ವ್ಯಕ್ತಿಯ ಆಡು ಭಾಷೆಯಿಂದಲೇ ಕವಿತ್ವ ಸೃಷ್ಟಿಯಾಗಲಿದೆ ಎಂದು ಎಚ್‌ಕೆ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ ತಿಳಿಸಿದರು

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ವ್ಯಕ್ತಿಯ ಆಡು ಭಾಷೆಯಿಂದಲೇ ಕವಿತ್ವ ಸೃಷ್ಟಿಯಾಗಲಿದೆ ಎಂದು ಎಚ್‌ಕೆ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ ತಿಳಿಸಿದರು.

ಪಟ್ಟಣದ ಅರುಣಾಚಲೇಶ್ವರ ಸಭಾಂಗಣದಲ್ಲಿ ನಡೆದ ಕವಿಯತ್ರಿ ಕಾತ್ಯಾಯಿನಿ ಅವರ ವಿರಚಿತ ಎರಡನೇ ಕೃತಿಯಾದ ಊರುಗೋಲು ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಕವಿಗೆ ಬರವಣಿಗೆಯ ಹಸಿವಿರಬೇಕು, ಹಾಗಾದಾಗ ಮಾತ್ರ ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ, ಊರುಗೋಲು ಕವನ ಸಂಕಲನ ಯಶಸ್ವಿಯಾಗಲಿ ಎಂದರು.

ಸಾಹಿತ್ಯ ಮಿತ್ರಕೂಟದ ನಿಕಟಪೂರ್ವ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ಮಾತನಾಡಿ, ಸಾಹಿತ್ಯವೆಂಬುದು ವಿರಾಟರೂಪವಿದ್ದಂತೆ, ಇಂದಿನ ಕಾತ್ಯಾಯಿನಿ ಅವರು ಹೊರತಂದಿರುವ ಕವನ ಸಂಕಲನ ಹೆಚ್ಚು ಖ್ಯಾತಿ ಪಡೆದು, ಹೆಚ್ಚು ಓದುಗರರನ್ನು ಆಕರ್ಷಿಸುವಂತಾಗಲಿ ಎಂದರು.

ಹಿರಿಯ ಶಿಕ್ಷಕ ಚನ್ನಮಾದೇಗೌಡರು ಮಾತನಾಡಿ, ಮಿತ್ರಕೂಟ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ

ಕೆಲಸ ಹೆಚ್ಚು ಹೆಚ್ಚು ಆಗಲಿ, ಏಕಾಗ್ರತೆಯಿಂದ ಸಾಹಿತ್ಯ ಅಭಿವೃದ್ದಿಯ ಕಡೆಗೆ ಒತ್ತು ನೀಡಿದಾಗ ಮಾತ್ರ

ನವ ಸಾಹಿತ್ಯ ಉದಯವಾಗಲಿ ಸಾಧ್ಯ ಎಂದು ಹೇಳಿದರು.ಸಾಹಿತ್ಯಮಿತ್ರಕೂಟದ ಸಂಸ್ಥಾಪಕ ಅಧ್ಯಕ್ಷ ದೊಡ್ಡಲಿಂಗೇಗೌಡರು, ಸತೀಶ್, ಬಾಳಗುಣಸೆ ಮಂಜುನಾಥ್, ಮುಖ್ಯಶಿಕ್ಷಕ ಶಂಕರ್, ರಿಜಾಯತ್ ಅಲಿ, ಸ್ವರ್ಣಲತಾ ಇನ್ನಿತರಿದ್ದರು.