ಆಡುವ ಸಮಯದಲ್ಲಿ ಆಡಿ ಓದುವ ಸಮಯದಲ್ಲಿ ಓದಿ

| Published : Nov 16 2025, 02:00 AM IST

ಸಾರಾಂಶ

ವಿದ್ಯಾರ್ಥಿಗಳು ಒಳ್ಳೆಯ ಗುರಿಯನ್ನು ತಲುಪುವ ಸಲುವಾಗಿ ೧೦ ರಿಂದ ೨೦ ವರ್ಷ ಏಕಾಗ್ರತೆ ಹಾಗೂ ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು, ಶಿಕ್ಷಕರ ಮಾರ್ಗದರ್ಶದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೇ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಎಂದರು. ಶಿಕ್ಷಕರು ಕೆಲವೊಂದು ತಿನಿಸುಗಳು, ಪಾನೀಯಗಳು ಹಾಗೂ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಸಲಹೆ ನೀಡಿರುತ್ತಾರೆ. ಅಂತಹ ವಸ್ತುಗಳನ್ನು ನೀವುಗಳು ಟೆಷ್ಟ್ ಕೂಡು ಮಾಡಬಾರದು, ಆರೋಗ್ಯಕ್ಕೆ ಕೆಟ್ಟದ್ದು ಎಂದು ಪೋಷಕರು, ಶಿಕ್ಷಕರು ಹೇಳುವ ಯಾವುದೇ ವಸ್ತುಗಳಿಂದ ದೂರವಿರಿ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ವಿದ್ಯಾರ್ಥಿಗಳು ಆಟಕ್ಕೆ ಹೆಚ್ಚು ಗಮನ ನೀಡದೇ, ತಂದೆ, ತಾಯಿ, ಶಿಕ್ಷಕರು ಹೇಳಿದ ಮಾತುಗಳನ್ನು ಕೇಳಬೇಕು. ಅವರು ಹೇಳುವ ಮಾತುಗಳು ನಿಮ್ಮ ಏಳಿಗೆಗೆ ಎಂದು ತಿಳಿಯಬೇಕು. ನಿಮಗೆ ಈಗಿನ ವಯಸ್ಸಿನಲ್ಲಿ ಏನು ಹೇಳಿದರೂ ಅರ್ಥವಾಗುವುದಿಲ್ಲ. ಆದ್ದರಿಂದ ಆಟದ ಸಮಯದಲ್ಲಿ ಆಡಬೇಕು, ಓದಿನ ಸಮಯದಲ್ಲಿ ಏಕಾಗ್ರತೆಯಿಂದ ಕಲಿಯಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಸಲಹೆ ನೀಡಿದರು.ಪಟ್ಟಣದ ಕೋಟೆಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಹಾಗೂ ಮಾದಕ ದ್ರವ್ಯ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಕಾನೂನು ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಡಿತ್ ನೆಹರೂ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಶ್ರಮಿಸಿದ ಮಹನೀಯರು ಶಿಸ್ತುಬದ್ಧ ಜೀವನ ರೂಪಿಸಿಕೊಂಡು ಬಂದವರು, ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ಗುರಿಯನ್ನು ತಲುಪುವ ಸಲುವಾಗಿ ೧೦ ರಿಂದ ೨೦ ವರ್ಷ ಏಕಾಗ್ರತೆ ಹಾಗೂ ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು, ಶಿಕ್ಷಕರ ಮಾರ್ಗದರ್ಶದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೇ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಎಂದರು. ಶಿಕ್ಷಕರು ಕೆಲವೊಂದು ತಿನಿಸುಗಳು, ಪಾನೀಯಗಳು ಹಾಗೂ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಸಲಹೆ ನೀಡಿರುತ್ತಾರೆ. ಅಂತಹ ವಸ್ತುಗಳನ್ನು ನೀವುಗಳು ಟೆಷ್ಟ್ ಕೂಡು ಮಾಡಬಾರದು, ಆರೋಗ್ಯಕ್ಕೆ ಕೆಟ್ಟದ್ದು ಎಂದು ಪೋಷಕರು, ಶಿಕ್ಷಕರು ಹೇಳುವ ಯಾವುದೇ ವಸ್ತುಗಳಿಂದ ದೂರವಿರಿ ಎಂದು ಸಲಹೆ ನೀಡಿದರು.ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಬಿಇಒ ಸೋಮಲಿಂಗೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಇತರರು ಮಾತನಾಡಿದರು. ಮುಖ್ಯ ಶಿಕ್ಷಕ ರಾಜು ಪಿ., ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ, ಬಿಆರ್‌ಪಿ ನಾಗರಾಜು, ಸಿಆರ್‌ಪಿ ಚಂದ್ರಶೇಖರ್, ಎಸ್‌ಡಿಎಂಸಿ ಸದಸ್ಯ ಪ್ರಭಾಕರ್, ಇತರರು ಇದ್ದರು.