ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಅವರ ಪ್ರಮಾಣ ವಚನ ಸಮಾರಂಭದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಲೋಕಭವನ ಸುತ್ತಮುತ್ತ ಬುಧವಾರ ನಗರ ಪೊಲೀಸ್ ಆಯುಕ್ತರ ಖುದ್ದು ಸಾರಥ್ಯದಲ್ಲಿ 2,500ಕ್ಕೂ ಹೆಚ್ಚಿನ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೇ, ಲೋಕಭವನ ಪ್ರದೇಶದಲ್ಲಿ ಡ್ರೋನ್ ಹಾರಾಟ ನಿಷೇಧೀಸಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಸಮಾರಂಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹೀಗಾಗಿ ಲೋಕಭವನ ನಡೆಯಲಿರುವ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಸೀಮಂತ್ ಕುಮಾರ್ ಅವರು ಬಂದೋಬಸ್ತ್‌ನ ಮುಂದಾಳತ್ವ ವಹಿಸಿದ್ದಾರೆ.
ಲೋಕಭವನ ಸುತ್ತಮುತ್ತ ಆಯುಕ್ತರ ಸಾರಥ್ಯದಲ್ಲಿ ಮೂವರು ಜಂಟಿ ಆಯುಕ್ತರು. 9 ಡಿಸಿಪಿಗಳು ,25 ಎಸಿಪಿಗಳು ,60 ಇನ್ಸ್ ಪೆಕ್ಟರ್‌ಗಳು, 160 ಸಬ್ ಇನ್ಸ್‌ಪೆಕ್ಟರ್‌ಗಳು, ಕೆಎಸ್‌ಆರ್‌ಪಿ ಸೇರಿದಂತೆ ಸುಮಾರು 2,500 ಸಾವಿರ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಭದ್ರತೆಗೆ ಸಕಲ ತಯಾರಿ ನಡೆದಿದ್ದು, ಲೋಕಭವನಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಹಾಗೂ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಿಟಿಓ ವೃತ್ತಕ್ಕೆ ಮೆರವಣಿಗೆ ನಿರ್ಬಂಧ:
ಪ್ರಮಾಣ ವಚನ ಸಮಾರಂಭಕ್ಕೆ ನಗರ ಹಾಗೂ ಹೊರ ಜಿಲ್ಲೆಗಳಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಅಲ್ಲದೆ ಕೆಲವರು ನಗರದ ವಿವಿಧ ಭಾಗಗಳಿಂದ ಮೆರವಣಿಗೆ ಮೂಲಕ ಬರಲಿದ್ದಾರೆ. ಆದರೆ ಪ್ರಧಾನ ಅಂಚೆ ಕಚೇರಿ ವೃತ್ತದಲ್ಲೇ ಮೆರವಣಿಗೆ ನಿರ್ಬಂಧಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಯಾವುದೇ ಪ್ರತಿಭಟನಾಕಾರರು, ಮೆರವಣಿಗೆಕಾರರು, ಅನಧಿಕೃತ ವ್ಯಕ್ತಿಗಳು ವಿಧಾನಸೌಧದ ಕಡೆ ನುಗ್ಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಕಡ್ಡಾಯ ಕ್ಯಾಮೆರಾ-ರಿವಾಲ್ವಾರ್ ಹೊಂದಿರಬೇಕು:ಭದ್ರತೆಗೆ ನಿಯೋಜನೆಗೊಂಡಿರುವ ಇನ್ಸ್‌ಪೆಕ್ಟರ್‌ಗಳು, ತಮ್ಮ ಜತೆ ಓರ್ವ ಸಿಬ್ಬಂದಿಯನ್ನು ಕ್ಯಾಮೆರಾದೊಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ ಬೆಳಗ್ಗೆ 10 ಗಂಟೆಗೆ ಬಂದೋಬಸ್ತ್ ನಿಯುಕ್ತಿಗೊಂಡ ಅಧಿಕಾರಿ-ಸಿಬ್ಬಂದಿ ವಿಧಾನಸೌಧ ಗೇಟ್-2ರಲ್ಲಿ ಜಮಾವಣೆಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.
ಇನ್ನು ಎಲ್ಲಾ ಎಎಸ್‌ಐ ಮೇಲ್ಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ವಾಕಿ-ಟಾಕಿ, ಮಳೆಯ ಸಂಭವವಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ರೇನ್‌ಕೋಟ್ ಮತ್ತು ಛತ್ರಿ, ರಿವಾಲ್ವಾರ್, ಲಾಠಿ ಹಾಗೂ ಹೆಲ್ಮೆಟ್ ಹೊಂದಿರಬೇಕು ಎಂದು ಹೇಳಿದ್ದಾರೆ.ಪೊಲೀಸರಿಗೆ ಮೊಬೈಲ್ ಬಳಕೆ ನಿಷೇಧ
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪಿಎಸ್‌ಐ, ಹೆಡ್ ಕಾನ್‌ಸ್ಟೇಬಲ್ ಹಾಗೂ ಎಎಸ್‌ಐ ಅವರಿಗೆ ಮೊಬೈಲ್ ಬಳಕೆಯನ್ನು ಆಯುಕ್ತರು ನಿಷೇಧಿಸಿದ್ದಾರೆ.ಪಾಸ್ ಇದ್ದವರಿಗೆ ಮಾತ್ರ ಪ್ರವೇಶ
ಪ್ರಮಾಣ ವಚನ ಸಮಾರಂಭಕ್ಕೆ ಅತಿಗಣ್ಯವ್ಯಕ್ತಿಗಳು ಭಾಗವಹಿಸುವ ಸಾಧ್ಯತೆ ಹಿನ್ನಲೆಯಲ್ಲಿ ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶವಿದ್ದು ಸಾರ್ವಜನಿಕರು ಪ್ರವೇಶಿಸಲು ಅವಕಾಶವಿರುವುದಿಲ್ಲ.ಸಂಚಾರ ವ್ಯವಸ್ಥೆ ಬದಲಾವಣೆ
ಪ್ರಮಾಣ ವಚನ ಕಾರ್ಯಕ್ರಮ ಹಿನ್ನಲೆಯಲ್ಲಿ ಲೋಕಭವನ ಸುತ್ತಮುತ್ತ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಬುಧವಾರ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆವರೆಗೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಕೋರಿದ್ದಾರೆ.ಸಂಚಾರ ನಿರ್ಬಂಧ:
-ಕಬ್ಬನ್‌ರಸ್ತೆಯ ಸಿಟಿಓ ಜಂಕ್ಷನ್‌ವರೆಗೆ ಹಾಗೂ ಸಿಟಿಒ ವೃತ್ತದಿಂದ ಲೋಕಭವನದವರೆಗೆ-ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ
-ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಕೆಆರ್ ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್-ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್ನಿನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ
-ಕ್ವೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓಪರ್ಯಾಯ ಮಾರ್ಗಗಳು:
-ಬಿಆರ್‌ವಿ ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಹಾಗೂ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡತಿರುವು ಪಡೆದು ಸಂಚರಿಸಬೇಕು.-ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆಯ ಮುಖಾಂತರ ಸಾಗಬೇಕು
-ನೃಪತುಂಗ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.-ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ.ರಸ್ತೆ
ವಾಹನಗಳ ನಿಲುಗಡೆ ನಿಷೇಧ:-ಡಾ:ಬಿ.ಆರ್.ಅಂಬೇಡ್ಕರ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತದವರೆಗೆ ರಸ್ತೆಯ ಎರಡು ಬದಿಗಳು,
-ಲೋಕಭವನ ರಸ್ತೆ ಬಿ.ಆರ್.ವಿ ವೃತ್ತದಿಂದ ಲೋಕಭವನ ಜಂಕ್ಷನ್‌ವರೆಗೆ-ಎಲ್.ಹೆಚ್.ರಸ್ತೆ, ಲೋಕಭವನ ಜಂಕ್ಷನ್‌ನಿಂದ ಚಾಲುಕ್ಯ ವೃತ್ತದವರೆಗೆ-ಕ್ರೀನ್ಸ್ ರಸ್ತೆ, ಬಾಳೇಕುಂದ್ರಿ ಜಂಕ್ಷನ್‌ನಿಂದ ಕೀನ್ಸ್ ವೃತ್ತದ ವರೆಗೆ-ಪ್ಯಾಲೇಸ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಕೆಳಸೇತುವೆ ವರೆಗೆ-ದೇವರಾಜ ಅರಸ್ ರಸ್ತೆ, ಚಾಲುಕ್ಯ ವೃತ್ತದಿಂದ ಎಂ.ಎಸ್.ಬಿಲ್ಡಿಂಗ್‌ವರೆಗೆ (ಒಳಭಾಗದ ರಸ್ತೆ, ಸೇರಿ)-ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಚಾಲುಕ್ಯ ವೃತ್ತದವರೆಗೆ-ಪಾರ್ಕ್ ಹೌಸ್ ರಸ್ತೆ, ಎ.ಜಿ.ಎಸ್. ಜಂಕ್ಷನ್ ನಿಂದ ಸಿ.ಐ.ಡಿ. ವೃತ್ತದವರೆಗೆ-ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು-ಮಿಲ್ಲರ್ ರಸ್ತೆ, ಎಲ್.ಆರ್.ಡಿ.ಇ. ಜಂಕ್ಷನ್ ನಿಂದ ಬಸವೇಶ್ವರ ವೃತ್ತದವರೆಗೆ-ಇನ್‌ಫೆಂಟ್ರಿ ರಸ್ತೆ ಅಲಿ ಆಸ್ಕರ್ ರಸ್ತೆ, ಜಂಕ್ಷನ್ ನಿಂದ ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ ವರೆಗೆ-ಅಲಿ ಆಸ್ಕರ್ ರಸ್ತೆ, ರಾಜಭವನ ಜಂಕ್ಷನ್ ನಿಂದ ಅಲಿ ಆಸ್ಕರ್ ಕ್ರಾಸ್‌ವರೆಗೆ-ಹಳೇ ಅಂಚೆ ಕಛೇರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ-ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್ ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ-ನೃಪತುಂಗ ರಸ್ತೆ, ಕೆ.ಆರ್.ವೃತ್ತದಿಂದ ಪೊಲೀಸ್ ಕಾರ್ನರ್‌ವರೆಗೆ
ವಾಹನಗಳ ನಿಲುಗಡೆ :-ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿರುವ ವಾಹನಗಳು :-ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್ ಸ್ಥಳ ಹಾಗೂ ವಿಕಾಸಸೌಧದ ಸುತ್ತಮುತ್ತ-ರಾಜಭವನ ಹಿಂಭಾಗದ ಎಲ್.ಹೆಚ್. ವಾಹನ ನಿಲುಗಡೆ ಸ್ಥಳ.-ನೆಹರೂ ತಾರಾಲಯದ ಆವರಣಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿಲ್ಲದ ವಾಹನಗಳು :-ಕೊಂಡಜ್ಜಿ ಭವನ ಅವರಣ, ಶಿವಾಜಿನಗರ ಬಸ್‌ನಿಲ್ಯಾಣದ ಮೇಲ್ಮಾಗದ ಮಲೆವೆಲ್ ಪಾರ್ಕಿಂಗ್ ಸ್ಥಳ
-ಕಂಠೀರವ ಕ್ರೀಡಾಂಗಣ, ಯು.ಬಿ. ಸಿಟಿ ಪಾರ್ಕಿಂಗ್ ಸ್ಥಳ,-ಸರ್ಕಾರಿ ಕಲಾ ಕಾಲೇಜು ಆವರಣ-ಕಾರ್ಪೋರೇಷನ್ ಕಛೇರಿ ಸ್ಥಳ-ಪ್ಯಾಲೇಸ್ ಮೈದಾನದ ಗೇಟ್ ನಂ.2, 3 ಮತ್ತು 4 ರಲ್ಲಿ
ಭಾರಿ ವಾಹನಗಳಿಗೆ ನಗರ ಪ್ರವೇಶ ನಿಷೇಧ:ಪ್ರಮಾಣ ವಚನ ಕಾರ್ಯಕ್ರಮ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಪ್ರದೇಶದಲ್ಲಿ ಭಾರೀ ವಾಹನಗಳ ಸಂಚಾರವನ್ನು ಬುಧವಾರ ಮಧ್ಯಾಹ್ನ 12 ರಿಂದ ರಾತ್ರಿ 10:00 ಗಂಟೆಯವರೆಗೆ ನಿಷೇಧಿಸಲಾಗಿದೆ.
ಪಾಸ್ ಹೊಂದಿದವರಿಗೆ ಸಲಹೆ:ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವವರಿಗೆ ಪೊಲೀಸರು ಕೆಲ ಸೂಚನೆ ನೀಡಿದ್ದಾರೆ.-ಪಾಸ್ ಹೊಂದಿರುವವರು ಮಾತ್ರ ಲೋಕಭವನಕ್ಕೆ ಪ್ರವೇಶಿಸಲು ಅವಕಾಶ. ಪ್ರತಿ ಪಾಸ್‌ಗೆ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ.
-ಪಾಸ್ ಹೊಂದಿರುವವರು ಕಡ್ಡಾಯವಾಗಿ ಮಧ್ಯಾಹ್ನ 2 ಗಂಟೆಯೊಳಗೆ ಲೋಕಭವನದ ಗಾಜಿನ ಮನೆಯಲ್ಲಿ ಆಸೀನರಾಗಬೇಕು.-ಲೋಕಭವನಕ್ಕೆ ಗೋಪಾಲಗೌಡ ವೃತ್ತದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ಮುಖಾಂತರ ಆಗಮಿಸಬೇಕು-ಈ ಕಾರ್ಯಕ್ರಮಕ್ಕೆ ಆಹ್ವಾನ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಗೋಪಾಲಗೌಡ ವೃತ್ತವನ್ನು ದಾಟಿ ಮುಂದೆ ಹೋಗಲು ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ.-ಕಾರ್ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಪೊಲೀಸ್ ತಿಮ್ಮಯ್ಯ ವೃತ್ತವನ್ನು ದಾಟಿ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ.-ಪಾಸ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಂಡಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ.