ಕಳೆದ ವಿಧಾನಸಭಾ ಚುನಾವಣೆಯಲ್ಲಿ ೩೫ ಸಾವಿರಕ್ಕೂ ಹೆಚ್ಚು ಅಂತರದಿಂದ ಸೋತು ಬಸವಳಿದ್ದ ಬಿಜೆಪಿಗೆ ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅತೀ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಟಾನಿಕ್ ಕೊಟ್ಟಂತಾಗಿದೆ.
ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಸದ್ದಿಲ್ಲದೇ ಅರಳಿಸುವಲ್ಲಿ ಬಿಜೆಪಿಗರ ಸಂಘಟಿತ ಹೋರಾಟಕ್ಕೆ ಪ್ರತಿಫಲಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಳೆದ ವಿಧಾನಸಭಾ ಚುನಾವಣೆಯಲ್ಲಿ ೩೫ ಸಾವಿರಕ್ಕೂ ಹೆಚ್ಚು ಅಂತರದಿಂದ ಸೋತು ಬಸವಳಿದ್ದ ಬಿಜೆಪಿಗೆ ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅತೀ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಟಾನಿಕ್ ಕೊಟ್ಟಂತಾಗಿದೆ.ಪಿಎಲ್‌ಡಿ ಬ್ಯಾಂಕ್ ೧೪ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ತಲಾ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ೧೨ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ೧೧ ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತರು ಚುನಾವಣೆಯಲ್ಲಿ ಒಂದಂಕಿ ದಾಟಲು ಪರದಾಡುವಂತೆ ಮಾಡುವಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲ ಯಶ ಕಂಡಿದೆ. ವಿಧಾನಸಭಾ ಚುನಾವಣೆಯ ಬಳಿಕ ಕಂಗೆಟ್ಟಿದ್ದ ಕಾರ್ಯಕರ್ತರಿಗೆ ಈ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹುಮ್ಮಸ್ಸು ತಂದಿದೆ.ತಂತ್ರಕ್ಕೆ ಪ್ರತಿ ತಂತ್ರ:
ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಗೆಲುವಂತೆ ಮಾಡುವಲ್ಲಿ ಬಿಜೆಪಿಗರ ಸಂಘಟಿತ ಹೋರಾಟ ಕಾರಣವಾಗಿದೆ. ಶಾಸಕರ ಕೆಲ ಬೆಂಬಲಿಗರ ಅತಿರೇಕದ ವರ್ತನೆಯನ್ನು ಜನರಿಗೆ ಮುಟ್ಟಿಸಿ, ಚುನಾವಣೆ ಕಣವನ್ನು ಆಡಂಬರ ಮಾಡದೆ ತನ್ನ ಕೆಲಸ ಸಾಧಿಸಿಕೊಂಡು ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾಗಿದ್ದಾರೆ.ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಅವಧಿ ಮುಗಿದ ಬಳಿಕ ಬ್ಯಾಂಕ್ ಆಡಳಿತಾಧಿಕಾರಿ ನೇಮಕವಾದ ವರ್ಷದ ಬಳಿಕ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿ ಬಿಜೆಪಿ ಕೆಲ ಮುಖಂಡರು ಸ್ಪರ್ಧೆಗೆ ಅವಕಾಶ ಸಿಗದಂತೆ ಕಾಂಗ್ರೆಸ್ಸಿಗರು ಮಾಡಿದರೂ ಎಂದು ಮತದಾರರ ಮನ ಮುಟ್ಟಿಸಿ ಮತ್ತೆ ಕಮಲ ಅರಳಿಸುವಲ್ಲಿ ಪಕ್ಷದ ಮುಖಂಡರು ಶ್ರಮ ಇದೆ.ಶಾಸಕರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್ ಹಾಗೂ ಸ್ಥಳೀಯ ಮುಖಂಡರು ಅಭ್ಯರ್ಥಿಗಳ ಆಯ್ಕೆಯಲ್ಲಿ ಅಳೆದು ತೂಗಿದ್ದು ಗೆಲುವಿಗೆ ಪೂರಕ ವಾತಾವರಣ ಬರಲು ಕಾರಣವಾಯಿತು.ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲುವಿನ ತಂತ್ರ ಎಣೆಯುವ ಗೋಜಿಗೆ ಹೋಗಲಿಲ್ಲ. ಇದನ್ನು ಅರ್ಥ ಮಾಡಿಕೊಂಡ ಮಾಜಿ ಸಚಿವ ದಿ। ಮಹದೇವ ಪ್ರಸಾದ್ ಪಾಳೆಯದಲ್ಲಿದ್ದ ಇದೀಗ ಬಿಜೆಪಿಯಲ್ಲಿರುವ ಕೆಲ ಮುಖಂಡರು ಅಭ್ಯರ್ಥಿಗಳ ಆಯ್ಕೆ ಹಾಗೂ ಮತದಾರರ ಮನವೊಲಿಸಲು ನಡೆಸಿದ ತಂತ್ರ ಹಾಗೂ ಕೆಲ ಅಭ್ಯರ್ಥಿಗಳಿಗೆ ಸಂಪನ್ಮೂಲ ಕೊಟ್ಟಿದ್ದೂ ಕೂಡ ಗೆಲುವಿಗೆ ಸಹಕಾರಿಯಾಯಿತು.ಬಿಜೆಪಿಗೆ ಟಾನಿಕ್‌ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕಿಂತಲೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್ ಪಾಳೆಯಕ್ಕೆ ಬಿಜೆಪಿ ಮುಖಂಡರು ಸರಿಯಾದ ಹೊಡೆತ ಕೊಡುವ ಮೂಲಕ ಸ್ವಲ್ಪ ಮಂಕು ಕವಿದಂತಿದ್ದ ಕಾರ್ಯಕರ್ತರಿಗೆ ಈ ಗೆಲುವು ಟಾನಿಕ್ ರೀತಿ ಕೆಲಸ ಮಾಡಲು ಚೇತರಿಕೆ ಕೊಟ್ಟಂತಾಗಿದೆ.-ಪಿಎಲ್‌ಡಿ ಬ್ಯಾಂಕ್ ಚುನಾವಣೆ ಗೆಲುವು ಪಕ್ಷದ ಕಾರ್ಯಕರ್ತರಿಗೆ ಟಾನಿಕ್ ಸಿಕ್ಕಿದಂತಾಗಿದೆ. ಈ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲ. ಸ್ಥಳೀಯ ಶಾಸಕರ ರೈತ ವಿರೋಧಿ ನಡೆ ಕೂಡ ಗೆಲುವಿಗೆ ಪೂರಕವಾಗಿದೆ.- ಸಿ.ಎಸ್. ನಿರಂಜನ್ ಕುಮಾರ್, ಮಾಜಿ ಶಾಸಕ--೪ಜಿಪಿಟಿ೧ಸಿ.ಎಸ್.ನಿರಂಜನ್ ಕುಮಾರ್