ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಬೆಟ್ಟ ಕೂರ್ಗ್ ವೆಲ್ನೆಸ್ ಫೌಂಡೇಶನ್ ಹಾಗೂ ಖ್ಯಾತ ನಟ, ಕ್ರೀಡಾಪಟು ಮಿಲಿಂದ್ ಸೋಮನ್ ಸಹಯೋಗದಲ್ಲಿ ಡಿಸೆಂಬರ್ 6ರಂದು ಹತ್ತನೇ ವರ್ಷದ ಬರಿಗಾಲಿನ ಮ್ಯಾರಥಾನ್ ಆಯೋಜಿಸಲಾಗಿದೆ.
ಸಿದ್ದಾಪುರ : ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಬೆಟ್ಟ ಕೂರ್ಗ್ ವೆಲ್ನೆಸ್ ಫೌಂಡೇಶನ್ ಹಾಗೂ ಖ್ಯಾತ ನಟ, ಕ್ರೀಡಾಪಟು ಮಿಲಿಂದ್ ಸೋಮನ್ ಸಹಯೋಗದಲ್ಲಿ ಡಿಸೆಂಬರ್ 6ರಂದು ಹತ್ತನೇ ವರ್ಷದ ಬರಿಗಾಲಿನ ಮ್ಯಾರಥಾನ್ ಆಯೋಜಿಸಲಾಗಿದೆ.
ಪಾಲಿಬೆಟ್ಟದ ಟಾಟಾ ಸಂಸ್ಥೆಯ ಮೈದಾನದಲ್ಲಿ ನಡೆಯಲಿರುವ ಮ್ಯಾರಥಾನ್ಗೆ ಸಿದ್ಧತೆಗಳು ಆರಂಭಗೊಂಡಿವೆ ಎಂದು ಫೌಂಡೇಶನ್ ಸ್ಥಾಪಕಿ ಚೆಪ್ಪುಡಿರ ನಿಖಿ ಪೊನ್ನಪ್ಪ ತಿಳಿಸಿದ್ದಾರೆ.ಕೊಡಗು ಜಿಲ್ಲೆಯ ಸ್ಪರ್ಧಿಗಳಲ್ಲದೆ ಮುಂಬೈ, ಕೋಲ್ಕತ್ತಾ, ದೆಹಲಿ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ತಾಯ್ನಾಡು ಹಾಗೂ ಆರೋಗ್ಯದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸ್ಪರ್ಧೆಯ ಉದ್ದೇಶವಾಗಿದೆ. ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಮಿಲಿಂದ್ ಸೋಮನ್ ಮ್ಯಾರಥಾನ್ಗೆ ಚಾಲನೆ ನೀಡಲಿದ್ದಾರೆ.42 ಕಿ.ಮೀ ಓಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಥಮ ಬಹುಮಾನ ತಲಾ ₹33 ಸಾವಿರ ಹಾಗೂ ದ್ವಿತೀಯ ₹15 ಸಾವಿರ, 21 ಕಿ.ಮೀ ಓಟದಲ್ಲಿ ಪ್ರಥಮ ₹13 ಸಾವಿರ ಹಾಗೂ ದ್ವಿತೀಯ ₹8 ಸಾವಿರ, 10 ಕಿ.ಮೀ ಓಟದಲ್ಲಿ ಪ್ರಥಮ ₹6 ಸಾವಿರ ಹಾಗೂ ದ್ವಿತೀಯ ₹4 ಸಾವಿರ ಬಹುಮಾನ ನೀಡಲಾಗುತ್ತದೆ. 5 ಕಿ.ಮೀ ಓಟದಲ್ಲಿ ಪ್ರಥಮ ₹3,500 ಹಾಗೂ ದ್ವಿತೀಯ ₹2 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ. ಹಿರಿಯ ನಾಗರಿಕರ ವಿಭಾಗದ 21 ಕಿ.ಮೀ ಓಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಲಾ ₹10 ಸಾವಿರ ಹಾಗೂ 10 ಕಿ.ಮೀ ಓಟದಲ್ಲಿ ತಲಾ ₹5 ಸಾವಿರ ಬಹುಮಾನ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ 9845559452 ಸಂಪರ್ಕಿಸಬಹುದು ಎಂದು ನಿಖಿ ಪೊನ್ನಪ್ಪ ತಿಳಿಸಿದ್ದಾರೆ.
