ನರೇಂದ್ರ ಮೋದಿ ಅವರ ದೂರ ದೃಷ್ಟಿಯಿಂದ ನಮ್ಮ ದೇಶ ಸುಭದ್ರವಾಗಿದೆ. ವಿಶ್ವದಲ್ಲಿ ಮೋದಿ ಅವರನ್ನು ಪ್ರೀತಿಸುವ ದೇಶಗಳು ಹೆಚ್ಚಾಗಿವೆ. ನಮ್ಮ ದೇಶದ ಸಂಸ್ಕೃತಿಗೆ ಹಾಗೂ ಆಡಳಿತದ ವೈಖರಿ ಮೆಚ್ಚಿ ವಿದೇಶಿಗರು ಮಾರು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಗ್ರಾಮದ ಭೈರವೇಶ್ವರ ದೇವಾಲಯದ ಬಳಿ ಬಿಜೆಪಿ ಕಾರ್ಯಕರ್ತರು, ಬಡಾವಣೆ ನಿವಾಸಿಗಳು ಸ್ವಚ್ಛತಾ ಆಂದೋಲನ ಹಾಗೂ ಸಸಿ ನೆಡುವ ಮೂಲಕ ಆಚರಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹಾಗೂ ಜಿಪಂ ಮಾಜಿ ಸದಸ್ಯ ಎಸ್.ಎಲ್ ಲಿಂಗರಾಜು ಅವರ ನೇತೃತ್ವದಲ್ಲಿ ಬೈರವೇಶ್ವರನಿಗೆ ಪೂಜೆ ಸಲ್ಲಿಸಿ ಸ್ವಚ್ಛತಾ ಆಂದೋಲನ ಜೊತೆಗೆ ಗಿಡ ನೆಟ್ಟು ಚಾಲನೆ ನೀಡಲಾಯಿತು.ನಂತರ ಡಾ.ಸಿದ್ದರಾಮಯ್ಯ ಮಾತನಾಡಿ, ರಾಷ್ಟ್ರವ್ಯಾಪಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 25ನೇ ವರ್ಷದ ಜನಸೇವಾ ಕೃತಜ್ಞತಾ ಸಂಕೇತವಾಗಿ ಸೇವಾ ಸಂಕಲ್ಪ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನರೇಂದ್ರ ಮೋದಿ ಅವರ ದೂರ ದೃಷ್ಟಿಯಿಂದ ನಮ್ಮ ದೇಶ ಸುಭದ್ರವಾಗಿದೆ. ವಿಶ್ವದಲ್ಲಿ ಮೋದಿ ಅವರನ್ನು ಪ್ರೀತಿಸುವ ದೇಶಗಳು ಹೆಚ್ಚಾಗಿವೆ. ನಮ್ಮ ದೇಶದ ಸಂಸ್ಕೃತಿಗೆ ಹಾಗೂ ಆಡಳಿತದ ವೈಖರಿ ಮೆಚ್ಚಿ ವಿದೇಶಿಗರು ಮಾರು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು ಮಾತನಾಡಿ, ಇಡೀ ಜಗತ್ತು ಭಾರತವನ್ನು ಒಮ್ಮೆ ಕಣ್ಣು ತೆರೆದು ನೋಡುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು. ಅವರ ಜನ್ಮದಿನವನ್ನು ವಿವಿಧ ಜನ ಪರ ಯೋಜನೆಗಳ ಮೂಲಕ ಅಭಿಯಾನ ನಡೆಸಿ ಆಚರಣೆ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ದೇವಾಲಯದ ಆವರಣದಲ್ಲಿನ ಕಸ ಹಾಗೂ ಗಿಡ ಗೆಂಟೆ ಕಿತ್ತು ಅಲಂಕಾರದ ಗಿಡ ನೆಟ್ಟು ನೀರುಣಿಸಿದರು. ಈ ವೇಳೆ ಗ್ರಾಮದ ಬಿಜೆಪಿ ಮುಖಂಡ ಮಲ್ಲೇಶ್, ಗ್ರಾ.ಪಂ ಮಾಜಿ ಸದಸ್ಯ ಸಂತೋಷ್, ಬಿಜೆಪಿ ಮಹಿಳಾ ಅಧ್ಯಕ್ಷೆ ಮಾನಸ, ಜಿಲ್ಲಾ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ದೇವೀರಮ್ಮ, ಗ್ರಾಮದ ಯಜಮಾನ್ ಶ್ರೀನಿವಾಸೇಗೌಡ, ಲೋಕೇಶ್, ಬಾಬು, ವಿಷಕಂಠೇಗೌಡ ಸೇರಿ ಇತರೆ ಬಿಜೆಪಿ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.------------
25ಕೆಎಂಎನ್ ಡಿ25ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಭೈರವೇಶ್ವರ ದೇವಾಲಯದ ಬಳಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು, ಬಡಾವಣೆ ನಿವಾಸಿಗಳಿಂದ ಸ್ವಚ್ಛತಾ ಆಂದೋಲನ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.