ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ಭಾನುವಾರ ಬಹಳ ಬಿರುಸಿನಿಂದ ಚುನಾವಣೆ ನಡೆಯಿತು.ಒಟ್ಟು 1539 ಮಂದಿ ಮತದಾರರಿದ್ದಾರೆ. ಸಾಲಗಾರರ ಕ್ಷೇತ್ರದಿಂದ ದಂಡಿನಶಿವರ- 399 ಮತದಾರರಿದ್ದರು. ಅವರ ಪೈಕಿ 380 ಮತಗಳು ಚಲಾವಣೆ ಆಗಿದೆ. ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಯಲ್ಲಿ ಒಟ್ಟು 323 ಮತದಾರರಿದ್ದರು. ಇವರ ಪೈಕಿ 304 ಮತಗಳು ಚಲಾವಣೆ ಆಗಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಒಟ್ಟು 816 ಮಂದಿ ಮತದಾರರು ಇದ್ದರು. ಇವರ ಪೈಕಿ 666 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಚುನಾವಣೆಯಲ್ಲಿ ಮತ ಹಾಕಲು ಮತ್ತು ಸ್ಪರ್ಧಿಸಲು ಶ್ರೀನಿವಾಸ್ ಗೌಡ ಎಂಬುವವರಿಗೆ ತಾಂತ್ರಿಕ ಅಂಶಗಳ ಮೇರೆಗೆ ಬ್ಯಾಂಕ್ ಅವಕಾಶ ನೀಡಿರಲಿಲ್ಲ. ಇದನ್ನು ಆಕ್ಷೇಪಿಸಿ ಶ್ರೀನಿವಾಸ್ ಗೌಡ ಹೈಕೋರ್ಟ್ ಮೆಟ್ಟಿಲೇರಿ ಸಹಕಾರ ಸಂಘದ ನಿರ್ಣಯಕ್ಕೆ ತಡೆ ತಂದಿದ್ದರು. ಅಲ್ಲದೇ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 3 ನೇ ತಾರೀಖಿಗೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರೂ ಆಗಿರುವ ಶ್ರೀನಿವಾಸ್ ಗೌಡ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಅಲ್ಲದೇ ಮತದಾನವನ್ನೂ ಸಹ ಮಾಡಿದ್ದರು. ತಾಲೂಕು ರೈತ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ ಗೌಡರು ಚಲಾಯಿಸಿದ ಮತವನ್ನು ಪ್ರತ್ಯೇಕ ಮತಪೆಟ್ಟಿಗೆ ಮಾಡಿ ರಕ್ಷಿಸಿಡಲಾಗಿದೆ. ಇಂದು ನ್ಯಾಯಾಲಯದಲ್ಲಿ ಆಗುವ ತೀರ್ಮಾನದ ಮೇರೆಗೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಣಯ ಆಗಲಿದೆ. ನ್ಯಾಯಾಲಯವು ಇವರ ಮತದಾನದ ಹಕ್ಕು ಮತ್ತು ಅಭ್ಯರ್ಥಿಯಾಗುವ ಹಕ್ಕನ್ನು ಎತ್ತಿ ಹಿಡಿದರೆ ಶ್ರೀನಿವಾಸ ಗೌಡರು ಹಾಕಿರುವ ಮತವನ್ನು ಮತ್ತು ಅವರ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು. ಅಥವಾ ಅವರ ಮನವಿಯನ್ನು ವಜಾಗೊಳಿಸಿದರೆ ಅವರು ಮಾಡಿರುವ ಮತದಾನ ಮತ್ತು ಅವರು ಸ್ಪರ್ಧಿಸಿರುವುದನ್ನೂ ಸಹ ಅಮಾನ್ಯಗೊಳಿಸಲಾಗುವುದು ಎಂದು ತಿಳಿದುಬಂದಿದೆ.
)
)
;Resize=(128,128))
;Resize=(128,128))