ್ಥೆ ಜಂಟಿಯಾಗಿ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹಿರೇಬಾಸೂರು ಸರ್ಕಾರ ಪ್ರೌಢಶಾಲೆಯಲ್ಲಿ ಯುವ ಚಿಂತನಾ ಸಮಾವೇಶದ ಪ್ರಯುಕ್ತ ಏರ್ಪಡಿಸಿದ್ದ ಪರಿಸರ ಕುರಿತ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ನೆಮ್ಮದಿಯ ಬದುಕು ನಡೆಸಲು ಪರಿಸರ ಸಮತೋಲದಿಂದಿರಬೇಕು. ಪರಿಸರ ಸಂರಕ್ಷಣೆಯಿಂದ ಮಾತ್ರ ಉತ್ತಮ ಜೀವನ ಸಾಧ್ಯ ಎಂದರು.

ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಪಕ್ಷಿಮಿತ್ರ ಪ್ರಕಾಶ ಗೌಡರ ಪಕ್ಷಿಗಳ ಕುರಿತು ಉಪನ್ಯಾಸ ನೀಡಿ, ಅರಣ್ಯ ಸಂಪತ್ತು ಹಲವಾರು ಕಾರಣಗಳಿಂದ ಕಡಿಮೆಯಾಗುತ್ತಿದೆ. ಇದರಿಂದ ಪಕ್ಷಿಗಳ ಸಂತತಿಗೆ ಕುತ್ತು ಬಂದಿದೆ. ಪರಿಸರ ಸಂರಕ್ಷಣೆಗೆ ಮುನುಕುಲ ನಿಷ್ಕಾಳಜಿ ತೋರುತ್ತಿದೆ. ಮುಂದಿನ ಜನಾಂಗಕ್ಕೆ ಪಕ್ಷಿಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಸರ್ಕಾರಿ ಪ್ರೌಢಶಾಲೆಯ ಪ್ರಧಾನ ಗುರುಗಳಾದ ಬಸಪ್ಪ ಕೊರಗರ, ಪಾಲಕರು ಮತ್ತು ಪೋಷಕರು ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಪ್ಪ ಬಣಕಾರ, ಸಂಘಟಕ ಮಾರ್ತಾoಡಪ್ಪ ಕತ್ತಿ, ಕಲಾಸ್ಪಂದನ ಹಾವೇರಿಯ ಕೋಶಾಧ್ಯಕ್ಷ ಜಗದೀಶ ಕತ್ತಿ ಮಾತನಾಡಿದರು.

ಎಸ್‌.ಎಂ. ಕ್ವಾರಡಿ ನಿರೂಪಿಸಿದರು. ಚಂದ್ರಸೇಖರ ಬಣಕಾರ ಸ್ವಾಗತಿಸಿದರು. ಬಿ.ಎಸ್. ಆರಿಕಟ್ಟಿ ವಂದಿಸಿದರು.