ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ನಾಡು-ನುಡಿ, ನೆಲ-ಜಲ ಗೌರವಿಸುವ ಕಾರ್ಯ ಮಾಡುತ್ತಾ ಬರುತ್ತಿದೆ

ಕುಷ್ಟಗಿ: ಸೀಮಂತ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಆಯೋಜಿಸುವ ಮೂಲಕ ತಾಲೂಕಿನ ಹನುಮಸಾಗರ ಪಟ್ಟಣದ ದಂಪತಿ ಭಾಗ್ಯಶ್ರೀ ಮುತ್ತಣ್ಣ ವಾಲಿಕಾರ ಸಾಹಿತ್ಯ ಪ್ರೇಮ ಮೆರೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕವಿಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್ತ ಸಹಯೋಗದಲ್ಲಿ ನಡೆಸಲಾಯಿತು. ಕವಿಗಳಾದ ಬಸವರಾಜ ಕನ್ನೂರ, ಮಲ್ಲಪ್ಪ ಲಂಗಟದ, ಬೀರಪ್ಪ ಕಡ್ಲಿಮಟ್ಟಿ, ಮಹಾಂತೇಶ ಗವಾರಿ, ನೀಲಮ್ಮ ಸೊಪ್ಪಿಮಠ, ಸಿಂಧೂರ ಲಕ್ಷಣ ವಾಲಿಕಾರ, ಬಸವರಾಜ ದಟ್ಟಿ, ಮುತ್ತಮ್ಮ ವಾಲಿಕಾರ, ದ್ಯಾಮಣ್ಣ ಹಟ್ಟಿ ಸೇರಿದಂತೆ ಹಲವಾರು ಜನ ಕವಿಗಳು ಕವನಗಳನ್ನು ವಾಚಿಸಿದರು. ಕಸಾಪದಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ನಾಡು-ನುಡಿ, ನೆಲ-ಜಲ ಗೌರವಿಸುವ ಕಾರ್ಯ ಮಾಡುತ್ತಾ ಬರುತ್ತಿದೆ ಎಂದ ಅವರು ಮದುವೆ, ಸೀಮಂತ ಕಾರ್ಯಕ್ರಮ, ಮಗುವಿನ ನಾಮಕರಣ ಇಂತಹ ಸಂದರ್ಭಗಳಲ್ಲಿ ಕಸಾಪ ಪದಾಧಿಕಾರಿಗಳನ್ನು ಸಂಪರ್ಕಿಸಿ ಕಾರ್ಯಕ್ರಮ ಆಯೋಜಿಸಲು ಕೇಳಿದರೆ ಕಸಾಪದಿಂದ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ, ಕೋಶಾಧ್ಯಕ್ಷ ಅಬ್ದುಲ್ ಕರೀಂ ವಂಟೆಳಿ, ಸಿದ್ದಪ್ಪ ಹಕ್ಕಿ, ತಿಮ್ಮನಗೌಡ ಪೊಲೀಸ್ ಪಾಟೀಲ್, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಬಸವರಾಜ ದ್ಯಾವಣ್ಣವರ, ಡಾ.ಬಸವರಾಜ ಹಕ್ಕಿ,ರಿಯಾಜ್ ಖಾಜಿ, ಹನಮಸಾಗರ ಹೋಬಳಿ ಕಸಾಪ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ದೋಟಿಹಾಳ ಹೋಬಳಿ ಕಸಾಪ ಅಧ್ಯಕ್ಷ ನಿಂಗಪ್ಪ ಸಜ್ಜನ, ಶರಣಪ್ಪ ಗುಳೇದ, ಅಮರೇಶ ತಮ್ಮಣ್ಣವರ, ಈರಣ್ಣ ಪರಸಾಪೂರ, ರಜಾಕ್ ಟೇಲರ್, ಗ್ಯಾನಪ್ಪ ತಳವಾರ, ರೇಣುಕಾ ಪುರದ, ಪತ್ರಕರ್ತರ ಸಂಘದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ,ಪರಶಿವಮೂರ್ತಿ ಮಾಟಲದಿನ್ನಿ, ಮಾರುತಿ ಕುಷ್ಟಗಿ, ಗೌರವ ಕಾರ್ಯದರ್ಶಿ ಶರಣಪ್ಪ ಲೈನದ, ದೇವರಾಜ ವಿಶ್ವಕರ್ಮ, ಏಕನಾಥ ಮೇದಿಕೇರಿ, ಶಿವರಾಜ ಬಂಡಿಹಾಳ, ವಸಂತ ಸಿನ್ನೂರ, ಮುತ್ತು ಗ್ವಾತಗಿ, ಅಲ್ಪಾಜ್ ಕಲಾಲಬಂಡಿ ವಾಲಿಕಾರ ಸೇರಿದಂತೆ ಅನೇಕರು ಇದ್ದರು.