ದೇಶವನ್ನು ಹೆಚ್ಚು ಅಭಿವೃದ್ಧಿ ಪಡಿಸುತ್ತಾರೆ ಪ್ರಧಾನಿ ಮೋದಿ: ಡಿ.ಎಸ್.ಸುರೇಶ್

| Published : Jun 10 2024, 12:32 AM IST

ದೇಶವನ್ನು ಹೆಚ್ಚು ಅಭಿವೃದ್ಧಿ ಪಡಿಸುತ್ತಾರೆ ಪ್ರಧಾನಿ ಮೋದಿ: ಡಿ.ಎಸ್.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಜನರ ಆಶೀರ್ವಾದದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸುತ್ತಾರೆ ಎಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದ್ದಾರೆ.

ಭಾರತಾಂಬೆಗೆ ಕ್ಷೀರಾಭಿಷೇಕ । ತೆಂಗಿನ ಕಾಯಿ ಒಡೆದು, ಭಾರೀ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಜನರ ಆಶೀರ್ವಾದದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸುತ್ತಾರೆ ಎಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದ್ದಾರೆ.ಭಾನುವಾರ, ನರೇಂದ್ರ ಮೋದಿ ಅವರು ದೇಶದ ಪ್ರಧಾನಿಗಳಾಗಿ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಬಲಿಜ ಸಮಾಜದ ಯುವ ಮುಖಂಡ ಟಿ.ಎನ್.ವೆಂಕಟೇಶ ನಾಯ್ಡು, ಮೋದಿ ಅಭಿಮಾನಿ ಬಳಗದಿಂದ ಪಟ್ಟಣದ ಶ್ರೀ ಸಾಲುಮರದಮ್ಮದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಾರತಾಂಬೆಗೆ ಕ್ಷೀರಾಭಿಷೇಕ, ತೆಂಗಿನ ಕಾಯಿ ಒಡೆದು, ಭಾರೀ ಪಟಾಕಿ ಸಿಡಿಸಿ, ಸಿಹಿ ಹಂಚಿ ಶುಭ ಕೋರುವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಪ್ರಧಾನ ಮೋದಿ ಅವರು ದೇಶದ ಇಡೀ ಚಿತ್ರ ಬದಲಾಯಿಸಲು 100 ದಿನಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಗೊಳಿಸಿದ್ದಾರೆ. ಐದು ವರ್ಷ ಯಾವುದೇ ವಿಘ್ನಗಳು ಬಾರದಂತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತೆಂಗಿನ ಕಾಯಿ ಒಡೆಯಲಾಗಿದೆ. ತಾಲೂಕಿನಾದ್ಯಂತ ಎಲ್ಲ ಬೂತ್ ಗಳಲ್ಲಿಯೂ ಇದೇ ರೀತಿ ಮೋದಿ ಅವರಿಗೆ ಶುಭ ಕೋರಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅತ್ಯಧಿಕ ಬಹುಮತ ಪಡೆದು ಗೆಲುವು ಸಾಧಿಸಿದ್ದಾರೆ. ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅತ್ಯಧಿಕ ಮತ ನೀಡಿ ಗೆಲುವಿಗೆ ಸಹಕರಿಸಿದ ಕ್ಷೇತ್ರದ ಮತದಾರರಿಗೆ ಕಾರ್ಯಕರ್ತರಿಗೆ ಅವರು ಕೃತಜ್ಞತೆ ತಿಳಿಸಿದರು.ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್ ಮಾತನಾಡಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಐದು ವರ್ಷ ಯಾವುದೇ ರೀತಿ ವಿಘ್ನಗಳು ಬಾರದಂತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿದೆ. ಬಾರತಾಂ ಬೆಗೆ ಕ್ಷೀರಾಭಿಷೇಕ ನಡೆಸಿ ಸಿಹಿ ಹಂಚಲಾಗಿದೆ ಎಂದು ತಿಳಿಸಿದರು.

ಬಲಿಜ ಸಮಾಜದ ಯುವ ಮುಖಂಡ ಟಿ.ಎನ್.ವೆಂಕಟೇಶ ನಾಯ್ಡು, ಮೋದಿ ಅಭಿಮಾನಿ ಬಳಗ, ಜಿಪಂ ಮಾಜಿ ಅಧ್ಯಕ್ಷರು ಕೆ.ಆರ್.ದೃವಕುಮಾರ್, ಮಾಜಿ ಉಪಾಧ್ಯಕ್ಷ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್, ಶಂಬೈನೂರು ಆನಂದಪ್ಪ, ಮುಖಂಡರಾದ ಬೇಲೇನಹಳ್ಳಿ ಸೋಮಶೇಖರ್, ರೇಣುಕಪ್ಪ, ರಾಜಶೇಖರ್, ಕಾಂತರಾಜ್, ಶಿವಾನಂದ್, ಬಿಜೆಪಿ ಕಾರ್ಯಕರ್ತರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,9ಕೆಟಿಆರ್.ಕೆ.6ಃ

ನರೇಂದ್ರ ಮೋದಿ ದೇಶದ ಪ್ರಧಾನಿಗಳಾಗಿ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ತರೀಕೆರೆಯಲ್ಲಿ ಶ್ರೀ ಸಾಲುಮರದಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಾರತಾಂಬೆಗೆ ಕ್ಷೀರಾಭಿಷೇಕ, ಪಟಾಕಿ ಸಿಡಿಸಿ, ಸಿಹಿ ಹಂಚಿ ಶುಭ ಕೋರುವ ಸಮಾರಂಭದಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್ ಮತ್ತಿತರರು ಇದ್ದರು.