ಸ್ವತಂತ್ರವಾದ ವಿಚಾರ ಹಂಚಿಕೊಳ್ಳುವುದು ಕವಿತೆ

| Published : Dec 17 2023, 01:45 AM IST

ಸಾರಾಂಶ

ಪ್ರೀತಿ ಪ್ರೇಮ, ವಿರಹ ಏಕಾಂತದಲ್ಲಿ ಕವಿತೆ ಸ್ವರೂಪ ಪಡೆಯುತ್ತದೆ. ಅನುಭವ ಅನುಮಾನವಾಗಿರುವಾಗ ಅದರ ಕುರಿತು ಬರೆಯುವುದು, ಒಬ್ಬ ಕವಿ ಸ್ವತಂತ್ರವಾದ ವಿಚಾರ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುವುದು ಕವಿತೆ. ಅನುಭವ ಜನ್ಯ ಕವಿತೆ ರೂಪಿಸಬೇಕು. ಬಿಚ್ಚಿಟ್ಟ ಕವಿತೆ ಬರೆಯಬೇಕು, ಸಾಮಾಜಿಕ ವ್ಯವಸ್ಥೆ ಕುರಿತು ಬರೆಯಬೇಕು

ಕನ್ನಡಪ್ರಭ ವಾರ್ತೆ ಹಾವೇರಿ

ಇಲ್ಲಿನ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕಲಾಸ್ಪಂದನ ಹಾವೇರಿ, ಸಿರಿಗನ್ನಡ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಕರ್ನಾಟಕ ಸಂಭ್ರಮ ೫೦ರ ನಿಮಿತ್ತ ಕವಿಗೋಷ್ಠಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಪ್ರೀತಿ ಪ್ರೇಮ, ವಿರಹ ಏಕಾಂತದಲ್ಲಿ ಕವಿತೆ ಸ್ವರೂಪ ಪಡೆಯುತ್ತದೆ. ಅನುಭವ ಅನುಮಾನವಾಗಿರುವಾಗ ಅದರ ಕುರಿತು ಬರೆಯುವುದು, ಒಬ್ಬ ಕವಿ ಸ್ವತಂತ್ರವಾದ ವಿಚಾರ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುವುದು ಕವಿತೆ. ಅನುಭವ ಜನ್ಯ ಕವಿತೆ ರೂಪಿಸಬೇಕು. ಬಿಚ್ಚಿಟ್ಟ ಕವಿತೆ ಬರೆಯಬೇಕು, ಸಾಮಾಜಿಕ ವ್ಯವಸ್ಥೆ ಕುರಿತು ಬರೆಯಬೇಕು ಎಂದು ಹೇಳಿ ಅವರ ಹಲವು ಕವಿತೆಗಳನ್ನು ಓದಿ ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಅಧ್ಯಕ್ಷತೆಯನ್ನು ಪಪೂ ಪ್ರಾಚಾರ್ಯ ಡಾ. ಜೆ.ಆರ್. ಶಿಂಧೆ ವಹಿಸಿದ್ದರು. ಸುಮಾರು ೩೫ ಜನ ವಿದ್ಯಾರ್ಥಿಗಳು ಕವಿತೆ ವಾಚಿಸಿದರು. ಅತ್ಯುತ್ತಮ ಕವಿತೆಯನ್ನು ಕುಮಾರ ಮಣಿಕಂಠ ಗೊದಮನಿ, ರೇಣುಕಾ ಸನದಿ, ವನಜಾಕ್ಷಿ ಎಂ., ಜಾಸ್ಮಿನ್ ನದಾಫ್, ದಾನೇಶ್ವರಿ ಶಿಗ್ಗಾವಿ ಕವನ ವಾಚಿಸಿ ಅತ್ಯುತ್ತಮ ಪ್ರಮಾಣ ಪತ್ರ ಪಡೆದರು.

ಡಾ. ಸಂಜೀವ ನಾಯಕ ಡಾ. ಎಂ.ಪಿ. ಕಣವಿ, ಪ್ರೊ. ಮಹೇಶ ಬೆಂಡಿಗೇರಿ, ಜಗದೀಶ ಎಂ.ಕೆ., ಪ್ರೊ. ಶೇಖರ ಭಜಂತ್ರಿ, ಪ್ರೊ. ಬಸವರಾಜ ಹೊಂಗಲ, ಗ್ರಂಥಪಾಲಕ ಡಾ. ಆತ್ಮಾನಂದ ಹೊಳೆಯಣ್ಣವರ, ಪ್ರೊ. ಹೇಮಂತಕುಮಾರ, ಪ್ರೊ. ಸಿ.ಎಫ್. ಬಾಳೇಶ್ವರಮಠ, ಗಂಗಾಧರ ಹಿರೇಮಠ ಇತರರಿದ್ದರು.

ರಾಧಾ ಪ್ರಾರ್ಥಿಸಿದರು. ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರೀತಿ ಶಿಗ್ಲಿ ಪರಿಚಯಿಸಿದರು. ಪ್ರವೀಣಕುಮಾರ ಮರಳಿಹಳ್ಳಿ ಸ್ವಾಗತಿಸಿದರು. ನಂದಾ ವಂದಿಸಿದರು. ಮಣಿಕಂಠ ಗೊದಮನಿ ನಿರ್ವಹಿಸಿದರು.