ಸಾರಾಂಶ
ಬೆಂಗಳೂರು : ಇಂದಿನಿಂದ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ನೂತನ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳ ಕಲಂಗಳ ಅಡಿಯಲ್ಲಿ ಎಫ್ಐಆರ್‌ಗಳು ದಾಖಲಾಗಲಿವೆ.
ದೇಶದಾದ್ಯಂತ ಹೊಸ ಕಾಯ್ದೆಗಳು ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ರಾಜ್ಯದ ಪೊಲೀಸರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ಹೊಸ ಕಾಯ್ದೆಗಳು ಹಾಗೂ ಕಲಂಗಳ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ.
ರಾಜ್ಯವ್ಯಾಪಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ತರಬೇತಿ ಶಿಬಿರಗಳು, ಕಾನೂನು ತಜ್ಞರೊಂದಿಗೆ ಸಂವಾದ ಏರ್ಪಡಿಸಿ ಅರಿವು ಮೂಡಿಸಲಾಗಿದೆ. ಹೊಸ ಕಾಯ್ದೆಗಳ ಬಗ್ಗೆ ಕನ್ನಡದಲ್ಲಿ ಕೈಪಿಡಿ ಮುದ್ರಿಸಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ.
ಹೀಗಾಗಿ ಇಂದಿನಿಂದ ರಾಜ್ಯದ ಪೊಲೀಸ್ ಠಾಣೆಗಳಿಗೆ ಬರುವ ದೂರುಗಳ ಸಂಬಂಧ ಪೊಲೀಸರು ಹೊಸ ಕಾಯ್ದೆಗಳ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಿದ್ದಾರೆ. ಬಳಿಕ ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಗಳಿಗೆ ದೋಷಾರೋಪಪಟ್ಟಿ ಸಲ್ಲಿಸಲ್ಲಿದ್ದಾರೆ.
ಗೊಂದಲಕ್ಕೆ ಎಡೆಮಾಡದಂತೆ ಸೂಚನೆ: ಈ ಹೊಸ ಕಾಯ್ದೆಗಳ ಅನುಷ್ಠಾನ ಸಂಬಂಧ ಕಳೆದ ಒಂದು ತಿಂಗಳಿಂದ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಹಂತದಿಂದ ಡಿಸಿಪಿ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಹಂತ ಹಂತವಾಗಿ ತರಬೇತಿ ನೀಡಲಾಗಿದೆ. ಹೊಸ ಕಾಯ್ದೆಗಳ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಾಗ ಬಹಳ ಎಚ್ಚರವಹಿಸಬೇಕು. ಕಲಂಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಎಫ್‌ಐಆರ್‌ಗಳಲ್ಲಿ ಸೇರ್ಪಡೆ ಮಾಡಬೇಕು.
ಯಾವುದೇ ಕಾರಣಕ್ಕೂ ಎಫ್‌ಐಆರ್ ದಾಖಲಿಸುವಾಗ ಗೊಂದಲಕ್ಕೆ ಎಡೆಮಾಡಿಕೊಡಬಾರದು. ಒಂದು ವೇಳೆ ಗೊಂದಲ ಉಂಟಾದರೆ ಇಡೀ ಇಲಾಖೆಗೆ ಮುಜುಗರವಾಗುತ್ತದೆ. ನ್ಯಾಯಾಲಯಗಳಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ. ಹೀಗಾಗಿ ಹೊಸ ಕಾಯ್ದೆಗಳ ಬಗ್ಗೆ ತಿಳಿದುಕೊಂಡು ಬಹಳ ಎಚ್ಚರಿಕೆಯಿಂದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇಂದಿನಿಂದ ಭಾರತೀಯ ದಂಡ ಸಂಹಿತೆ(ಐಪಿಸಿ) ಕಲಂಗಳ ಬದಲಾಗಿ ನೂತನ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಕಲಂಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಲಿವೆ. ಅಂತೆಯೆ ಅಪರಾಧ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲಾಗಿ ಭಾರತೀಯ ಸಾಕ್ಷ್ಯ ಅಧಿನಿಯಮದಡಿ ಎಫ್‌ಐಆರ್‌ಗಳು ದಾಖಲಾಗಲಿವೆ.
ಬದಲಾದ ಪ್ರಮುಖ ಸೆಕ್ಷನ್‌ಗಳುಐಪಿಸಿ ಸೆಕ್ಷನ್ ಸೆಕ್ಷನ್ ವಿವರಣೆ ಬಿಎನ್ಎಸ್ ಸೆಕ್ಷನ್302 ಕೊಲೆಗೆ ದಂಡನೆ 103304(ಎ) ನಿರ್ಲಕ್ಷ್ಯದಿಂದ ಮರಣ ಉಂಟುಮಾಡುವುದು 106304(ಬಿ) ವಧು-ವರದಕ್ಷಿಣೆ ಮರಣ 80306 ಆತ್ಮಹತ್ಯೆಗೆ ಪ್ರೇರಣೆ 108307 ಕೊಲೆಗೆ ಯತ್ನ 109309 ಆತ್ಮಹತ್ಯೆ ಪ್ರಯತ್ನ 226294 ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು 296509 ಮಹಿಳೆ ಮಾನಕ್ಕೆ ಕುಂದು 79353 ಸಾರ್ವಜನಿಕ ನೌಕರರ ಕರ್ತವ್ಯಕ್ಕೆ ಅಡ್ಡಿ 121354 ಮಹಿಳೆ ಮಾನಭಂಗಕ್ಕೆ ಯತ್ನ 74354(ಎ) ಲೈಂಗಿಕ ಕಿರುಕುಳ 75376 ಬಲವಂತದ ಸಂಭೋಗ 64392 ಸುಲಿಗೆ 309420 ವಂಚನೆ 318445 ಮನೆಗಳವು 330