ಶಿಗ್ಗಾಂವಿ ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ನೀಡಲಾಯಿತು.

ಶಿಗ್ಗಾಂವಿ: ಯುವ ಮನಸುಗಳು ಸಮಾಜವನ್ನು ಸನ್ಮಾರ್ಗದ ಕಡೆಗೆ ತೆಗೆದುಕೊಂಡು ಹೋಗಲು ಕವಿಗೋಷ್ಠಿಗಳು ಹೆಚ್ಚು ಪ್ರಯೋಜನವಾಗಲಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಲಿಂಗಯ್ಯ ಎ. ಹಿರೇಮಠ ಹೇಳಿದರು.

ನಗರದಲ್ಲಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಐಕ್ಯೂಎ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಸಂಘ ಏರ್ಪಡಿಸಿದ ರಾಜ್ಯಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಹೊಸತಾರೆಗಳು - ೨೦೨೬ ಎಂಬ ಪುಸ್ತಕ ಬಿಡುಗಡೆಗೊಳಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ. ಬಿ.ವೈ. ತೊಂಡಿಹಾಳ್, ಕನ್ನಡ ಭಾಷೆಯ ಗಟ್ಟಿತನಕ್ಕೆ ಕವಿಗೋಷ್ಠಿ ಸಹಕಾರಿ ಎಂದು ಹೇಳಿದರು. ಶ್ರೀ ಮನು ಗುರುಸ್ವಾಮಿ ಮಾತನಾಡಿದರು.

ಸಂಯೋಜನಾಧಿಕಾರಿ ಡಾ. ಎಚ್.ಕೆ. ವಿನಯ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಆರ್.ಸಿ. ದಾದುಗೌಡರ್, ಕವನಗಳ ಕುರಿತು ಅವಲೋಕನೆ ಮಾಡಿದರು. ಶ್ರೀ ರಂಭಾಪುರಿ ಪದವಿಪೂರ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಸಿದ್ದಲಿಂಗಸ್ವಾಮಿ ಕುಲಕರ್ಣಿ, ಯೋಧ ಹನುಮಂತು, ಶಿವಯೋಗಿ, ಸಂಘಟನಾ ಕಾರ್ಯದರ್ಶಿ ಸುರೇಶ ಹರಿಜನ್ ಭಾಗವಹಿಸಿದ್ದರು.

ಅನೇಕ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕವನ ವಾಚಿಸಿದರು. ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲರಿಗೂ ಪ್ರಶಸ್ತಿ ಪತ್ರ ಮತ್ತು ಹೊಸ ತಾರೆಗಳು ಎಂಬ ಪುಸ್ತಕ ವಿತರಿಸಲಾಯಿತು. ಡಾ. ಎಚ್.ಕೆ. ವಿನಯ್ ಕಾರ್ಯಕ್ರಮ ನಿರ್ವಹಿಸಿದರು. ಅಂಜಲಿ ಡವಗಿ ಉಪನ್ಯಾಸಕಿ ಚಾಂದ್ ಬಿಬಿ ನದಾಫ್ ಕಾರ್ಯಕ್ರಮ ನಿರ್ವಹಿಸಿದರು.